ಕಲಬುರಗಿ : ಮಕ್ಕಳು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತನಾಗದೆ ಸಾಮಾಜಿಕ ಜೀವಿ ಎದ್ದಾಗ ಮಾತ್ರ ಮಗುವಿನ ಬದುಕು ಸಾರ್ಥಕ ಹಾಗೂ ವಿದ್ಯೇಯೇ ಬಾಳಿನ ಬೆಳಕು ಎಂಬ ನಾಣ್ಣುಡಿಯಂತೆ ಅಪಾರ ಅಭ್ಯಾಸ ಮಾಡಿ ಜ್ಞಾನ ಹೊಂದುವುದರ ಜೊತೆಗೆ ರಾಷ್ಟ ಪ್ರೇಮ ಹಾಗೂ ರಾಷ್ಟ ಭಕ್ತಿ ಬೆಳೆಸುವುದು ಅವಶ್ಯವಾಗಿವೆ ಎಂದು ಜೇವರ್ಗಿ ತಾಲ್ಲೂಕಿನ ಸೊನ್ನ ವಿರಕ್ತಮಠದ ಡಾ.ಶಿವಾನಂದ ಸ್ವಾಮೀಜಿ ಉದ್ಘಾಟಿಸಿ ಆರ್ಶೀವಚನ ನೀಡಿದರು.
ಕರುಣೇಶ್ವರ ನಗರದಲ್ಲಿರುವ ಡಾಮಿನೆಂಟ್ ಪ್ರಾಥಮಿಕ ಮತ್ತು ಪ್ರೌಢಶಾಲೆಯ ೨೨ನೇ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು, ಒಬ್ಬ ಕೋಟ್ಯಾದಿಪತಿಗೆ ಕೇವಲ ತನ್ನ ದೇಶ ಮತ್ತು ರಾಜ್ಯದಲ್ಲಿ ಮಾತ್ರ ಬೆಲೆ ಇರುತ್ತದೆ, ಆದರೆ ಜ್ಞಾನಿಗಳಿಗೆ ದೇಶದಲ್ಲಿ ಅಷ್ಟೆ ಅಲ್ಲ ಹೊರದೇಶದಲ್ಲೂ ಕೂಡ ಬೆಲೆ ಇರುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಎನ್ ಎಸ್ ಖೇಡ್ ಮಾತನಾಡುತ್ತಾ ಇಂದಿನ ಶಿಕ್ಷಣ ಪಡೆಯುವ ಮಕ್ಕಳು ಪ್ರಮುಖ ಗುರಿ ಎಂದು ಹೇಳಿದರು. ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ, ಕೆ.ಪಿ.ಎಸ್.ಸಿ ಸದಸ್ಯ ಶಿವಶಂಕ್ರಪ್ಪ ಸಾಹುಕಾರ್, ಬಿದರನ ನಿವೃತ್ತ ಅಭಿಯಂತರರಾದ ಬಸವರಾಜ್ ಶೇರಿಕಾರ, ಸಿಎಸ್ ಗಣಾಚಾರಿ, ಕೆಪಿಸಿಸಿ ಸದಸ್ಯ ಮಲ್ಲಣ್ಣ ಗೌಡ ಬಿರಾದಾರ್, ನಿವೃತ್ತ ಪ್ರಾಚಾರ್ಯ ಕೆ.ಎಸ್. ಬಿರಾದಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು.
ಶಾಲೆಯ ಸಂಸ್ಥಾಪಕ ಆರ್.ಎಮ್.ಕಣ್ಣಿ, ಅಧ್ಯಕ್ಷ ಮಲ್ಲಿನಾಥ ಕಣ್ಣಿ, ಸಂಗೀತಾ ಕಣ್ಣಿ, ಸಂಘನಗೌಡ ಬಿರಾದಾರ ಇದ್ದರು. ಜಗನ್ನಾಥ ಆಲಮೇಲಕರ್ ನಿರೂಪಿಸಿದರು, ರಾಜೇಶ್ವರಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದರು. ಶಾಲೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.