ಜೇವರ್ಗಿ: ಕಳೆದ 20 ವರ್ಷಗಳಿಂದ ನಿರಂತರವಾಗಿ ಶರಣರ ವಚನಗಳನ್ನು ಜನರಿಗೆ ತಿಳಿಸುವ ಸಲುವಾಗಿ ಶರಣ ಸಂಗಮ ಕಾರ್ಯಕ್ರಮ ನಡೆಸುತ್ತಿದ್ದುˌ ಮಾರ್ಚ್ 1ರಂದು ಹೊಸದಾಗಿ ಬಸವ ಕೇಂದ್ರ ಮಹಿಳಾ ಘಟಕ ಉಧ್ಘಾಟನೆ ಆಗಲಿದೆ.
ಜೇವರಗಿ ಬಸವ ಕೇಂದ್ರದ ಮಹಿಳಾ ಘಟಕದ ಅಧ್ಯಕ್ಷರಾಗಿ ಶರಣೆ ರಾಜೇಶ್ವರಿ ವಿಜಯಕುಮಾರ ಪಾಟೀಲ ಸೇಡಂ ಅವರು ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಮಾರ್ಚ್ 1ರಂದು ಸಂಜೆ 7 ಗಂಟೆಗೆ ಸರಕಾರಿ ಕನ್ಶಾ ಪ್ರೌಢಶಾಲೆಯ ಆವರಣದಲ್ಲಿ ನಡೆಯುವ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ತಮ್ಮ ಅಧಿಕ್ರತವಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ.
ಆದ ಕಾರಣ ತಾವುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ , ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಅವರು ಮನವಿ ಮಾಡಿದ್ದಾರೆ.