ಕಲಬುರಗಿ: ಇಲ್ಲಿನ ಸಂಗಮೇಶ್ವರ ಮಹಿಳಾ ಮಂಡಳಿಯ 43ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಾಳೆ 10:30 ನಗರದ ಸಂಗಮೇಶ್ವರ ಮಹಿಳಾ ಮಂಡಳಿಯ ಆವರಣದಲ್ಲಿ ನಡೆಯಲ್ಲಿದೆ ಎಂದು ಸಂಘದ ಉಪಾಧ್ಯಕ್ಷ ಡಾ. ಮಹಾದೇವಿ ಮಲಕರಡ್ಡಿ ತಿಳಿದ್ದಾರೆ.
ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ, ಅಮರನಾಥ ಪಾಟೀಲ ಮಳಿಗೆಗಳಿಗೆ ಅನಾವರಣಗೋಳಿಸಿಲಿದ್ದಾರೆ. ಸಮಾರಂಭದ ಮುಖ್ಯ ಅತಿಥಿ ಕಲಾವಿದೆ ಮೇಘಾ ಪಾಂಡ್ವೆ ಮತ್ತು ರಂಗಾಯಣ ನಿರ್ದೇಶಕ ಪ್ರಭಾಕರ ಜೋಷಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷತೆ ವೈಶಾಲಿ ದೇಶಮುಖ ವಹಿಸಲಿದ್ದಾರೆ. ವಿದುಷಿ ತಾರಾಬಾಂಣು ಕುಲಕರ್ಣಿ, ನರ್ಮದಾ ಕಿಶನರಾವ್ ಚಿಂಚನ್ಸೂರು, ಸ್ವನ್ನಾ ಅಮಿತ್ ದೇಶಪಾಂಡೆ ಅವರಿಗೆ ಸನ್ಮಾನಿಸಲಾಗುವುದೆಂದು ಕಾರ್ಯದರ್ಶಿ ಶೋಭಾ ರಂಜೋಳಕರ್ ತಿಳಿದ್ದಾರೆ.
ಮಧ್ಯಾಹ್ನ 1.30 ರಿಂದ ರಾತ್ರಿ 8.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ವರ್ಣಸಿಂಧು ನಾಟ್ಯ ಕಲಾ ಕೇಂದ್ರ ವಿದ್ಯಾರ್ಥಿಗಳಿಂದ ಭರತ ನಾಟ್ಯ, ವೀರಸಂಗಮ್ಮ ಹುಣಸಿಗಿ ಅವರಿಂದ ಜಾನಪದ ಗೀತೆ, ಶಾರದಾ ಸಂಗೀತ ವಿದ್ಯಾಲಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ, ಮಹಿಳೆಯರಿಂದ ಜಾನಪದ ಗೀತೆ, ಭದ್ಮ ವೇಷ ಸ್ಪರ್ಧೆಗಳು ಮತ್ತು ಕಿರು ನಾಟಕ ನಡೆಯಲಿದ್ದು, ಮೇ ಫ್ಲವರ್ ನರ್ಸರಿ ಮಕ್ಕಳಿಂದ ನೃತ್ಯ ಹಾಗೂ ರಾಮವ್ವ ಬಾಳಾರಿ ಮತ್ತು ಸಂಗಡಿಗಳಿಂದ ಜೋಗತಿ ನೃತ್ಯ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಸಂಘದ ಸಹ ಕಾರ್ಯದರ್ಶಿ ಸಂಧ್ಯಾ ಹೊನಗುಂಟಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.