ಸೇಡಂ: ಮಕ್ಕಳು ಆರೋಗ್ಯದ ಕಡೆ ಹಾಗೆ ಕಲಿಕೆಗೆ ನಿರಂತರ ಪ್ರಯತ್ನಗಳನ್ನು ಮಕ್ಕಳಿಗೆ ಕಠಿಣವಾದ ವಿಷಯ ಸರಳವಾಗಿಲು ನಿರಂತರ ಪ್ರಯತ್ನ ಮಾಡಬೇಕು ಇದರ ಜೊತೆಗೆ ಯೋಗ ಮತ್ತು ಧ್ಯಾನದ ಅರಿವು ವಿದ್ಯಾರ್ಥಿಗಳು ಬಳಸಿ ಕೊಂಡಾಗ ಮಾತ್ರ ಉತ್ತಮ ಕಲಿಕೆಯಿಂದ ಗುಣಮಟ್ಟದ ಕಲಿಕೆಗಾಗಿ ಸರ್ಕಾರ ಸೇರಿದಂತೆ ಸಂಘ,ಸಂಸ್ಥೆಗಳು ಪ್ರಯತ್ನ ಮಾಡುತ್ತಿವೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಹಿರಿಯ ಜಿಲ್ಲಾ ಆರೋಗ್ಯ ಸಹಾಯಕ ಸಂತೋಷ ಕಾಳಗಿ ಹೇಳಿದರು.
ನಗರದ ಮೊರಾರ್ಜಿ ದೇಸಾಯಿ ವಸತಿ ರಹಿತ ಫ್ರೌಡ ಶಾಲೆಯ ಸಭಾಂಗಣದಲ್ಲಿ, ನೆಹರು ಯುವ ಕೇಂದ್ರ ಕಲಬುರಗಿ, ಹರ್ಷ ನಗರ ಮತ್ತು ಗ್ರಾಮಿಣ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ರಿ ಮತ್ತು ಪ್ರಗತಿ ಮತ್ತು ಸ್ನೇಹ ಯುವತಿ, ಯುವಕ ಸಂಘ , ಮೊರಾರ್ಜಿ ದೇಸಾಯಿ ವಸತಿ ರಹಿತ ಫ್ರೌಡ ಶಾಲೆ ಇವರ ಸಂಯುಕ್ತಾಶ್ರದಲ್ಲಿ. ಯುವ ನಾಯಕತ್ವ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಗಾರ ಕಾರ್ಯಕ್ರಮದ ಕಾಲೇಜಿನ ವಿದ್ಯಾರ್ಥಿಗಳಿಗೆ ” ನೆರೆ ಹೊರೆ ಯುವ ಸಂಸತ್ತು “. ಕಾರ್ಯಗಾರ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಉಣಿಸುವ ಮೂಲಕ ಉದ್ಘಾಟಸಿ ಮಾತನಾಡಿದ ಅವರು ಮಕ್ಕಳು ನಮ್ಮ ದೇಶದ ಅಸ್ತಿ ದೇಶದ ಭವಿಷ್ಯ ಅವರ ಮೇಲೆ ನಿಂತಿದೆ ಅವರ ಆರೋಗ್ಯದ ಕಡೆ ಗಮನ ಹರಿಸುವುದು ನಿಮ್ಮಲ್ಲರ ಗುರತರ ಜವಾಬ್ದಾರಿ, ಮಕ್ಕಳ್ಳಿ ದೇಶದ ಪರಂಪರಿಕ ಇತಿಹಾಸದ ಅರಿವು ಮೂಡಿಸಬೇಕಾಗಿದೆ.
ಒಬ್ಬ ವಿದ್ಯಾರ್ಥಿಗೆ ಗುರಿ ಎಷ್ಟು ಮುಖ್ಯವೊ ಅಷ್ಟೇ ಮುಖ್ಯ ನಮ್ಮ ಆರೋಗ್ಯ ಕೂಡ ಈ ಹಿನ್ನೆಲೆಯಲ್ಲಿ ಆರೋಗ್ಯದ ಕಡೆ ವಿದ್ಯಾರ್ಥಿಗಳು ಗಮನವಹಿಸಬೇಕು , ಉತ್ತಮ ಆರೋಗ್ಯದ ಹೊರತು ಉತ್ತಮ ಜೀವನ ಸೃಷ್ಟಿಸಿಕೊಳ್ಳು ಸಾಧ್ಯವಿಲ್ಲ,ಎಂದು ಮಾಹಿತಿ ನಿಡಿದರು.
ತಾಲ್ಲೂಕ ಹಿರಿಯ ಕ್ಷಯರೋಗ ಮೇಲ್ವಿಚಾರಕ ಮಹಾಂತೇಶ್ ಹಾವನೂರ ಮಾತನಾಡುತ್ತಾ , ವಿದ್ಯಾರ್ಥಿಗಳಿಗೆ ಕ್ಷಯರೋಗ ಲಕ್ಷಣಗಳ ಬಗ್ಗೆ ವಿವರಿಸುತ್ತ ಕ್ಷಯರೋಗಿಗಳು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ, ಹಾಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ತೆಗೆದುಕೊಳ್ಳದೆ ಇದ್ದರೆ.
ಒಬ್ಬ ಕ್ಷಯರೋಗಿ ಹತ್ತು ಜನರಿಗೆ ಹರಡಿಸಬಲ್ಲ, ಹಾಗೆ ಇದರ ಲಕ್ಷಣಗಳು ಎರಡು ವಾರಗಳಿಗೂ ಮೇಲ್ಪಟ್ಟು ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ಎದೆ ನೋವು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು, ಕಫದ ಜೊತೆ ರಕ್ತ ಬೀಳುವುದು. ಈ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯ ಸಲಹೆ ಪಡೆದು. ಹಾಗೆ ಲ್ಯಾಬೋರೇಟರಿಯಲ್ಲಿ ಕಫದ ಮಾದರಿ ಪರೀಕ್ಷೆ ಕೇಂದ್ರ ಮಾಡಿಸಲು ಉಚಿತವಾಗಿದೆ ಎಂದು ತಿಳಿಸಿದರು.
ಕ್ಷಯರೋಗಿ ಎಂದು ಧೃಡಪಟ್ಟಲ್ಲಿ ಅವರಿಗೆ ಪೂರ್ಣ ಪ್ರಮಾಣದ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಹಾಗೆ ರೋಗಿಗೆ ಪ್ರತಿ ತಿಂಗಳು ಪೋಷಣ / ಪೌಷ್ಟಿಕಾಹಾರ ಸೇವನೆಗಾ ಐದುನೂರು ರೂಪಾಯಿ ನೆರೆ ಅವರ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡಲಾಗುತ್ತದೆ. ಎಂದು ಹೇಳಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಜಿಲ್ಲಾ. ಟಿ. ಐ. ಎಸ್. ಎಸ್ ಸಮಾಲೋಚಕ ಮಂಜುನಾಥ ಕಂಬಾಳಿಮಠ ಪ್ರಾಸ್ತಾವಿಕ ನುಡಿ ವಿಶೇಷವಾಗಿ ಕೇಂದ್ರ ಸರ್ಕಾರದ ವಾಕ್ಯ ಘೋಷಣೆ “ಭೇಟಿ ಬಚಾವೊ ಭೇಟಿ ಪಾಡವೊ” ಎಂಬುವದರ ಬಗ್ಗೆ ಮಾತನಾಡಿದರು. ವಿಶೇಷವಾಗಿ ” ವಿಶ್ವ ಕ್ಷಯರೋಗ ದಿನ 24 ಮಾರ್ಚ್ ” ಅಂಗವಾಗಿ ಪ್ರೌಢ ಶಾಲಾ ಮಕ್ಕಳಿಗೆ ಕ್ಷಯರೋಗ ಬಿತ್ತಿ ಪತ್ರ ಓದುವ ಮೂಲಕ ಜಾಗೃತಿ ಮಂಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದೈಹಿಕ ಶಿಕ್ಷಕ ಅನಂತ ರೆಡ್ಡಿ ವಹಿಸಿದರು, ವೇದಿಕೆ ಮೇಲೆ ಮಹಮ್ಮದ್ ಖಾಯ್ಯುಮ್ ಸ್ವಾಗತಿಸಿದರು, ಮೃತುಜಾ ಬಳಿಗಾರ. ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು .