ಸನಾತನ ಸಂಸ್ಕೃತಿಗೆ ಮರು ಜೀವತುಂಬಿದ ಶಂಕರರು: ಅಪ್ಪಣ್ಣ

0
52

ಸುರಪುರ: ಎಂಟನೆ ಕಾಲಘಟ್ಟದಲ್ಲಿ ಜನಿಸಿದ ಶಂಕರರು ಅವರ ಜೀವನ ಪರ್ಯಂತ ಸನಾತನ ಧರ್ಮರಕ್ಷಣೆ ಹಾಗೂ ಅದ್ವೈತ ಸಿದ್ದಾಂತದ ಪ್ರತಿಪಾದನೆಯಿಂದ ಆಗಿನ ಕಾಲದಲ್ಲೆ ಭಾರತವನ್ನು ನಾಲ್ಕುಬಾರಿ ಸಂಚರಿಸಿ ಸನಾತನ ಸಂಸ್ಕೃತಿಗೆ ಮರುಜೀವತುಂಬಿದರು ಎಂದು ಉಪನ್ಯಾಸಕ ಅಪ್ಪಣ್ಣ ಹೇಳಿದರು.

ನಗರದ ತಹಶಿಲ್ದಾರ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ವೈದಿಕ ಮತ ಪ್ರತಿಪಾದಕರಾದ ಆಚಾರ್ಯರು ಸನಾತನ ಧರ್ಮದಲ್ಲಿದ್ದ ಅನೇಕ ತಪ್ಪು ಆಚರಣೆಗಳನ್ನು ಸರಿಪಡಿಸಿ ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ ಷಣ್ಮತ ಪ್ರತಿಷ್ಠಾಪಕರಾದರು ಇಷ್ಟಲ್ಲದೆ ಅವರು ಭಗವದ್ಗೀತೆ, ಉಪನಿಷತ್ ಹಾಗೂ ಬ್ರಹ್ಮ ಸೂತ್ರಗಳಿಗೆ ಬಾಷ್ಯ ಬರೆದ ಮೂದಲ ಆಚಾರ್ಯರಾದರು ಎಂದು ತಿಳಿಸಿದರು.

Contact Your\'s Advertisement; 9902492681

ನಂತರ ತಹಶಿಲ್ದಾರ ಸುರೇಶ ಅಂಕಲಗಿ ಮಾತನಾಡಿ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕುಮಠಗಳು ಇಂದಿಗು ಆಧ್ಯಾತ್ಮ ಕೇಂದ್ರಗಳಾಗಿ ಜಗತ್ತಿಗೆ ಮಾರ್ಗದರ್ಶನ ಮಾಡುವುದರ ಜತೆಗೆ ಅಪಾರವಾದ ಜ್ಞಾನ ಸಂಪತ್ತನ್ನು, ವಿದ್ಯಾಸಂಪತ್ತನ್ನು ತತ್ವ ಜ್ಞಾನವನ್ನು ಧಾರೆ ಎರೆಯುವ ಕೇಂದ್ರಗಳಾಗಿ ರೂಪುಗೊಂಡಿವೆ ಜಗತ್ತಿನ ಅಂಧಕಾರವನ್ನು ತೊಡೆದು ಜ್ಞಾನದ ಬೆಳಕನ್ನು ಚಲ್ಲಿದ ದೇವತಾ ಸ್ವರೂಪಿಯಾದ ಶಂಕರಾಚಾರ್ಯರು ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಮ್ಮ ಜೀವನವನ್ನು ಸಾರ್ಥಕವಾಗಿಸೋಣ ಎಂದರು.

ಶಿಶು ಅಭಿವೃದ್ಧಿ ಅಧಿಕಾರಿ ಲಾಲಸಾಬ, ಖಜಾನಾಧಿಕಾರಿ ಮಂಗಲಕುಮಾರ ಗುಡುಗುಂಟಿ, ಶಂಕರಸೇವಾ ಸಮಿತಿಯ ಅಧ್ಯಕ್ಷ ದೇವಿದಾಸಭಟ್, ರಾಮಭಟ್, ರಮೇಶ ಕುಲ್ಕರ್ಣಿ, ಶ್ರೀನಿವಾಸ ಸಿಂದಗಿರಿ, ಯಜ್ಞೇಶ್ವರಭಟ್, ಶ್ರೀನಿವಾಸ ದೇವಡಿ, ನವೀನ ಕೃಷ್ಣಾ, ಕಲ್ಯಾಣರಾವ ಕೋಟಿಖಾನಿ, ರಾಧಾಬಾಯಿ, ವೀನೋದಬಾಯಿ, ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here