ಸ್ವಕುಳ ಸಾಳಿ ಸಮಾಜಕ್ಕೆ ಮನೆಗಳ ಒದಗಿಸಲು ಮಹಿಳಾ ಒಕ್ಕೂಟ ಮನವಿ

0
249

ಸುರಪುರ: ನಮ್ಮ ಸ್ವಕುಳ ಸಾಳಿ ಸಮಾಜವು ಅಲ್ಪಸಂಖ್ಯಾಂತರಾಗಿದ್ದು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ್ದೇವೆ. ನಾವು ಮೂಲತಃ ಗ್ರಾಮೀಣ ಗುಡಿ ಕೈಗಾರಿಕೆಗಳನ್ನೆ ನಂಬಿ ಬದುಕು ಕಟ್ಟಿಕೊಂಡಿದ್ದೇವೆ. ಬಟ್ಟೆ ಹೊಲೆಯುವುದು, ನೇಕಾರಿಕೆ, ರೆಡಿಮೇಡ್ ಬಟನ್ ಅಚ್ಚುವುದು ಹಾಗೂ ಸಿದ್ದ ಉಡುಪುಗಳನ್ನು ಬೀದಿ ಬದಿ ಇಟ್ಟು ವ್ಯಾಪಾರ ಮಾಡುತ್ತೇವೆ.ವಸತಿರಹಿತರಾಗಿರು ನಮಗೆ ವಸತಿ ಯೋಜನೆಗಾಗಿ ಕರ್ನಾಟಕ ಸರಕಾರವು ಆಶ್ರಯ ಡಾ. ಬಿ.ಆರ್.ಅಂಬೇಡ್ಕರ್, ಬಸವ, ವಾಜಪೇಯಿ ಯೋಜನೆಯಡಿಯಲ್ಲಿ ನಮಗೆ ನಿವೇಶನ ನೀಡಬೇಕೆಂದು ಸ್ವಕುಳಿ ಸಾಳಿ ಸಮಾಜದ ಮುಖಂಡ ಭೀಮರಾಯ ಭಜಂತ್ರಿ ಆಗ್ರಹಿಸಿದರು.

ನಗರದ ರಂಗಂಪೇಟೆಯ ಸ್ವಕುಳಿ ಸಮಾಜದಿಂದ ಶಾಸಕ ನರಸಿಂಹ ನಾಯಕ (ರಾಜುಗೌಡ)ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಮಾತನಾಡಿ, ಇಲ್ಲಿಯವರೆಗೆ ಬಂದಿರುವ ಯಾವುದೇ ಸರಕಾರಗಳು ನಮ್ಮ ಸಮಸ್ಯೆಗೆ ಸ್ಪಂಧಿಸಿ ಸೂಕ್ತ ಪರಿಹಾರ ನೀಡದೆ ಇದ್ದ ಕಾರಣ ನಾವುಗಳು ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದೆವೆ. ಈಗ ಅವಿಭಕ್ತ ಕುಟುಂಬಗಳಾಗಿರುವುದರಿಂದ ಪ್ರತಿಯೊಬ್ಬರಿಗೂ ನಿವೇಶನದ ಅವಶ್ಯಕತೆ ಇದ್ದು ನಮ್ಮ ಸಮಾಜದ ಅದೆಷ್ಟೂ ಜನರಿಗೆ ಮನೆ ಇಲ್ಲದಿರುವುದರಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಸಮಾಜದ ಅನೇಕ ಕುಟುಂಬಗಳು ಉದ್ಯೋಗ ಅರಸಿ ಹೊಲಸೆ ಹೋಗುತ್ತಿದ್ದೇವೆ. ಈಗಿನ ದುಬಾರಿ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದ್ದು ದುಡಿದ ಹಣ ಉಪ ಜೀವನಕ್ಕೆ ಸಾಕಾಗುವುದಿಲ್ಲ. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಮನೆ ಬಾಡಿಗೆ ಬೇರೆ ಕೊಡಬೇಕು. ಅತ್ಯಂತ ಕಡು ಬಡತನದಿಂದ ಬೆಂದು ಬೆಯುತ್ತಿದ್ದ ನಮಗೆ ಇಲ್ಲಿಯವರೆಗೆ ಯಾವುದೇ ಸರಕಾರ ಬಂದರು ಕೂಡ ನಮ್ಮ ಜ್ವಲಂತ ಸಮಸ್ಯೆಗಳಿಗೆ ಸ್ಪಂಧಿಸಿ ಸೂಕ್ತ ಪರಿಹಾರ ನೀಡಿರುವುದಿಲ್ಲ. ಈ ವಸತಿ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಸಮಾಜದ ವತಿಯಿಂದ ತಮ್ಮ ಅಧಿಕಾರವಧಿಯಲ್ಲಿ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಪರಿಹಾರ ದೊರೆತಿಲ್ಲ.ಆದ್ದರಿಂದ ಈಬಾರಿ ನಮಗೆ ಮನೆಗಳನ್ನು ದೊರಕಿಸಿಕೊಡುವಂತೆ ಆಗ್ರಹಿಸಿದರು.

Contact Your\'s Advertisement; 9902492681

ಮನವಿ ಸ್ವೀಕರಿಸಿದ ಶಾಸಕ ರಾಜುಗೌಡ ಮಾತನಾಡಿ,ನಿಮ್ಮ ಮನವಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಸರಕಾರದ ಗಮನಕ್ಕೆ ತಂದು ನಿಮಗೆ ಮನೆಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಕಮಲ ಪಾಡಮುಖಿ,ಶಕ್ತಿತಾಯಿ ಚಿಲ್ಲಾಳ,ನೀಲಮ್ಮ ಪಾಡಮುಖಿ,ಸಂಗೀತಾ ಟೊಣಪೆ,ದೇವಕಿ ಚಿಲ್ಲಾಳ,ಅನಿತಾ ಟೊಣಪೆ,ಪುಷ್ಫಲತಾ ಪಾಣಿಭಾತೆ, ಲಕ್ಷ್ಮಿ ಲೋಣಕರ್, ಸುನಂದಾ ಮೊಕಾಶಿ,ಸುಂದ್ರಮ್ಮ ಟೊಣಪೆ,ಗೀತಾ ಟೊಣಪೆ,ರೇಣುಕಾ ಟೊಣಪೆ,ಮಂಜುಳಾ ಲೋಣಕರ್,ಗೀತಾ ಚಿಲ್ಲಾಳ,ಹಣಮಂತಾ,ಸುರೇಖಾ,ಗೀತಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here