ಸಂಭ್ರಮ ಸಡಗರಕ್ಕೆ ಸಾಕ್ಷಿಯಾದ ’ಮಾರ್ಕೆಟಿಂಗ್ ವಾರಫೇರ್-೨೦೨೦’

0
151

ಕಲಬುರಗಿ: ಅದೊಂದು ಜಾತ್ರೆಯೆ ಹೌದು. ಆ ಮಕ್ಕಳ ಮುಖದಲ್ಲಿ ಸಂತೋಷದ ಛಾಯೆ ಎದ್ದು ಕಾಣುತ್ತಿತ್ತು. ಬಾಲಕಿಯರ ಡೊಳ್ಳು ಬಡಿತದ ನಾದದಲ್ಲಿ, ನಾನೇನು ಕಮ್ಮಿಯಿಲ್ಲ. ಪುರುಷರಷ್ಟೆ ನಾನೂ ಸಮರ್ಥಳು ಎಂಬ ಭಾವ ಹೊರಸೂಸುತ್ತಿತ್ತು. ಹಳ್ಳಿಯ ಸೊಗಡು ಬದುಕಿನ ಶೈಲಿಯ ಒಂದಡೆಯಾದರೆ, ಆಧುನಿಕತೆಯ ಬದುಕಿನ ಶೈಲಿ ಇನ್ನೊಂದೆಡೆ. ಸಂಗೀತದ ಸ್ವರಮಾಧುರ್ಯದಲ್ಲಿ ಎಲ್ಲರ ಮನ ತೇಲುತ್ತಿತ್ತು. ಇದೆಲ್ಲ ಸಡಗರ ಸಂಭ್ರಮ ಕಂಡು ಬಂದಿದ್ದು, ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ.

ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದ ಆವರಣದಲ್ಲಿ ಎಂಬಿಎ ಮತ್ತು ಎಂಕಾಮ್ ವಿದ್ಯಾರ್ಥಿಗಳಿಂದ ಶನಿವಾರ ’ಮಾರ್ಕೆಟಿಂಗ್ ವಾರಫೇರ್-೨೦೨೦’ ಆಯೋಜಿಸಲಾಗಿತ್ತು. ಎಂಬಿಎ ವಿದ್ಯಾರ್ಥಿಗಳು ಒಟ್ಟು ೬ ಸ್ಟಾಲ್ (ಮಳಿಗೆ)ಗಳನ್ನು ಸ್ಥಾಪಿಸಿದರು. ಅಶ್ವಿನಿ ವಿ. ವಿಜಯಲಕ್ಷ್ಮಿ ತಂಡದಿಂದ ಚಾಟ್ ಆಂಡ ಚಾಯಿ ಸ್ಪೇಷಲ್ ಮತ್ತು ಉಪಹಾರ ಮಳಿಗೆ, ಮಲ್ಲಿಕಾ, ಅರ್ಜುನ ತಂಡದಿಂದ ವಿಲೇಜ್ ಪಾನ್ ಶಾಪ್ ಮಳಿಗೆ, ಮಹೇಶ ತಂಡದಿಂದ ಫ್ರೂಟೊಹೊಲಿಕ್ ಮಳಿಗೆ, ವೈಷ್ಣವಿ ಬಾವಗಿ ತಂಡದಿಂದ ಗೇಮ್ಸ್, ಅವಿನಾಶ ತಂಡದಿಂದ ಹಳ್ಳಿಮನೆ, ಕಿರಣ ತಂಡದಿಂದ ಕೆಎಂಎಫ್ ಮಳಿಗೆಗಳನ್ನು ಹಾಕಲಾಗಿತ್ತು. ಒಟ್ಟು ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.

Contact Your\'s Advertisement; 9902492681

ಎಂಕಾಮ್ ವಿದ್ಯಾರ್ಥಿಗಳು ಒಟ್ಟು ೫ ಸ್ಟಾಲ್ (ಮಳಿಗೆ)ಗಳನ್ನು ಸ್ಥಾಪಿಸಿದರು. ಭಾಗ್ಯಶ್ರೀ ಎಂ ತಂಡದಿಂದ ಚಾಟ್ ಛೊಟ್ರೆ ಮಳಿಗೆ, ಪಲ್ಲವಿ ತಂಡದಿಂದ ಕ್ರಿಸ್ಪೀ ಸ್ನ್ಯಾಕ್ಸ್ ಮಳಿಗೆ, ಓಮಿಕಾ ಹಂಗ್ರಿ ಬಡ್ರ್ಸ್, ನೀಶಾ ತಂಡದಿಂದ ಮಿಸಲ್ಕಾ ಮೆಹೆಫಿಲ್, ಸಾಯಿನಾಥ ತಂಡದಿಂದ ಅಂತಮಾಸ ಐಸ್ಕ್ರೀಮ್, ಸೌಮ್ಯ ತಂಡದಿಂದ ಹಾರರ್ ಹೌಸ್, ಅಶ್ವಿನಿ ಮಂಜುಶ್ರೀ ತಂಡದಿಂದ ಹೆಲ್ತ್ ಹೌಸ್ ಹಾಕಲಾಗಿತ್ತು.

ಸಂಸ್ಕೃತಿ ಮರೆಮಾಚುತ್ತಿರುವ ಸಂದರ್ಭದಲ್ಲಿ ಹಳ್ಳಿಯ ಸೊಗಡನ್ನು ಮತ್ತೆ ಪರಿಚಯಿಸುವ ಪ್ರಯತ್ನ ಮಾಡಿದರು ಎಂಬಿಎ ವಿದ್ಯಾರ್ಥಿಗಳು. ಸೇರು, ಅಚ್ಚೇರು, ರೊಟ್ಟೆ ಬುಟ್ಟಿ, ತಾಸಬುಟ್ಟಿ, ಹಾರಿ, ಓಣಕ್ಕೆ, ಬೀಸುವ ಕಲ್ಲು, ಖಲಿಗಲ್ಲು, ಕುಳ್ಳು, ಕಂಬಳಿ, ಈಳಿಗೆ ಮುಂತಾದವುಗಳನ್ನು ಪ್ರದರ್ಶಿಸಿ, ಹಳ್ಳಿ ಮನೆ ಸೊಗಡು ಮರುಕಳಿಸಿದರು.

ಈ ಸಂದರ್ಭದಲ್ಲಿ ವಿವಿ ಸಮ ಕುಲಪತಿ ಡಾ. ವಿ.ಡಿ. ಮೈತ್ರಿ ಕಾರ್ಯಕ್ರಮ ಉದ್ಘಾಟಿಸಿದರು ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ, ಡೀನ್ ಡಾ.ಲಕ್ಷ್ಮಿ ಮಾಕಾ ಮತ್ತು ಡಾ. ಬಸವರಾಜ ಮಠಪತಿ, ಡಾ. ಶಿವದತ್ತ ಹೊನ್ನಳ್ಳಿ, ಡಾ. ಬಸವರಾಜ ಹೂಗಾರ, ಡಾ. ವಾಣೀಶ್ರೀ, ಡಾ. ಗೀತಾ ಹರವಾಳ, ಡಾ. ಎನ್.ಎಸ್.ಪಾಟೀಲ, ಡಾ.ಡಿ.ಟಿ.ಅಂಗಡಿ, ಟಿ.ವಿ.ಶಿವಾನಂದನ್, ಡಾ.ಸುರೇಶ ನಂದಗಾಂವ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here