- ಸಾಜಿದ್ ಅಲಿ
ಕಲಬುರಗಿ: ವಾರ್ಡ್ ನಂ 13ರಲ್ಲಿ ಹತ್ತರ ಅಬುಬಕರ್ ಕಾಲೋನಿಯ ಹಿಟ್ಟಿನ ಕಿರಣಿಯ ಹತ್ತಿರ 5 ಕಿಂತ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕೆ ಉರಳುವ ಸ್ಥಿತಿಯಲ್ಲಿವೆ. ಬಡವಾಣೆಯ ನಿವಾಸಿಗಳು ಪ್ರತಿದಿನ ರಸ್ತೆಯಲ್ಲಿ ಚಲಿಸುವಲ್ಲಿ ಆತಂಕ ಪಡುವ ವಾತಾವರಣ ಬಡವಾಣೆಯಲ್ಲಿ ನಿರ್ಮಾಣವಾಗಿದೆ.
ಸುಮಾರು ನಾಲ್ಕು ಕಿ.ಮಿ ವಿಸ್ತೀರ್ಣದಲ್ಲಿರುವ ಈ ಬಡಾವಣೆಯಲ್ಲಿ 5 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿಳುವ ಹಂತದಲ್ಲಿವೆ. ವಿದ್ಯುತ್ ತಂತಿಗಳು ನೆಲಕ್ಕೆ ಹೆಚ್ಚಿನ ಜೀವ ಮತ್ತು ಹಾನಿ ಉಂಟಾಗುವ ಮುಂಚೆ ಇಲಾಖೆ ಎಚ್ಚೆತ್ತುಕೊಂಡು ಕಂಬಳ ಸುಧಾರಣೆ ನಡೆಸಿ ಅನಾಹುತ ತಪ್ಪಿಸಬೇಕೆಂದು ಬಡಾವಣೆಯ ನಿವಾಸಿ ಅಬ್ದುಲ್ ರಹೇಮಾನ ಮನವಿ ಮಾಡಿದ್ದಾರೆ.
ಪ್ರತಿ ದಿನ ರಸ್ತೆಯಲ್ಲಿ ಶಾಲಾ ಮಕ್ಕಳು ಮತ್ತು ವಾಹನಗಳು ಚಲಿಸುತ್ತಿರುತ್ತವೆ, ಗಾಳಿ ಮತ್ತು ಮಳೆ ಬಂದರೆ ಜನರಲ್ಲಿ ಈ ವಿದ್ಯುತ್ ಕಂಬಗಳನ್ನು ಕಂಡು ಭೀತಿ ಉಂಟಾಗುತ್ತದೆ ಎಂದು ಬಡಾವಣೆಯ ನಿವಾಸಿಗಳು ಗೋಳು ಇದ್ದಾಗಿದೆ.
ಜಿಲ್ಲಾ ವಿದ್ಯುತ್ ಸರಬರಾಜು ಇಲಾಖೆಯ ಸಿಬ್ಬಂದಿಗಳು ಕೂಡ ಇಂತಹ ಕಂಬಗಳ ಮೇಲೆ ಎರಿ ಕೆಲಸ ಮಾಡಲು ಹಿಂಜರಿಯುತ್ತಿದ್ದು, ಅವರು ಕೂಡ ವಿದ್ಯುತ್ ಸಂಪರ್ಕ ದರುಸ್ಥಿಯ ವೇಳೆ ಹಿಂಜಿರುಯುದಲ್ಲದೇ, ಸಿಬ್ಬಂದಿಗಳ ಬಲಿ ಪಡೆಯಲು ಕಾಯುತ್ತಿವೆ.
ಇಲಾಖೆ ತಕ್ಷಣ ಎಚ್ಚೆತುಕೊಂಡು ಸ್ಥಳಕ್ಕೆ ಧಾವಿಸಿ ಕಂಬಗಳ ದುರಸ್ತಿ ನಡೆಸಬೇಕೆಂದು ಬಡಾವಣೆಯ ನಿವಾಸಿಗಳ ಕೂಗಾಗಿದೆ.