ಕಲಬುರಗಿ: ಜಗತ್ತಿನ ಅತ್ಯಂತ ಪ್ರಾಚೀನ ಸಿದ್ಧಾಂತಗಳಲ್ಲಿ ಒಂದೆನಿಸಿರುವ ಅದ್ವೈತ ತತ್ವವನ್ನು ಪ್ರತಿಪಾದಿಸುತ್ತ ಆದಿ ಶಂಕರಾಚಾರ್ಯರು ಸನಾತನ ಧರ್ಮ ಸ್ಥಾಪನೆಗಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಲು ನೆರವಾದರು ಎಂದು ಪ್ರವಚನಕಾರರಾದ ಡಾ. ಸುರೇಶ ಹೇರೂರು ಹೇಳಿದರು.
ಗುರುವಾರ ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಆದಿ ಶಂಕರಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ೩೨ ವರ್ಷಗಳ ಜೀವಿತಾವಧಿಯಲ್ಲಿ ಹಿಂದೂ ಧರ್ಮದ ಬಗ್ಗೆ ಹೆಚ್ಚಿನ ಒಲವು ತೋರಿದ ಅವರು ವೇದ, ಉಪನಿಷತ್ತು ಹಾಗೂ ಭಗವದ್ಗೀತೆಯನ್ನು ಆಳವಾಗಿ ಅರಿತುಕೊಂಡು ದೇಶದ ನಾಲ್ಕು ದಿಕ್ಕಿನಲ್ಲಿ ಸಂಚರಿಸಿ ಅದ್ವೈತ ಸಿದ್ದಾಂತ ಪ್ರತಿಪಾದಿಸುತ್ತ ಹಿಂದು ಧರ್ಮ ಪಸರಿಸಲು ಕಾರಣಿಭೂತರಾಗಿದ್ದಾರೆ ಎಂದರು.
ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಅಚಾರ್ಯತ್ರಯಯರಲ್ಲಿ ಶಂಕಾರಾಚಾರ್ಯರು ಮೊದಲಿಗರು. ಆದಿ ಶಂಕರಾಚಾರ್ಯರು ಪ್ರತಿಪಾದಿಸುವ ಅದ್ವೈತ ತತ್ವವು ಎರಡಲ್ಲ ಅದು ಒಂದೇ ಆಗಿದೆ. ಅಂದರೆ ಆತ್ಮ ಮತ್ತು ಪರಮಾತ್ಮ ಒಂದೇ. ದೇವರನ್ನು ಕಾಣಲು ಜ್ಞಾನ ಮಾರ್ಗ ಸೂಕ್ತವಾಗಿದೆ ಎಂದರು. ಸಮಾಜದ ಮುಖಂಡ ಎಂ.ಬಿ.ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಸಮಾಜದ ಮುಖಂಡರುಗಳಾದ ಪಿ.ಎಚ್ .ಕುಲಕರ್ಣಿ, ಮುರಳೀಧರರಾವ ಪೂಜಾರಿ, ಗುರುರಾಜ ಕುಲಕರ್ಣಿ, ಡಾ.ಜಿಡಗಿಕರ್, ರಾಘವೇಂದ್ರ ರಾವ ಧಾರವಾಡಕರ್, ರಾಮರಾವ ಕುಲಕರ್ಣಿ, ರಮಾನಂದ ಮೊಹರೆರ್, ಗೋಪಾಲ ಕೃಷ್ಣ, ದಯಾಘನ್ ಧಾರವಾಡಕರ್, ಸದಾನಂದ ಮೊಗೆಕರ್, ನಾನಾಸಾಹೇಬ ಇಜೇರಿ, ಪ್ರಫುಲ್ಲತಾ ಕುಲಕರ್ಣಿ, ಸಂಧ್ಯಾ ಕುಲಕರ್ಣಿ, ದಿವಾಂಜಿ ಮಾಮಿ, ಸುನೀಲ ಕುಲಕರ್ಣಿ, ಉಮಾ ಮಹೇಶ್ವರ ಭಜನ ಮಂಡಳಿ, ಶಾರದ ಭಜನ ಮಂಡಳಿ, ಶಿವಶಂಕರ ಭಜನ ಮಂಡಳಿ, ಗೌರಿ ಶಂಕರ ಅಸ್ಟ್ತೋರ ಸಮಿತಿ, ಆದಿ ಶಂಕರ ಅಸ್ಟ್ತೋತರ ಸಮಿತಿ ಬಿದ್ದಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದರು. ಗುರುರಾಜ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಇದಕ್ಕು ಮುನ್ನ ಆದಿ ಶಂಕಾರಾಚಾರ್ಯರ ಭಾವಚಿತ್ರಕ್ಕೆ ಅತಿಥಿ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಪೂರ್ವಕ ಭಕ್ತಿ ನಮನ ಸಲ್ಲಿಸಿದರು.