ಪೇಠ ಅಮ್ಮಾಪುರ ಪಿಕೆಪಿಎಸ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ

1
101

ಸುರಪುರ: ತಾಲೂಕಿನ ಪೇಠ ಅಮ್ಮಾಪುರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ೨೦೨೦-೨೧ ರಿಂದ ೨೦೨೪-೨೫ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಬೆಳಿಗ್ಗೆ ೧೧ ಗಂಟೆ ಒಳಗೆ ನಾಮಪತ್ರ ಸಲ್ಲಿಸಲು ಸಮಯ ನಿಗದಿಯಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಮಹಿಬೂಬು ಸಾಬ ತಂ/ ಬಡೇಸಾಬ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸುಭಾಶ ತಂ/ ರಂಗಯ್ಯ ರವರು ನಿಗದಿಗೊಳಿಸಿದ ಸಮಯದಲ್ಲಿ ಈ ಇಬ್ಬರು ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದರು ಈ ಅಭ್ಯರ್ಥಿಯನ್ನು ಹೊರತುಪಡಿಸಿ ಯಾರು ನಾಮಪತ್ರ ಸಲ್ಲಿಸದೆ ಇರುವುದರಿಂದ ಚುನಾವಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಅವರು ನಾಮಪತ್ರಗಳನ್ನು ಪರಿಶೀಲಿಸಿ ಅಧ್ಯಕ್ಷ ಮತ್ತು ಉಪಾಧ್ಯ ಸ್ಥಾನಗಳಿಗೆ ಅವಿರೋಧ ಆಯ್ಕಯಾಗಿರುವ ಕುರಿತು ಘೋಷಿಸಿ ಪ್ರಮಾಣ ಪತ್ರವನ್ನು ನೀಡಲಾಗಿದೆ ಎಂದು ಚುನಾವಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಅಪೆಕ್ಸ್ ಬ್ಯಾಂಕ ರಾಜ್ಯ ನಿರ್ದೇಶಕ ವಿಠಲ ಯಾದವ, ಭೀಮಣ್ಣ ಜಾಲಿಬೆಂಚಿ, ಅಬ್ದುಲ್ ಸಲೀಂಸಾಬ, ಹಣಮಂತ ಕಮತಿಗಿ, ಹಣಮಂತ ಕಟ್ಟಿಮನಿ, ಹಣಮಂತ ರಾವೂರ, ಗ್ರಾಪಂ ಉಪಾಧ್ಯಕ್ಷ ಹಣಮಂತ್ರಾಯ ಟಣಕೇದಾರ, ದೇವಿಂದ್ರಪ್ಪಗೌಡ ಜಾಲಿಬೆಂಚಿ, ನಾಗಪ್ಪ ಬಳಿಗಾರ, ರವೀಂದ್ರ ಅಮ್ಮಾಪುರ, ರಾಜೆಸಾಬ ಚೌದ್ರಿ, ಮಾನಪ್ಪ ಬಡಿಗೇರ ಸೇರಿದಂತೆ ಇನ್ನಿತರರಿದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here