ಸಂಸದರಿಗೆ ವಿವಿ ಮುಚ್ಚಿಸಿ ಯುವ ಜನರನ್ನ ಆರ್ ಎಸ್ಎಸ್ ಶಾಖೆಗೆ ತಳ್ಳುವ ಬಯಕೆನಾ?”  ಪ್ರಿಯಾಂಕ್ ಖರ್ಗೆ ತೀಕ್ಷ್ಣ ಪ್ರಶ್ನೆ

0
92

ಕಲಬುರಗಿ: ಗುಲಬರ್ಗಾ ವಿವಿ ತಮ್ಮನ್ನು ಪರಿಗಣಿಸುತ್ತಿಲ್ಲ ಹೀಗಾದರೇ ವಿವಿಯನ್ನೇ ಮುಚ್ಚಿಸಿಬಿಡುತ್ತೇನೆ‌ ಎಂದು ಸಂಸದ ಉಮೇಶ್ ಜಾಧವ್ ಅವರು ಹೇಳಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿರುವುದನ್ನು ಉಲ್ಲೇಖಿಸಿರುವ ಶಾಸಕ ಪ್ರಿಯಾಂಕ್ ಖರ್ಗೆ ಸಂಸದರ‌ ವಿರುದ್ದ ತೀಕ್ಷ್ಣ ಮಾತುಗಳಿಂದ‌ ಹರಿಹಾಯ್ದಿದ್ದಾರೆ.

ವಿವಿಯನ್ನು ಮುಚ್ಚಿಸಿಬಿಡುವ ಹೇಳಿದ್ದಾರೆ‌ ಎನ್ನಲಾದ ಪತ್ರಿಕೆಯ ವರದಿಯ ತುಣುಕನ್ನು ತಮ್ಮ ಫೇಸ್ ಬುಲ್ ಖಾತೆಯಲ್ಲಿ ಹಂಚಿಸಿಕೊಂಡಿರುವ ಪ್ರಿಯಾಂಕ್ ಅವರು ವಿವಿ ಮುಚ್ಚಿಸುವುದೇ ಸಂಸದರ ಅಭಿವೃದ್ದಿ ಪರ‌ ನಿಲುವೇ ಎಂದಿದ್ದಾರೆ.  ” ವಿವಿ ಮುಚ್ಚಿಸಿ ಬಡ ಮಕ್ಕಳನ್ನ ಯುವಕರನ್ನ ಶಿಕ್ಷಣ ವಂಚಿತರನ್ನಾಗಿಸಿ ಅವರನ್ನ ಆರ್ ಎಸ್ ಎಸ್ ಶಾಖೆಗೆ ತಳ್ಳಿ ಮಜಾ ನೋಡೋ ಬಯಕೆನಾ” ಎಂದು ಜಾಧವ್ ಅವರನ್ನ ಕುಟುಕಿ ಇದೇನಾ ನಿಮ್ಮ ಶಿಕ್ಷಣ ‌ಪ್ರೀತಿ? ಇದಕ್ಕೇನಾ‌ ನೀವು ಬಿಜೆಪಿ ಪಾಲಾಗಿದ್ದು ? ಎಂದು ಪ್ರಶ್ನಿಸಿದ್ದಾರೆ.

Contact Your\'s Advertisement; 9902492681

ವಿವಿ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳು ಕಲಬುರಗಿಯಲ್ಲಿ ಸ್ಥಾಪನೆಗೊಂಡು ಎಜುಕೇಶನ್ ಹಬ್ ಆಗಿರಲು ಹಲವಾರು ಮಹನೀಯರ ಕೊಡುಗೆ ಎಂದಿರುವ ಶಾಸಕರು,‌ತಾವು ಸಮಾಜಕಲ್ಯಾಣ‌ ಸಚಿವರಾಗಿದ್ದಾಗ ಜಾರಿಗೆ ತಂದ ಪ್ರಬುದ್ಧ ಯೋಜನೆಯಡಿ ನೂರಾರು ಬಡ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಅನುಕೂಲವಾಯಿತು ಎಂದು ಸ್ಮರಿಸಿದ್ದಾರೆ.

ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸುಮಾರು 34 ವಿಭಾಗಗಳಿದ್ದು, ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿದ್ದು, ವಿಶ್ವವಿದ್ಯಾಲಯದ ಅಧೀನದಲ್ಲಿ ಸುಮಾರು 147 ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯವು ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಬೌದ್ಧಿಕ ಗುಣಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ.

ಮಲ್ಲಿಕಾರ್ಜುನ ಖರ್ಗೆ, ವೀರೇಂದ್ರ ಪಾಟೀಲ್, ಧರ್ಮಸಿಂಗ್, ಖಮರುಲ್ ಇಸ್ಲಾಂ, ಶರಣ ಪ್ರಕಾಶ್ ಪಾಟೀಲ್ ಅವರಂತಹ ಹಿರಿಯ ನಾಯಕರ ಹೋರಾಟದ ಫಲವಾಗಿ ಇಂದು ನಮ್ಮ ಜಿಲ್ಲೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯ, ಕೇಂದ್ರೀಯ ವಿವಿ, GIMS ನಂತಹ ಶಿಕ್ಷಣ ಕೇಂದ್ರಗಳನ್ನ ತಂದು ಕಲಬುರಗಿ ನಗರವನ್ನ ಎಜುಕೇಶನ್ ಹಬ್ ಮಾಡಿದ್ದೇವೆ. ಗುಲ್ಬರ್ಗ ವಿಶ್ವವಿದ್ಯಾಲಯವನ್ನ ಹಠ ಮಾಡಿ, ಬಿಡದೆ ಜಿಲ್ಲೆಗೆ ತಂದಿದ್ದು ಮಲ್ಲಿಕಾರ್ಜುನ ಖರ್ಗೆಯವರು, 371ಜೆ  ಮುಖೇನ ಶಿಕ್ಷಣದಲ್ಲೂ ನಮ್ಮ ಇಡೀ ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಿಗೆ ಮೀಸಲಾತಿ ಸಿಗುವಂತೆ ಸಾಂವಿಧಾನಿಕ ತಿದ್ದುಪಡಿಯನ್ನು ಖರ್ಗೆಯವರ ನೇತೃತ್ವದಲ್ಲಿ ಕಾಂಗ್ರೆಸ್ ಮಾಡಿದೆ. ಇದನ್ನೆಲ್ಲಾ ಮಾಡಿದ್ದು, ಹಿಂದುಳಿದ ಹಾಗೂ ಗ್ರಾಮೀಣ ಭಾಗದ ನಮ್ಮ ಜನರಿಗೆ ಹಾಗೂ ಮಕ್ಕಳಿಗೆ ಶಿಕ್ಷಣ ಕೈಗೆಟುಕ ಬೇಕು, ಬಾಬಾಸಾಹೇಬ್ ಅಂಬೇಡ್ಕರ್ ರವರ ವಿದ್ಯಾವಂತ ಭಾರತದ ಕನಸನ್ನ ನನಸು ಮಾಡಲು. ಇಷ್ಟೇ ಅಲ್ಲದೆ, ನಾನು ಸಮಾಜ ಕಲ್ಯಾಣ ಮಂತ್ರಿಯಾಗಿದ್ದಾಗ ನಮ್ಮ ಸರ್ಕಾರ ಜಾರಿಗೆ ತಂದ ಪ್ರಬುದ್ಧ ಯೋಜನೆಯಿಂದಾಗಿ ರಾಜ್ಯದ ನೂರಾರು ಬಡ ಮಕ್ಕಳು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವಂತಾಗಿದೆ. ಈ ಮೂಲಕ ಅವರ ಬಡತನ ನಿವಾರಿಸಿ ಹೊಸ ಬದುಕು ಕಟ್ಟಿಕೊಳ್ಳುವಂತಾಗಿದೆ. ಮಹಾತ್ಮಾ ಗಾಂಧೀಜಿಯವರ ಆಶಯವೂ ಕೂಡ ಇದೇ ಆಗಿತ್ತು.

ಈವರೆಗೂ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯದ ಮೂಲಕ ಶಿಕ್ಷಣ ಪಡೆದು, ಉನ್ನತ ಪದವಿ ಹಾಗೂ ಉದ್ಯೋಗದಲ್ಲಿದ್ದಾರೆ.ಇಂತಹ ವಿಶ್ವವಿದ್ಯಾಲಯವನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಜಿಲ್ಲೆಯ ಎಲ್ಲಾ ಜನನಾಯಕರ ಮೇಲಿದೆ. ಮಾನ್ಯ ಸಂಸದರಾದ ಜಾಧವ್‌ ಅವರು ಕ್ಷುಲ್ಲಕ ಕಾರಣಕ್ಕಾಗಿ ಇಂತಹ ಮಹಾನ್ ಜ್ಞಾನದೇಗುಲವನ್ನು ಮುಚ್ಚಿಸಿ ಬಿಡುತ್ತೇನೆ ಎಂದಿರುವ ಆಘಾತಕಾರಿ ವಿಷಯ ಪತ್ರಿಕಾ ವರದಿಗಳ ಮೂಲಕ ನನ್ನ ಗಮನಕ್ಕೆ ಬಂದಿದೆ. ಜನಪ್ರತಿನಿಧಿಯಾಗಿ, ಜನರ ಅಭಿವೃದ್ಧಿಗೆ ಪೂರಕವಾಗುವ ಮಾತುಗಳನ್ನಾಡಬೇಕೆ ಹೊರತು, ಈ ರೀತಿ ವಿನಾಶದ ಮಾತುಗಳನ್ನಾಡುವುದು ತರವಲ್ಲ.

ಇದೇನಾ ಸಂಸದರ ಅಭಿವೃದ್ಧಿ ಪರ ನಿಲುವು? ಇದಕ್ಕಾಗಿಯೇ ಬಿಜೆಪಿ ಪಾಲಾಗಿದ್ದಾ? ವಿಶ್ವವಿದ್ಯಾಲಯವನ್ನು ಮುಚ್ಚಿಸಿ, ಬಡವರ ಮಕ್ಕಳನ್ನ, ಯುವಜನತೆಯನ್ನು ಶಿಕ್ಷಣವಂಚಿತರಾಗಿಸಿ, RSS ಶಾಖೆಗೆ ತಳ್ಳಿ, ಮಜಾ ನೋಡೋ ಬಯಕೆನಾ? ಇದೇನಾ ಇವರ ಶಿಕ್ಷಣ ಪ್ರೀತಿ? ಶಿಕ್ಷಣಕ್ಕಾಗಿ ನಿಮ್ಮ ಹಾಗೂ ನಿಮ್ಮ ಪಕ್ಷ ಈವರೆಗೂ ಮಾಡಿರುವ ಸಾಧನೆಯಾದರೂ ಏನು?  ಕಟ್ಟುವ ಕೆಲಸ ಬಹಳ ಕಠಿಣ, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸವೂ ಧೀರ್ಘ ಹಾಗೂ ಕಷ್ಟಕರ ಆದರೆ ಕಟ್ಟಿರುವುದನ್ನು ಒಡೆಯುವುದು ಬಹಳ ಸುಲಭ. ಸಂಸದರು ಇನ್ನು ಮುಂದಾದರೂ ಕೊಂಚ ಔಚಿತ್ಯ ಪ್ರದರ್ಶಿಸುವಂತಾಗಲಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here