ಉತ್ತಮ ನೀರಿಕ್ಷೆಗಳನ್ನು ಬೆಳೆಸಿಕೊಳ್ಳಿ: ಡಾ. ಚಿದಾನಂದ ಚಂದ್ರಕಾಂತ ಗವಿಮಠ

0
32

ಕಲಬುರಗಿ: ಪ್ರಯೋಗಾತ್ಮಕ ಮನೋಭಾವ, ಅನುಭವ ಹಾಗೂ ಉತ್ತಮ ನೀರಿಕ್ಷೆಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳಿ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಂಟರ್‌ಪ್ರೈನರ್ ಡೆವಲಪ್‌ಮೆಂಟ ಸೆಲ್‌ನ ವಿಶೇಷ ಅಧಿಕಾರಿಯಾದ ಡಾ. ಚಿದಾನಂದ ಚಂದ್ರಕಾಂತ ಗವಿಮಠ ಸಲಹೆ ನೀಡಿದರು.

ಶರಣಬಸವ ವಿಶ್ವವಿದ್ಯಾಲಯದ ಕಂಪ್ಯೂಟರ ಸೈನ್ಸ್ ವಿಭಾಗದಲ್ಲಿ ಅಪ್ಪಾ ಎಂಜನೀಯರ್ ಮತ್ತು ತಾಂತ್ರಿಕ ಶಿಕ್ಷಣ ಪದವಿ ಮಹಾವಿದ್ಯಾಲಯ ಹಾಗೂ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಂಟರ್‌ಪ್ರೈನರ್ ಡೆವಲಪ್‌ಮೆಂಟ ಸೆಲ್‌ನ ಸಹಯೋಗದಲ್ಲಿ ’ಎಂಟರ್‌ಪ್ರೈನರ್ ಡೆವಲಪ್‌ಮೆಂಟ್ ಪ್ರೋಗ್ರಾಮ್’ ’ಉದ್ಯಮಿ ಅಭಿವೃದ್ಧಿ ಕಾರ್ಯಕ್ರಮ’ ವಿಷಯದ ಕುರಿತು ಎರಡು ದಿನಗಳ ಕಾಲ ಆಯೋಜಿಸಿದ್ದ ಕಾರ್ಯಗಾರದಲ್ಲಿ ಮಂಗಳವಾರ ಮಾತನಾಡಿದ ಅವರು, ಉದ್ಯಮಗಳಲ್ಲಿ ಸಾಧನೆ ಮಾಡಿದವರೆಲ್ಲರು ಮಧ್ಯಮ ವರ್ಗದ ಕುಟುಂಬದವರೇ ಆಗಿದ್ದಾರೆ. ಉದ್ಯಮದ ಅಭಿವೃದ್ಧಿಗೆ ಬೇಕಾಗಿರುವುದು ಮಾಡಬೇಕೆನ್ನುವ ಮನಸ್ಸು, ಆಸಕ್ತಿ ಮತ್ತು ಪ್ರಯತ್ನ. ಉದ್ಯಮಗಳ ಉತ್ತೇಜನಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳ ಸದುಪಯೋಗ ಪಡೆದುಕೊಳ್ಳಿ ಎಂದರು.

Contact Your\'s Advertisement; 9902492681

ವಿದ್ಯಾರ್ಥಿಗಳು ಸಾಧನೆಯ ಪಥದಲ್ಲಿ ಸಾಗಬೇಕೆಂದರೆ ಹುರುಪು, ಛಲ ಮತ್ತು ಹುಮ್ಮಸ್ಸು ಮೈಗೂಡಿಸಿಕೊಳ್ಳಬೇಕು. ಎಲ್ಲವನ್ನೂ ಮೆಟ್ಟಿನಿಲ್ಲುವ ಸಾಮರ್ಥ, ತಾಳ್ಮೆ, ಕ್ರೀಯಾಶೀಲ ಪ್ರವೃತಿ ಬೆಳಸಿಕೊಳ್ಳಬೇಕು ಎಂದರು.

ಶರಣಬಸವ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ವಿ.ಡಿ ಮೈತ್ರಿ ಮಾತನಾಡಿ, ಮೆದುಳಿಗೆ ಹೆಚ್ಚಿನ ಕೆಲಸ ನೀಡಿ, ನಿಮ್ಮ ವರ್ತನೆಗಳಲ್ಲಿ ಬದಲಾವಣಿ ತಂದುಕೊಳ್ಳಿ ಆಗ ಮಾತ್ರ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ನಮ್ಮ ಸಂಸ್ಥೆಯ ಎಂಜನೀಯರ್ ಶಿಕ್ಷಣದಲ್ಲಿ ವಿದ್ಯಾರ್ಥಿನೀಯರೇ ಹೆಚ್ಚಾಗಿದ್ದಾರೆ ಹೀಗಾಗಿ ಮಹಿಳಾ ಉದ್ಯಮಿಗಳು ಇನ್ನೂ ಹೆಚ್ಚು ಹೊರಹೊಮ್ಮಬೇಕೆಂದು ಆಶಯಭಾವ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ಅಶ್ವಿನಿ ಸ್ವಾಗತಿಸಿದರು. ನಿರೂಪಿಸಿದರು. ವಿವಿ ಡೀನ್ ಡಾ. ಬಸವರಾಜ ಮಠಪತಿ, ಪ್ರೊ. ಶರಣಬಸವಪ್ಪ ಮಡಿವಾಳ, ಪ್ರೊ.ಶಿವಪ್ರಸಾದ ಬಿರಾದಾರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here