ಹೈ.ಕ.ಜ.ಸಂ.ಸಮಿತಿಯ ಕೋರಿಕೆಗೆ ಸ್ಪಂದಿಸಿ ಸೋಲಾಪುರ ಹಾಸನ ರೈಲು ಕಲಬುರಗಿಯಿಂದ ಓಡಿಸಲು ಒಪ್ಪಿಗೆ

0
135

ಕಲಬುರಗಿ: 17 ರಿಂದ 26 ವರೆಗೆ ಕಾಮಗಾರಿಗಳ ಕಾರಣ ನೀಡಿ 10 ದಿವಸ ಸೋಲಾಪುರ ಹಾಸನ ರೈಲು ರದ್ದು ಮಾಡಲಾಗಿತು, ಹೈದ್ರಾಬಾದ ಕರ್ನಾಟಕ ಜನಪರ ಸಂಫರ್ಷ ಸಮಿತಿಯ ಮನವಿಗೆ ಸ್ಪಂದಿಸಿದ ರೈಲ್ವೆ ಸೋಲಾಪುರ ವಿಭಾಗಿ ಅಧಿಕಾರಿ ಡಿವಿಜನಲ್ ಮ್ಯಾನೇಜರ್ ಶೈಲೇಶ ಗುಪ್ತಾ ಈ ವೇಳೆಯಲ್ಲಿ ಸೋಲಾಪುರ ಹಾಸನ್ ರೈಲು ಕಲಬುರಗಿಯಿಂದ ಓಡಿಸಲು ತೀರ್ಮಾನಿಸಿದೆ ಎಂದು ಸಂಘರ್ಷ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.

ಸಮಿತಿಯ ಮನವಿ ಗಂಭೀರವಾಗಿ ಪರಿಗಣಿಸಿ ಈ ರೈಲು ರದ್ದು ಮಾಡುವುದರಿಂದ ಕಲಬುರಗಿ ಜನರಿಗೆ ಆಗುವ ತೊಂದರೆ ಮತ್ತು ಜನರಿಗೆ ಹಣಕಾಸಿನ ಹೊರೆಯ ಬಗ್ಗೆ ವಿವರಿಸಿ ಸದರಿ 10ದಿನಗಳವರೆಗೆ ಕಲಬುರಗಿಯಿಂದ ಹಾಸನಗೆ ರೈಲು ನಡೆಸುಲು ಆಗ್ರಹಿಸಿ ಸಲ್ಲಿಸಿರುವ ಮನವಿಗೆ ಸ್ಪಂದಿಸಿ ಸದರಿ ರೇಲು ಕಲಬುರಗಿಯಿಂದ ನಡೆಸಲು ಸೋಲಾಪುರ ರೈಲ್ವೆ ಡಿವಿಜನಲ್ ಮ್ಯಾನೇಜರ ರವರು ಒಪ್ಪಿಗೆ ನೀಡಿ ಸೂಕ್ತ ಕ್ರಮಕ್ಕೆ ಆದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

 

ಸಮಿತಿಯ ಬೇಡಿಕೆ ಯಂತೆ ಬರುವ ದಿನಗಳಲ್ಲಿ ಕಲಬುರಗಿಯಿಂದ ಹೊಸ ರೈಲು ಆರಂಭಿಸುವ ಬಗ್ಗೆ ಕ್ರಮಕೈಗೊಳ್ಳವ ಬಗ್ಗೆಯು ಭರವಸೆ ನೀಡಿದ್ದು, ಇತರೆ ಬೇಡಿಕೆಗಳ ಬಗ್ಗೆ ಕ್ರಮಕೈಗೊಳ್ಳವ ಬಗ್ಗೆಯೊ ಆಶ್ವಾಸನೆ  ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಮತ್ತು ಮಹಾ ಪ್ರಧಾನ ಕಾರ್ಯದರ್ಶಿ ಮನೀಷ ಜಾಜು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here