ಕುಣಿಯುವುದು ಬಿಟ್ಟು ಬಸವ ತತ್ವ ಪಾಲಿಸಿ ; ನಿಷ್ಠಿ

0
363

ಕಲಬುರಗಿ: ಬಸವ ಜಯಂತಿಯಲ್ಲಿ ಕುಣಿದು ಕುಪ್ಪಳಿಸುವ ಆಚರಣೆ ಬೇಡ, ಬದಲಾಗಿ ಅವರ ತತ್ವಗಳನ್ನು ಅಳವಡಿಸಿ ಜೀವನದಲ್ಲಿ ಸಾರ್ಥಕತೆ ಪಡೆದುಕೊಳ್ಳಬೇಕು ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ನಿರಂಜನ ನಿಷ್ಠಿ ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಅನುಭವ ಮಂಟಪದಲ್ಲಿ ಹಮ್ಮಿಕೊಂಡ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, 12ನೇ ಶತಮಾನದ ಮಹಾಮಾನವತಾವಾದಿ ಬಸವಣ್ಣನವರು ಸಮಾಜದಲ್ಲಿ ಅನೇಕ ದುಷ್ಟ ಪದ್ಧತಿಗಳ ವಿರುದ್ಧ ಹೋರಾಡಿದರು. ಅವರು ಬರೆದ  ವೈಚಾರಿಕ ವಚನಗಳು ದಿನನಿತ್ಯವೂ ವಿದ್ಯಾರ್ಥಿಗಳು ಅನುಸರಿಸಿ ಒಳ್ಳೆಯ ಮಾರ್ಗದೆಡೆ ಸಾಗಬೇಕು ಎಂದು ನುಡಿದರು.

Contact Your\'s Advertisement; 9902492681

ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ ವಿ ಶಿವಾನಂದನ್ ಅವರು, ಬಸವಣ್ಣನವರ ತತ್ವಾದರ್ಶಗಳು ಪಾಲಿಸಿದರೆ ಪಾಶ್ಚಾತ್ಯ ಸಂಸ್ಕೃತಿಗೆ ಒಳಗಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸದಲ್ಲಿ ಕನ್ನಡವಿಭಾಗದ ಪ್ರಾಧ್ಯಾಪಕರಾದ ಪ್ರೊ.ನಾನಾಸಾಹೇಬ್ ಹಚ್ಚಡದ ಮತ್ತು ಡಾ. ಸುಮಂಗಲಾ ರೆಡ್ಡಿ ಮಂಡಿಸಿದರು. ನಂತರ ವಿದ್ಯಾರ್ಥಿಗಳು ಮಾತನಾಡಿದರು.

ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರು ಡಾ. ಎಂ ಎಸ್ ಪಾಟೀಲ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿದ್ಯಾರ್ಥಿ ಶ್ವೇತಾ ಪ್ರಾರ್ಥಿಸಿ,ಸಾರಿಕಾ ಕಾಳಗಿ ಸ್ವಾಗತಿಸಿದರು. ಪ್ರಭಾವತಿ ಚಿತಕೋಟಿ ವಂದಿಸಿದರು. ಅಧ್ಯಾಪಕ ಚಿದಾನಂದ ಚಿಕ್ಕಮಠ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here