ಕಲಬುರಗಿ: ಚಿಂಚೋಳಿ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಬಿಜೆಪಿ ಪ್ರಮುಖ ಬಾಬುರಾವ ಚಿಂಚನಸೂರ ಅವರು ತೊಡೆ ತಟ್ಟಿದ ಪ್ರಸಂಗ ಗ್ರಾಮದಲ್ಲಿ ನಡೆದಿದೆ.
ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ ಜಾಧವ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಡಾ. ಉಮೇಶ ಜಾಧವ ಅವರ ಸಮ್ಮುಖದಲ್ಲೇ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೊಡೆ ತಟ್ಟಿ ನಿಂತವರು ನಮ್ಮ ಉಮೇಶ ಜಾಧವ. ಈವರೆಗೆ ಅವರ ವಿರುದ್ಧ ಯಾರು ಮಾತನಾಡುವಂತಿರಲಿಲ್ಲ ಎಂದು ತಮ್ಮ ತೊಡೆಯನ್ನು ತಾವೇ ತಟ್ಟಿಕೊಂಡು ಹೇಳಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಸಾಲಹಳ್ಳಿಯಲ್ಲಿ ಹೇಳಿ ಉಮೇಶ ಜಾಧವ, ಖರ್ಗೆ ವಿರುದ್ಧ ನಿಜವಾದ ಗಂಡು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿಶ್ಬನಾಥ ಪಾಟೀಲ ಹೆಬ್ಬಾಳ ಗ್ರಾಮದ ಮುಖಂಡರು ಸೇರಿದಂತೆ ಮುಂತಾದವರು ಇದ್ದರು.