ಕಲಬುರಗಿ: ತಾಂತ್ರಿಕ ಉಪಕರಣಗಳ ಗುಣಮಟ್ಟ ಮತ್ತು ಮಾಪನಾಂಕನ ನಿರ್ಣಯ ಅತೀ ಮಹತ್ವದಾಗಿದೆ. ಸಾಕಷ್ಟು ಆರೋಗ್ಯ ಸುರಕ್ಷಾ ಉಪಕರಣಗಳು ತಮ್ಮ ಗುಣಮಟ್ಟ ಕಾಯ್ದಿರಿಸಿಕೊಳ್ಳಬೇಕಾಗಿದೆ. ಕೆಲವೊಮ್ಮೆ ಉಪಕರಣಗಳು ಸೂಕ್ತ ಮಾಪನಾಂಕನವಿಲ್ಲದ ಕಾರಣ ಅಪಘಾತಕ್ಕೆ ದಾರಿಮಾಡಿಕೊಡುವ ಸಾದ್ಯತೆಗಳು ಇವೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಅಧ್ಯಕ್ಷರಾದ ಮತ್ತು ಮಾಜಿ ರಾಜ್ಯ ಸಭೆ ಸದಸ್ಯರಾದ ಬಸವರಾಜ ಪಾಟೀಲ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇಂದು ಇಲ್ಲಿನ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ ವಿಭಾಗದ ವೈಜ್ಞಾನಿಕ ಮತ್ತು ಕೈಗಾರಿಕಾ ಮಾಪನಾಂಕನ ನಿರ್ಣಯ ಕೇಂದ್ರ ವನ್ನು ಉದ್ಘಾಟಿಸಿ ಔಪಚಾರಿಕವಾಗಿ ಮಾತನಾಡಿದರು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ ವಿಭಾಗವು ಬೆಂಗಳೂರು ಮೂಲದ ವೆಂಜಿನ್ಸ್ ಟೆಕ್ನಾಲಜಿಯೊಂದಿಗೆ ಜಂಟಿಯಾಗಿ ಈ ವೈಜ್ಞಾನಿಕ ಮತ್ತು ಕೈಗಾರಿಕಾ ಮಾಪನಾಂಕನ ನಿರ್ಣಯ ಕೇಂದ್ರ ಸ್ಥಾಪಿಸಿದ್ದು ಅದು ವಿವಿಧ ರೀತಿಯ ತಾಂತ್ರಿಕ ಉಪಕರಣಗಳ ನಿರ್ವಹಣೆ ಮತ್ತು ಮಾಪನಾಂಕನ ನಿರ್ಣಯ ಮಾಡಲಾಗುವುದು. ಇದರಿಂದ ಸಂಶೋಧನೆ ನಿರತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತೊಂದರೆರಹಿತ ಕಾರ್ಯವನ್ನು ನಿರ್ವಹಿಸಬಹುದಾಗಿದೆ. ಈ ರೀತಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಮಾಪನಾಂಕ ನಿರ್ಣಯ ಕೇಂದ್ರವು ಕಲ್ಯಾಣ ಕರ್ನಾಟಕದಲ್ಲಿಯೇ ಪ್ರಥಮಬಾರಿಗೆ ಸ್ಥಾಪಿಸಲಾಗಿದೆ.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಭೀಮಾಶಂಕರ ಸಿ. ಬಿಲಗುಂದಿಯವರು ವಿಭಾಗದ ಶಿಕ್ಷರ ಪ್ರಿರಿಶ್ರಮವನ್ನು ಪ್ರಶಂಸಿಸಿ ಈ ರೀತಿಯ ಮಾಪನಾಂಕನ ನಿರ್ಣಯ ಕೇಂದ್ರಗಳು ಸ್ಥಳಿಯ ತಾಂತ್ರಿಕ ಮತ್ತು ಅರೋಗ್ಯ ಉಪಕರಣಗಳ ನಿರ್ವಹಣೆಗೆ ಸಹಾಯಕಾರಿಯಾಗಿದೆ ಎಂದು ಹೇಳಿದರು. ಈ ಕೇಂದ್ರವು ಉಪಕರಣಗಳ ಸುರಕ್ಷತೆ ಮತ್ತು ಸಮಾಜಕ್ಕೆ ಅವುಗಳಿಂದ ಆಗುವ ಲಾಭವನ್ನು ಗಮನದಲ್ಲಿರಿಸಿಕೊಂಡು ಅವುಗಳ ನಿರ್ವಹಣೆಯನ್ನು ನಡೆಸಲಾಗುವುದು ಎಂದು ವಿಭಾಗದ ಮುಖ್ಯಸ್ಥರಾದ ಡಾ. ರಾಜು ಯಾನಮಶೆಟ್ಟಿಯವರು ತಿಳಿಸಿದರು.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ಕೇಂದ್ರವು ಆರೋಗ್ಯ ಸುರಕ್ಷಾ ಉಪಕರಣಗಳನ್ನು ಮಾಪನಾಂಕಗೊಳಿಸಲಿದ್ದು. ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಸುರಕ್ಷಾ ಸಾಧನಗಳನ್ನು ತಯ್ಯಾರಿಸಲಾಗುವುದು ಎಂದು ವೆಂಜಿನ್ಸ್ ಟೆಕ್ನಾಲಜಿಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು. ಈ ಉದ್ಘಾಟನಾ ಸಮಾರಂಭಕ್ಕೆ ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಸತೀಶ್ಚಂದ್ರ ಸಿ. ಹಡಗಲಿಮಠ ಅವರು ಉಪಸ್ಥಿತರಿದ್ದರು. ಈ ಸಮಾರಂಭದ ಸಂಯೋಜಕರಾಗಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್. ಎಸ್. ಹೆಬ್ಬಾಳ ಮತ್ತು ಸಂಚಾಲಕರಾಗಿ ವಿಭಾಗದ ಮುಖ್ಯಸ್ಥರಾದ ಡಾ. ರಾಜು ಯಾನಮಶೆಟ್ಟಿ ತಮ್ಮ ಕಾರ್ಯುವನ್ನು ನಿರ್ವಹಿಸಿದರು.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ರಾಜು ಯಾನಮಶೆಟ್ಟಿಯವರು ಸರ್ವರಿಗೂ ಸ್ವಾಗತಿಸಿದರು, ಡಾ. ಗೀತಾ ಪಾಟೀಲ ಅವರು ವಂದಿಸಿದರು ಹಾಗೂ ಪ್ರೊ.ಪದ್ಮಪ್ರೀಯಾ ಪಾಟೀಲ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಮಾರಂಭದಲ್ಲಿ ಮಹಾವಿದ್ಯಾಲಯದ ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.