ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು ಇರಬೇಕು: ಜಯಶ್ರೀ ಬಸವರಾಜ ಮತ್ತಿಮಡು

0
45

ಶಹಾಬಾದ: ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು ಇರಬೇಕು. ಶಿಕ್ಷಕರಿಗೆ ಕಲಿಸುವ ಮನೋಭಾವನೆ ಇದ್ದಾಗ ಮಾತ್ರ ಗುಣಾತ್ಮಕ ಶಿಕ್ಷಣ ಹೊರಹೊಮ್ಮಲು ಸಾಧ್ಯವಾಗುತ್ತದೆ. ಆದ್ದರಿಂದ ಶಿಕ್ಷಣ ಸಂಸ್ಥೆಯವರು ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಬೇಕೆಂದು ಬಿಜೆಪಿ ಮುಖಂಡೆ ಜಯಶ್ರೀ ಬಸವರಾಜ ಮತ್ತಿಮಡು ಹೇಳಿದರು.

ಅವರು ನಗರದ ಪಾರ್ವತಿ ಸಭಾಂಗಣದಲ್ಲಿ ಸಹರಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ ಸಂಸ್ಕೃತಿ, ಸಂಸ್ಕಾರ ಕಲಿಸಿದಲ್ಲಿ ಅವರ ಭವಿಷ್ಯದ ಜೀವನ ಉತ್ತಮವಾಗಿರುತ್ತದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪರಿಶ್ರಮದೊಂದಿಗೆ ಮುನ್ನೆಡೆದರೆ ಗುರಿ ಮುಟ್ಟಲು ಸಾಧ್ಯ.ಮಕ್ಕಳ ಪ್ರತಿಭೆಯನ್ನು ಗುರುತಿಸಿ ಶಿಕ್ಷಕರು ಹಾಗೂ ಪಾಲಕರು ಪ್ರೋತ್ಸಾಹಿಸುವ ಜತೆಗೆ ಅವರಲ್ಲಿ ದೇಶ ಪ್ರೇಮವನ್ನು ಬೆಳೆಸಬೇಕು ಎಂದು ಹೇಳಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ ಮಾತನಾಡಿ, ಶಿಕ್ಷಣ ಬದುಕಿನ ಅವಿಭಾಜ್ಯ ಅಂಗ.ಬದುಕಿನಲ್ಲಿ ಯಶಸ್ಸು ಪಡೆಯಬೇಕಾದರೆ ಕಠಿಣ ಪರಿಶ್ರಮವೊಂದೇ ದಾರಿ. ಮೌಲ್ಯಗಳಿಲ್ಲದೆ ಜೀವನ ವ್ಯರ್ಥ. ಆದ್ದರಿಂದ ಪ್ರತಿಯೊಬ್ಬರು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ. ಅಲ್ಲದೇ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ಹಬ್ಬುತ್ತಿವೆ.ಆದರೆ ಎಲ್ಲಿ ಗುಣಾತ್ಮ ಶಿಕ್ಷಣ ನೀಡಲಾಗುತ್ತದೆ ಆ ಶಿಕ್ಷಣ ಸಂಸ್ಥೆಗೆ ಬೆಲೆ ಬರುತ್ತದೆ ಎಂದು ಹೇಳಿದರು.

ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ, ಸಾಮಾಜಿಕ ಚಿಂತಕ ಲೋಹಿತ್ ಕಟ್ಟಿ,
ಮಂಗಳಗೌರಿ ಧಾರಾವಾಹಿಯ ಕಾವ್ಯಶ್ರೀ ಗೌಡ, ಸಚಿನ್ ಪರತಾಬಾದ, ಗೌಸ್ ಬಾಬಾ,ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್, ರವಿ ರಾಠೋಡ, ಸುರೇಶ ಮೆಂಗನ್, ನಿಂಗಣ್ಣ ಹುಳಗೋಳಕರ್, ಸಹರಾ ಸಂಸ್ಥೆಯ ಅಧ್ಯಕ್ಷ ಎಮ್.ಎ.ಸಿದ್ದಿಕ್ಕಿ, ಮಜರ್ ಹುಸೇನ್, ಅಣ್ಣಪ್ಪ ದಸ್ತಾಪೂರ, ಅನೀಲ ಮೈನಾಳಕರ್, ಮೀರಲಿ ನಾಗೂರೆ,ಅಮ್ಜದ್,ಭಾಗೀರಥಿ ಗುನ್ನಾಪೂರ ಸೇರಿದಂತೆ ಅನೇಕ ಜನರು ಇದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here