ಉತ್ತಮ ಶಿಕ್ಷಣ ಸಮಾಜ ನಿರ್ಮಾಣ ಅತ್ಯಗತ್ಯ; ಕೃಷಿ ವಿಜ್ಞಾನಿ ಡಾ. ಜಹೀರ್‌ ಅಹಮದ್‌

0
62

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯಕಲಬುರಗಿಯ ಸಮಾಜಕಾರ್ಯಅದ್ಯಯನ ವಿಭಾಗ ಕಲಬುರಗಿ ಹಾಗೂ ಬೀದರ್ ಹಾಲಹಳ್ಳಿ ಸ್ನಾತಕೋತ್ತರ ಸಮಾಜಕಾರ್ಯಕೇಂದ್ರದ ವತಿಯಿಂದಚಿತ್ತಾಪೂರತಾಲೂಕಿನ ನಿಪ್ಪಾಣಿಗ್ರಾಮದಲ್ಲಿ ಸಮಾಜಕಾರ್ಯ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ವಿವಿಧಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯ ವಿಜ್ಞಾನಿ ಡಾ. ಜಹೀರ್‌ ಅಹಮದ್‌ ಮಾತನಾಡಿ ಬದಲಾದಹವಾಮಾನ ಸನ್ನಿವೇಶದಿಂದ ತೊಗರಿ ಸೇರಿ ವಿವಿಧ ಬೆಳೆಗಳಲ್ಲಿ ಇಳುವರಿ ಏರುಪೇರಾಗಿದ್ದು, ಹವಾಮಾನ ಬದಲಾವಣೆಯಕುರಿತು ಕೃಷಿ ಅವಲಂಬಿತಕುಟುಂಬ ಹಾಗೂ ಜನ ಸಾಮಾನ್ಯರಲ್ಲಿಎಲ್ಲರಿಗೂಜನಜಾಗೃತ ಮೂಡಿಸುವಉತ್ತಮಶಿಕ್ಷಣ ಸಮಾಜ ನಿರ್ಮಾಣಅತ್ಯಗತ್ಯಕಾಲ ಕೂಡಿ ಬಂದಿದೆ ಎಂದರು.

Contact Your\'s Advertisement; 9902492681

ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭೂ, ವಾಯು, ಜಲ ಮಾಲಿನ್ಯಗಳನ್ನು ಹತೋಟಿ ಮಾಡಿ ಸಮೃದ್ದ ವಾತಾವರಣ ಸೃಷ್ಟಿಗೆ ಸಹಕಾರಿಯಾಗಬೇಕುಎಂದರು. ನೂತನ್ ವಿದ್ಯಾಲಯದಉಪನ್ಯಾಸಕರಾದ ಶ್ರೀ ಭಾರತೀಶ ಬೆಳಗುಂದಿ ಸಮಾರಂಭ ಉದ್ದೇಶಿಸಿ ಮಾತನಾಡಿರಾಷ್ಟ್ರ ಉತ್ತಮಗೊಳ್ಳಲು ಯುವಜನತೆಯಲ್ಲಿರುವದೂರಲೋಚನೆ, ದುರಬ್ಯಾಸ ಬಿಟ್ಟುಉತ್ತಮ ನೈಪುಣೈತೆಯ ಶಿಕ್ಷಣ ಪಡೆಯಬೇಕೆಂದು ಸಲಹೆ ನೀಡಿದರು. ಅತಿಯಾದ ಮೊಬಲ್ ಬಳಕೆ, ಗ್ರಾಮಗಳಿಂದ ಪಟ್ಟಣಕ್ಕೆ ವಲಸೆ ಹೋಗುತ್ತಿರುವುದುಅತಂಕಕಾರಿ ಬೆಳವಣಿಗೆ ಎಂದರು.

ವಿಜ್ಞಾನಉಪನ್ಯಾಸಕರಾದ ಶ್ರೀ ಎನ್. ಆರ್. ಕುಲಕರ್ಣಿ ಮಾತನಾಡಿತೊಗರಿಕಟಾವು ನಂತರ ತ್ಯಾಜ್ಯವನ್ನು ಸುಡದೇ ಕಾಂಪೊಸ್ಟ್‌ ಗೊಬ್ಬರವಾಗಿ ಬಳಸಿ ಭೂಮಿ ಸದೃಡಗೊಳಿಸಲು ಸಲಹೆ ನೀಡಿದರು.ಶ್ರೀ ನಚಿಕೇತ್‌ರವರು ತನ್ನ ಉಪನ್ಯಾಸದಲ್ಲಿ ಸಮಾಜದಲ್ಲಿ ನಾವು ವಿವಿಧ ಜಯಂತಿಗಳನ್ನು ಆಚರಿಸುತ್ತಿದ್ದೇವೆ. ಆದರೆ, ಇದರ ಮೌಲ್ಯಗಳನ್ನು ಅರಿತು ಆ ದಿನದ ಶ್ರೇಷ್ಟತೆಯನ್ನುಗೌರವಿಸಬೇಕೆಂದರು.

ಆಲ್ಲ್ಲೂರ (ಬಿ) ಸರಕಾರಿ ಶಾಲಾ ಶಿಕ್ಷಕರಾದ ಶ್ರೀ ಶರಣಬಸಪ್ಪಾ ನ್ಯಾಮನ್ ಮಾತನಾಡಿ ಕೃಷಿ ಕ್ಷೇತ್ರದಲ್ಲಿ ವ್ಯಾಪಕ ಅವಕಾಶಗಳಿದ್ದು ವಿಜ್ಞಾನಿಗಳು ಹಾಗೂ ತಜ್ಞರ ಸಲಹೆ ಪಡೆದು ಮುಂದುವರೆಯಲು ಸೂಚಿಸಿದರು ಹಾಗೂ ವಿದ್ಯಾರ್ಥಿಜೀವನದಲ್ಲಿ ಶಾಲಾ ಕೃಷಿ ಕೈತೋಟದ ಮಹತ್ವವನ್ನು ವಿವರಿಸಿದರು.

ಸಭೆಯ ಅದ್ಯಕ್ಷತೆವಹಿಸಿದ್ದ ಹಣಮಂತಪ್ಪಾ ಬೈರಾಮಡಗಿ ಮಾತನಾಡಿ ವಿದ್ಯಾರ್ಥಿ ಪ್ರವಾಸಗಳು, ಶಾಲಾ ಶಿಕ್ಷಣಗಳು, ಪ್ರಯೋಗಗಳು, ಸ್ಪರ್ಧೆಗಳು ವಿದ್ಯಾರ್ಥಿಜೀವನವನ್ನು ಬಲಗೊಳಿಸುತ್ತದೆ ಎಂದರು.

ಪ್ರವೀಣ ಪಾಟೀಲ್,  ಲಕ್ಷ್ಮಿಕಾಂತ್ ಸಿಂಧೆ, ಗುಲಬರ್ಗಾ ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದ ಉಪನ್ಯಾಸಕರಾದ ಸಂತೋಷ ಮಾಡಬೊಳ್, ಗುರುಲಿಂಗಯ್ಯ ಸ್ವಾಮಿ, ವೀಣಾಎಸ್.ಬಿ, ಡಾ. ಮಾಲಿಪಾಟೀಲ್, ಡಾ.ಶಾಂತಕುಮಾರ್‌ಚಿದ್ರಿ ಉಪಸ್ಥಿತರಿದ್ದರು. ಕಿರು ನಾಟಕದ ಮೂಲಕ ಗ್ರಾಮಸ್ಥರಿಗೆ ಸ್ವಚ್ಛತೆಯ ಮತ್ತು ಆರೋಗ್ಯದಅರಿವು ಮೂಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here