ವಿದ್ಯಾರ್ಥಿ ಜೀವನಕ್ಕೆ ಪುಸ್ತಕಗಳ ಪಾತ್ರ ಮುಖ್ಯ: ತೇಗಲತಿಪ್ಪಿ ಅಭಿಮತ

0
50

ಕಲಬುರಗಿ: ವಿದ್ಯಾರ್ಥಿಯ ಜೀವನವನ್ನು ರೂಪಿಸುವಲ್ಲಿ ಪುಸ್ತಕಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅಭಿಪ್ರಾಯಪಟ್ಟರು.

ಬೀದರ ಜಿಲ್ಲೆಯ ಹುಮನಾಬಾದ ಪಟ್ಟಣದ ಎಕ್ಸಲೆಂಟ್ ಪಬ್ಲಿಕ್ ಶಾಲಾ ವಾರ್ಷಿಕೋತ್ಸವ, ‘ಕಾರಂಜಾ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೊಲೀಸ್ ಲೇಖಕ ಶಕೀಲ್ ಐ.ಎಸ್. ಅವರ ವಿರಚಿತ ‘ನಳದಮಯಂತಿ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರಿಂದ ಜ್ಞಾನದ ಜತೆಗೆ ವಿವೇಕ, ವಿನಯ, ಸಂಸ್ಕಾರವನ್ನು ಹೆಚ್ಚಿಸುತ್ತದೆ ಎಂದು ಮಾರ್ಮಿಕವಾಗಿ ಮಾತನಾಡಿದರು.

Contact Your\'s Advertisement; 9902492681

ಹುಮನಾಬಾದ ಪಿಐ ರವಿಕುಮಾರ ಸಮಾರಂಭ ಉದ್ಘಾಟಿಸಿದರು. ತಹಾಸೀಲ್ದಾರ ನಾಗಯ್ಯ ಹಿರೇಮಠ ಅವರು ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಬೀದರಿನ ಹಿರಿಯ ಸಾಹಿತಿ ಹಂಶಕವಿ ಪುಸ್ತಕ ಪರಿಚಯ ಮಾಡಿದರು.

ಇಂದಿನ ಬದಲಾದ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಟ್ವಿಟರ್, ಫೇಸ್ಬುಕ್, ವಾಟ್ಸಪ್ ಗಳಲ್ಲಿ ಅನೇಕ ವಿದ್ಯಾರ್ಥಿಗಳು ಸ್ನೇಹಿತರನ್ನು ಹೊಂದಿರುತ್ತಾರೆ, ಆದರೆ ಕಷ್ಟ-ಸುಖ ಹಂಚಿಕೊಳ್ಳಲು, ಆಟವಾಡಲು ಇಬ್ಬರು ಸ್ನೇಹಿತರನ್ನು ಹೊಂದಿರದೇ ಇರುವುದು ಖೇದಕರ ಸಂಗತಿಯಾಗಿದೆ.ಆದ್ದರಿಂದ ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ಬೆಳೆಸುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ

ಹಿರಿಯ ಸಾಹಿತಿ ಬಿ.ಎಸ್.ಖೂಬಾ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಕಾಶಿನಾಥ ರೆಡ್ಡಿ, ಓಂಪ್ರಕಾಶ ದಡ್ಡೆ, ರಮೇಶ ಬಿರಾದಾರ, ಸಿ.ಆರ್.ಪಿ. ಮಹಾದೇವ ಮೇತ್ರೆ, ಪ್ರಮುಖರಾದ ರವೀಂದ್ರರೆಡ್ಡಿ ಮಾಲಿಪಾಟೀಲ, ಶ್ರೀದೇವಿ ಹೂಗಾರ , ಡಾ.ಜಯದೇವಿ ಗಾಯಕವಾಡ, ಲೋಕೇಶ ರೆಡ್ಡಿ, ರವೀಂದ್ರಕುಮಾರ ಭಂಡಾರಿ, ಶಿವರಾಜ ಮೇತ್ರೆ, , ಹಾಸ್ಯ ಕಲಾವಿದ ರೇವಣಸಿದ್ಧಯ್ಯಾ ಸ್ವಾಮಿ, ಲೇಖಕ ಶಕೀಲ್ ಐ.ಎಸ್. ವೇದಿಕೆ ಮೇಲಿದ್ದರು.

ಸಾಹಿತ್ಯ ಕ್ಷೇತ್ರದ ಸಾಧಕರಾದ ಎಂ.ಜಿ.ದೇಶಪಾಂಡೆ, ಮಾಣಿಕರೆಡ್ಡಿ ಟಿ ಜೆ. ಇಸ್ಲಾಂಪುರ, ಶಿ.ಚ.ಕಳ್ಳಿಮಠ, ಶ್ರೀಮತಿ ರುಕ್ಸನಾ ನಾಝನೀಸ್, ಸೂರ್ಯಕಾಂತ ಸಾಸನೂರ ಅವರಿಗೆ ‘ಕಾರಂಜಾ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here