ಕಲಬುರಗಿ: ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಸಿಎಎ.ಎನ್.ಆರ್.ಸಿ ಮತ್ತು ಎನ್.ಪಿ.ಆರ್ ವಿರುದ್ಧ ದೆಹಲಿ ಮಾದರಿಯಲ್ಲಿ ನಗರದ ಪ್ರತ್ಯೇಕ ಎರಡು ಕಡೆ ಕಲಬುರಗಿ ಶಾಹೀನ್ ಬಾಗ್ ಪ್ರತಿಭಟನೆ ನಡೆಯುತ್ತಿದೆ.
ಮಹೇಬೂಬ್ ನಗರ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಯುತಿದ್ದು, ಇದೇ ರೀತಿ ಎಮ್.ಎಸ್.ಕಿ ಮೀಲ್ ಪ್ರದೇಶದಲ್ಲಿ ಮಹಿಳೆಯರ ಶಾಹೀನ್ ಬಾಗ್ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಮಹಾರಾಷ್ಟ್ರದ ಭಾರತ ಮುಕ್ತಿ ಮೋರ್ಚಾ ಅಧ್ಯಕ್ಷೆ ಪ್ರತೀಭಾ ಉಬ್ಲೆ ಅವರು ಇಂದು ನಗರಕ್ಕೆ ಆಗಮಿಸಿ ಎರಡೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಉದ್ದೇಶಿ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.