ಚಿಂಚೋಳಿ: ಚಿಂಚೋಳಿ ಕ್ಷೇತ್ರದ ಉಪಚುನಾವಣೆ ಪ್ರಯೂಕ್ತ ಬಿಜೆಪಿ ಅಭ್ಯರ್ಥಿ ಪರ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಮಾಜಿ ಸಚಿವ ಹಾಗೂ ಶಾಸಕರಿಗೆ ಘೇರಾವ ಹಾಕಿದ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು, ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಅವಕಾಶ ನೀಡದೆ ಗ್ರಾಮದಿಂದ ವಾಪಸ್ ಕಳಿಸಿರುವ ಘಟನೆ ಸಂಭವಿಸಿದೆ.
ಚಿಂಚೋಳಿ ಕ್ಷೇತ್ರದ ಮೋಘ ಗ್ರಾಮದ ಈ ಪ್ರಸಂಗ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ ಜಾಧವ್ ಪರ ಚುನಾವಣೆ ಪ್ರಚಾರಕ್ಕೆ ಮಾಜಿ ಸಚಿವ ವಿ. ಸೋಮಣ, ಕಲಬುರಗಿ ದಕ್ಷಿಣ ಕ್ಷೇತ್ರ ಶಾಸಕ ದತ್ತಾತ್ರೇಯ ಪಾಟೀಲ್ ಹಾಗೂ ಮಾಜಿ ಶಾಸಕ ಸುನೀಲ್ ವಲ್ಯಾಪುರ ಗ್ರಾಮಕ್ಕೆ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ತಡೆದು ಅವರ ಕಾರಿಗೆ ಘೇರಾವ ಹಾಕಿ ತರಾಟೆಗೆ ತೆಗೆದುಕೊಂಡಿರು ಘಟನೆ ನಡೆದಿದೆ.
ಉಮೇಶ್ ಜಾಧವ್ ಅವರು ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಸುಕ್ತ ಕಾರಣ ನೀಡದೇ ಪಕ್ಷ ತೋರೆದಿದಲ್ಲದೆ, ತಮ್ಮ ಪುತ್ರನಿಗೆ ಕಣಕಿಳಿಸಿ ಉಪ ಚುನಾವಣೆ ನಡೆದಂತೆ ಮಾಡಿದಾರೆ, ಈಗ ಯಾವ ನೈತಿಕತೆಯಿಂದ ನಮ್ಮ ಕ್ಷೇತ್ರದಲ್ಲಿ ಮತದಾರರಿಗೆ ಓಟು ಕೇಳ ಬುರುತ್ತಿದ್ದಾರೆಂದು ಗ್ರಾಮಸ್ಥರು ಮಾಜಿ ಸಚಿವ ಹಾಗೂ ಶಾಸಕರಿಗೆ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು.
ಇದರಿಂದ ಮುಜುಗರಕ್ಕೆ ಒಳಗಾದ ಮಾಜಿ ಸಚಿವರು ಮತ್ತು ಶಾಸಕರು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಗ್ರಾಮಸ್ಥರು ಹಟ್ಟಬಿಡದೇ ಪ್ರಶ್ನೆಗಳ ಮೇಲೆ ಪ್ರಶ್ನೆಸುತ್ತಿರುವುದರಿಂದ ಮುಜುಗರ ಉಂಟಾಗಿ ಹಿಂತಿರುಗಿದ್ದಾರೆ ಎನ್ನಲಾಗಿದೆ.