ಟೀಚಿಂಗ್ ಎಕ್ಸಲೆನ್ಸ್ ವಿಥ್ ಎನ್.ಎಲ್.ಪಿ ಒಂದು ದಿನದ ಕಾರ್ಯಾಗಾರ

0
63

ಸಿಂದಗಿ: ಆಂತರ್ಯ ವಿಜ್ಞಾನದ ರಹಸ್ಯವನ್ನರಿತು (ಎನ್ ಎಲ್ ಪಿ) ನ್ಯೂರೊ ಲಿಂಗ್ವಿಸ್ಟಿಕ್ ಪ್ರೋಗ್ರಾಮಿಂಗ್ ತಿಳಿದುಕೊಂಡು ಪಾಠ ಮಾಡಿದರೆ ವಿದ್ಯಾರ್ಥಿಗಳಲ್ಲಿ ಉತ್ತಮ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಬಹುದಾಗಿದೆ ಎಂದು ಬೆಂಗಳೂರಿನ ಟ್ರಾನ್ಸ್‌ಫಾರ್ಮೋ ಇನ್‌ಕಾರ್ಪ್ ತರಬೇತಿ ಸಂಸ್ಥೆಯ ಮನೋತಜ್ಞ  ಹಾಗೂ ಶೈಕ್ಷಣಿಕ ತಜ್ಞ ಭುಜಬಲಿ ಬೋಗಾರ್ ಹೇಳಿದರು.

ಇಂದು ಸಿಂದಗಿ ಪಟ್ಟಣದ ಜಿ.ಪಿ.ಪೋರವಾಲ್ ಕಲಾ,ವಾಣಿಜ್ಯ ಮತ್ತು ವಿವಿ ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಟೀಚಿಂಗ್ ಎಕ್ಸಲೆನ್ಸ್ ವಿಥ್ ಎನ್.ಎಲ್.ಪಿ ಅನ್ನುವ ಒಂದು ದಿನದ ಕಾರ್ಯಾಗಾರ ನಡೆಸಿಕಟ್ಟ ಭುಜಬಲಿ ಅವರು,ವಿದ್ಯಾರ್ಥಿಗಳಲ್ಲಿನ ವಿಶೇಷ ಕೌಶಲ್ಯಗಳನ್ನು ಗುರ್ತಿಸಿ ಅವರಲ್ಲಿನ ಪ್ರತಿಭೆ ಹೊರತೆಗೆಯುವ ಕೆಲಸ ಉಪನ್ಯಾಸಕರಿಂದಾಗಬೇಕಾಗಿದೆ. ಹಾಗಾಗಿ ಉಪನ್ಯಾಸಕರುತಮ್ಮ ವ್ಯಕ್ತಿತ್ವವನ್ನು ಪ್ರಭಾವಶಾಲಿ ಹಾಗೂ ಮಾದರಿಯಾಗಿಸಿಕೊಳ್ಳಲು ಪರಿಣಾಮಕಾರಿ ಬೋಧನೆಗೆ ಈ ರೀತಿಯ ತರಬೇತಿ ಕಾರ್ಯಾಗಾರಗಳು ಅತ್ಯವಶ್ಯಕವಾಗಿವೆ ಎಂದು ಹೇಳಿದರು.

Contact Your\'s Advertisement; 9902492681

ಉಪನಸ್ಯಾಸಕರಿಗಾಗಿ ಟೀಚಿಂಗ್ ಎಕ್ಸಲೆನ್ಸ್ ವಿಥ್ ಎನ್.ಎಲ್.ಪಿ ಅನ್ನುವ ಕಾರ್ಯಾಗಾರ ಶಿಬಿರವನ್ನು ಆಯೋಜಿಸಿದ್ದು ಬಹಳ ಸೂಕ್ತ ಮತ್ತು ಅತಿ ಅವಶ್ಯಕವಾಗಿದೆ. ತರಬೇತಿ ನೀಡಲು ಬೆಂಗಳೂರಿನಿಂದ ಆಗಮಿಸಿದ ಮನೋತಜ್ಞ ಹಾಗೂ ಶೈಕ್ಷಣಿಕ ತಜ್ಞ, ಭುಜಬಲಿ ಬೋಗಾರ ಅವರಿಗೂ ನಾನು ಅಭಿನಂದನೆ ಹೇಳುತ್ತೇನೆ, ಉಪನ್ಯಾಸಕವರ್ಗದವರಾದ ತಾವೆಲ್ಲರೂ ಈ ತರಬೇತಿ ಶಿಬಿರದ ಸದುಪಯೋಗ ಪಡೆದು ಅತ್ಯುತ್ತಮ ಉಪನ್ಯಾಸಕರಾಗಿ ಕಾರ್ಯರ್ನಿಹಿಸಿ.

ಆವಾಗಲೇ ಡಾ.ಏ.ಪಿ,ಜೆ.ಅಬ್ದುಲ್ ಕಲಾಂ ಅವರ ಭಾರತವನ್ನು ಒಂದು ವಿಶ್ವಶಕ್ತಿ ದೇಶವನ್ನಾಗಿ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಮೌನಯೋಗಿ ಫೌಂಡೇಶನ್ನಿನ ಸಂಸ್ಥಾಪಕ ಅಧ್ಯಕ್ಷರಾದ ಶ್ರಾವಣಯೋಗಿ ಹಿರೇಮಠ ಅವರು ಹೇಳಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ.ಆರ್.ಎಸ್.ಬುಶೆಟ್ಟಿ, ಐಕ್ಯುಎಸಿ ಸಂಯೋಜಕರಾದ ಡಿ.ಎಂ.ಪಾಟೀಲ್ ,ಪ್ರಾದ್ಯಾಪಕ ಎಂ.ಆರ್.ರೂಡಗಿ ಆಡಳಿತ ಮಂಡಳಿ ಸದಸ್ಯರು,ಉಪಾಧ್ಯಕ್ಷರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here