ಕಲಬುರಗಿ: ಪ್ರಸ್ತುತ ದಿನಗಳಲ್ಲಿ ಹಿಂದಿಯು ವಿಶ್ವಭಾಷೆಯಾಗಿ ಬೆಳೆಯುತ್ತಿದೆ. ವ್ಯಾಪಾರೀಕರಣದಕಾರಣ ಹಿಂದಿ ಭಾಷೆಯ ಪ್ರಯೋಜನ ಬೆಳಕಿಗೆ ಬರುತ್ತಿದೆ. ಇಂದು ಈ ಭಾಷೆಯು ವಿಶ್ವದಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿಯನ್ನು ಹೊಂದುತ್ತಿದೆ ಹಾಗೂ ಇದರ ಪ್ರಯೋಗದಿಂದ ಪ್ರಾಂತೀಯ ಬಾಷೆಗಳಿಗೆ ಯಾವುದೇರೀತಿಯದಕ್ಕೆ ಬರುವುದಿಲ್ಲ ಎಂದುಡಾ.ಬಿ.ಆರ್‌ಅಂಬೆಡ್ಕರ್‌ಓಪನ್‌ಯುನಿವರ್ಸಿಟಿಯ ಹಿಂದಿ ವಿಭಾಗದಡೀನ್ ಹಾಗೂ ಮುಖ್ಯಸ್ಥರಾದ ಪ್ರೊ. ಶಕೀಲಾ ಖಾನಂ ಅಭಿಪ್ರಾಯಪಟ್ಟರು.
ಇವರುಇತ್ತೀಚೆಗೆಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹಿಂದಿ ಸಪ್ತಾಹ ಸಮಾರೋಪದ ಮುಖ್ಯಅತಿಥಿ ಸ್ಥಾನದಿಂದ ಮಾತಾನಾಡಿದರು.
ಕಾರ‍್ಯಕ್ರಮದಅಧ್ಯಕ್ಷತೆ ವಹಿಸಿದ್ದ ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲದ ಮಾನ್ಯ ಕುಲಪತಿಗಳಾದ ಪ್ರೊ. ಎಚ್. ಎಂ ಮಹೇಶ್ವರಯ್ಯ ಮಾತನಾಡಿ, ವಿಶ್ವವಿದ್ಯಾಲಯದ ಆಡಳಿತದಲ್ಲಿ ರಾಜಭಾಷೆಯಾಗಿರುವ ಹಿಂದಿ ಭಾಷೆಯ ಪ್ರಯೋಗತೃಪ್ತಿಕರವಾಗಿದೆ. ಕೇಂದ್ರೀಯ ವಿಶ್ವವಿದ್ಯಾಲಯವಾಗಿರುವುದರಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದಅದೇಶದಅನ್ವಯ ಹಿಂದಿ ಬಾಷೆಯ ಬಳಕೆಯಾಗುತ್ತಿದೆ, ರಾಜಭಾಷಾಅನುಭಾಗವುಇದರ ಅನುಪಾಲನೆ ಮಾಡುತ್ತಿದೆಎಂದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಮುಸ್ತಾಕ ಅಹಮದ್ ಪಟೇಲ್‌ಅವರು ಹಿಂದಿ ಭಾಷೆಯ ಮಹತ್ವದ ಬಗ್ಗೆ ಮಾತಾನಾಡಿ, ವಿಶ್ವವಿದ್ಯಾನಿಲಯದ ಅಡಳಿತದಲ್ಲಿ ಹಿಂದಿ ಭಾಷೆಯ ಪ್ರಯೋಗ ಹೆಚ್ಚಿನ ಪ್ರಮಾಣದಲ್ಲಿಆಗಬೇಕಿದೆಎಂದರು.
ವಿಶ್ವವಿದ್ಯಾಲಯದರಾಜಾಭಾಷಾ ಅಧಿಕಾರಿಗಳದ ಡಾ. ರೇಷ್ಮಾ ನದಾಫ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿಂದಿ ವಿಭಾಗದ ಮುಖ್ಯಸ್ಥರು ಹಾಗೂ ಮಾನವಿಕ ನಿಕಾಯದಡೀನ್‌ಆಗಿರುವ ಪ್ರೊ. ಸುನೀತಾ ಮಂಜನಬೈಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿಂದಿ ಸಪ್ರಾಹದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಕಾರ‍್ಯಕ್ರಮದಲ್ಲಿ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಯಿತು.