ಅಧಿವೇಶನದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ವಿವಿದೆಡೆ ಎಸ್.ಎಫ್.ಐ ಪ್ರತಿಭಟನೆ

0
38

ರಾಯಚೂರು: ಮಾರ್ಚ್ 5ರಂದು ಆರಂಭವಾಗುವ  ಅಧಿವೇಶನದಲ್ಲಿ ಶಾಸಕರುಗಳು ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್, ಬಸ್ ಪಾಸ್, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾಸಿಕ 3500 ರೂಪಾಯಿ ಆಹಾರ ಭತ್ತೆ ನೀಡಬೇಕೆಂದು ಎಂದು ಜಿಲ್ಲಾದ್ಯಾಂತ ಎಸ್.ಎಫ್.ಐ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಒತ್ತಾಯಿಸಿದೆ.

ಕೊಠಾರಿ ಆಯೋಗದ ಶಿಫಾರಸಿನಂತೆ ರಾಜ್ಯ ಬಜೆಟ್ ನಲ್ಲಿ 30% ಹಣವನ್ನು ಮೀಸಲಿಡುವ ಬಗ್ಗೆ ಅಧಿವೇಶನದಲ್ಲಿ ಶಾಸಕರುಗಳು  ಚರ್ಚಿಸಬೇಕೆಂದು, ಬೇಡಿಕೆಯ ಜಾರಿಗೆ ಕ್ರಮಕೈಗೊಳ್ಳಬೇಕೆಂದು ಹಾಗೂ ಸಿರವಾರ ತಾಲೂಕಿಗೆ ಸರ್ಕಾರಿ ಡಿಪ್ಲೊಮಾ, ಐಟಿಐ ಕಾಲೇಜು, ಹಾಸ್ಟೆಲ್ ಸೇರಿ ತಾಲೂಕಿನ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಒತ್ತಾಯಿಸಿ ಸಿರವಾರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಬೃಹತ್ ಹೋರಾಟವನ್ನು ಮಾಡಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

Contact Your\'s Advertisement; 9902492681

ಈ ಸಂಧರ್ಭದಲ್ಲಿ SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿದರು. ತಾಲೂಕು ಅಧ್ಯಕ್ಷ ಚಿದಾನಂದ ಕರಿಗೂಳಿ, ಕಾರ್ಯದರ್ಶಿ ಪ್ರವೀಣ್ ಕುಮಾರ್, ಮುಖಂಡರಾದ ಸುನೀಲ್ ಕುಮಾರ್ ಹಣಿಗಿ, ಪ್ರತಾಪ್, ಸುದರ್ಶನ್ ಹಾಗೂ DYFI ರಾಜ್ಯ ಸಮಿತಿ ಸದಸ್ಯರಾದ ಚಂದ್ರಶೇಖರಗೌಡ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸಂಧರ್ಭದಲ್ಲಿ SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, ಮುಖಂಡರಾದ ದೀಲ್ ಶಾದ್, ಉಮೇಶ ನಾಯಕ, ಖಾಸಂಬಿ ಸೇರಿದಂತೆ ವಿದ್ಯಾರ್ಥಿಗಳುಭಾಗವಹಿಸಿದ್ದರು.

ಲಿಂಗಸ್ಗೂರು ಶಾಸಕರ ಕಛೇರಿ ಮುಂದೆ ಹೋರಾಟವನ್ನು ಮಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮತ್ತು ಶಾಸಕರ ಸಹಾಯಜರ ಮೂಲಕ ಮನವಿಯನ್ನು ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ SFI ಜಿಲ್ಲಾ ಅಧ್ಯಕ್ಷರಾ ರಮೇಶ ವೀರಾಪುರ, DYFI ರಾಜ್ಯ ಸಮಿತಿ ಸದಸ್ಯರಾದ ಶಿವಪ್ಪ ಬ್ಯಾಗವಾಟ್ ಸೇರಿದಂತೆ ಅನೇಕರಿದ್ದರು.

ರಾಜ್ಯದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಒತ್ತಾಯಿಸಿ, ರಾಜ್ಯದ ವಿವಿಧೆಡೆ SFI ನೇತೃತ್ವದಲ್ಲಿ ಕೋಲಾರ, ರಾಯಚೂರು, ಹಾವೇರಿ ಕೊಪ್ಪಳ, ಕಲ್ಬುರ್ಗಿ, ಯಾದಗಿರಿ, ಹೊಸಪೇಟೆ, ಗಂಗಾವತಿ, ಸಿರವಾರ, ಲಿಂಗಸ್ಗೂರು, ಆನೇಕಲ್, ಶಹಾಪುರ, ಶಿಗ್ಗಾಂವ್, ಕನಕಗಿರಿ, ರಾಣಿಬೆನ್ನೂರು, ಶ್ರಿನಿವಾಸಪುರ, ಚಿಕ್ಕಬುಳ್ಖಾಪುರ ಸೇರಿದಂತೆ ರಾಜ್ಯದಾದ್ಯಂತ ಬೃಹತ್ ಹೋರಾಟವನ್ನು ಮಾಡಿ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರ, ತಹಶಿಲ್ದಾರರ ಮತ್ತು ಇತರ ಸಂಬಂಧಿಸಿದ ಅಧಿಕಾರ ಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here