ನಾಳೆ ಬಸವ ಸಮಿತಿಯಿಂದ ವಿಶ್ವಮಹಿಳಾ ದಿನಾಚರಣೆ

0
118

ಕಲಬುರಗಿ: ಬಸವ ಸಮಿತಿಯು ಮಹಿಳೆಯರಿಗಾಗಿ, ಮಹಿಳಾ ಜಾಗ್ರತಿಗಾಗಿಕ್ರಿಯಾ ಯೊಜನೆಗಳನ್ನು ರೂಪಿಸಿರುತ್ತದೆ.೧೨ ವರ್ಷಗಳಿಂದ ಪ್ರತಿ ವರ್ಷವೂ ಮಹಿಳಾ ಜಾಗೃತಿಗಾಗಿ ’ಮಹಾದೇವಿಯಕ್ಕಗಳ ಸಮ್ಮೇಳನ’ ಹಮ್ಮಿಕೊಳ್ಳುತ್ತ ಬಂದಿದೆ.ಜೊತೆಗೆ ವರ್ಷಂಪ್ರತಿಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಂಡುಆಚರಿಸುತ್ತ ಬರುತ್ತಿದೆ.

ಇಡೀಜಗತ್ತು ಮಹಿಳೆಯರ ಸಾಧನೆಯನ್ನು ಸ್ಮರಸಿಕೊಳ್ಳಲು ವರ್ಷದಲ್ಲಿಒಂದು ದಿನವನ್ನು ಮಾತ್ರ ಮೀಸಲಾಗಿಟ್ಟರೆ ಹನ್ನೆರಡನೆಯ ಶತಮಾನದಲ್ಲಿ ಶರಣರು ದಿನವೂ ಮಹಿಳಾ ಸ್ವಾತಂತ್ರ ಸಮಾನತೆಗಾಗಿ ಚಿಂತಿಸಿದರು.ಅವರಅಭಿವ್ಯಕ್ತಿಗೆಅನುಭವ ಮಂಟಪದಂತಹ ವೇದಿಕೆಯನ್ನು ನಿರ್ಮಾಣ ಮಾಡಿಕೊಟ್ಟು ಪ್ರೋತ್ಸಾಹಿಸಿದರು.ಅವರ ವೈಚಾರಿಕತೆಗೆ ಮನ್ನಣೆ ನೀಡಿದರು.ಕಲಬುರಗಿ ಬಸವ ಸಮಿತಿಯು ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ.

Contact Your\'s Advertisement; 9902492681

ಆ ಹಿನ್ನೆಲೆಯಲ್ಲಿ  ದಿನಾಂಕ ೮-೩-೨೦೨೦ ರಂದುಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ ಕಾರ‍್ಯಕ್ರಮವನ್ನು ಹಮ್ಮಿಕೊಂಡಿದೆ. ಕನ್ನಡ ನಿವೃತ್ತ ಪ್ರಾಧ್ಯಾಪಕರಾದಡಾ. ನೀಲಮ್ಮ ಕತ್ನಳ್ಳಿ ಅವರು ಮುಖ್ಯಉಪನ್ಯಾಸಕರಾಗಿ ಆಗಮಿಸಿ,  ’ಅಂತರ್ರಾಷ್ಟ್ರೀಯ ಮಹಿಳೆ ಮತ್ತು ಶಿವಶರಣೆಯರು’ ಎಂಬ  ವಿಷಯಕುರಿತುಅನುಭಾವ ನೀಡಲಿದ್ದಾರೆ. ಬೆಂಗಳೂರು ಗ್ರಾಮಾಂತರ ವಿಭಾಗಜಂಟಿ ಸಾರಿಗೆಆಯುಕ್ತರಾದ ಶ್ರೀಮತಿ ಎಂ.ಪಿ.ಓಂಕಾರೇಶ್ವರಿಅವರುಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಕೊಳ್ಳಲಿದ್ದಾರೆ.ಜಯನಗರದ ನೀಲಾಂಬಿಕಾ ಬಳಗದ ಸಹೋದರಿಯರು ಭಜನೆಕಾರ್ಯಕ್ರಮ ನೆರವೇರಿಸಿಕೊಡಲಿದ್ದಾರೆ ಎಂದುಬಸವ ಸಮಿತಿಯ ಅಕ್ಕನ ಬಳಗದ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here