ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೊನಾ ಜಾಗೃತಿ ಭಿತ್ತಿ ಪತ್ರ ಬಿಡುಗಡೆ

0
106
ನಗರದ ಸಾರ್ವಜನಿಕ ಆಸ್ಪತ್ರೆಯ ಕೊರೋನೊ ವೈರಸ್ ಸೊಂಕಿತರಿಗಾಗಿ ನಿರ್ಮಿಸಿರುವ ವಿಶೇಷ ಕೋಣೆಗೆ ಶಾಸಕ ನರಸಿಂಹ ನಾಯಕ(ರಾಜುಗೌಡ) ಭೇಟಿ ನೀಡಿ ಕರೊನಾ ಮುಂಜಾಗೃತೆ ಕುರಿತ ಕರಪತ್ರವನ್ನು ಪ್ರದರ್ಶಿಸಿದರು. ಜಿಪಂ ಮಾಜಿ ಅಧ್ಯಕ್ಷ ರಾಜಾ ಹಣಮಪ್ಪ ನಾಯಕ ತಾತಾ, ವೈದ್ಯಾಧಿಕಾರಿ ಡಾ.ಆರ್.ವಿ.ನಾಯಕ, ಡಾ. ಹರ್ಷವರ್ಧನ ರಫಗಾರ ಇದ್ದರು.

ಸುರಪುರ: ಕರೋನೊ ವೈರಸ್‌ಗೆ ಸಾರ್ವಜನಿಕರು ಯಾವುದೆ ರೀತಿಯ ಭಯಪಡುವುದು ಬೇಡ ಈ ಸೊಂಕಿತರ ಆರೈಕೆಮಾಡಲು ನಮ್ಮ ಸರ್ಕಾರಗಳು ಮತ್ತು ವೈದ್ಯರು ಸರ್ಮಥರಾಗಿದ್ದು ಸಾರ್ವಜನಿಕರು ಯಾವುದೆ ರೀತಿಯ ಚಿಂತೆಗೀಡಾಗಬಾರದು ಹಾಗೆ ವೈದ್ಯರೂ ಕೋಡಾ ಇತಂಹ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ರೋಗಿಗಳನ್ನು ತುರ್ತಾಗಿ ಚಿಕಿತ್ಸೆಗೊಳಪಡಿಸಿ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಸೂಚಿಸಿದ್ದಾರೆ.

ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಶನಿವಾರ ಭೇಟಿನೀಡಿ ಕೊರೋನೊ ವೈರಸ್ ತಗುಲಿದ ರೋಗಿಗಳ ಚಿಕಿತ್ಸೆಗಾಗಿ ನಿರ್ಮಿಸಿರುವ ವಿಶೇಷ ಘಟಕವನ್ನು ವಿಕ್ಷಿಸಿ ನಂತರ ಕರೊನಾ ಜಾಗೃತಿ ಕುರಿತಾದ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ನಮ್ಮ ತಾಲೂಕಿನ ಜನ ವ್ಯಾಪಾರ ವಹಿವಾಟಿಗಾಗಿ ಹೈದ್ರಾಬಾದ ಮತ್ತು ಬೆಂಗಳೂ ರು ಪ್ರದೇಶಗಳಲ್ಲಿ ತಿರುಗಾಡುವುದು ಜಾಸ್ತಿ ಹೀಗಾಗಿ ಮುಂಜಾಗೃತಾ ಕ್ರಮವಾಗಿ ನಮ್ಮ ವೈದ್ಯರು ಈ ವಿಶೇಷಘಟಕವನ್ನು ತೆರೆದಿದ್ದಾರೆ ಸಾರ್ವಜನಿಕರಿಗೆ ಈ ರೋಗದ ಗುಣ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೆ ಸಾರ್ವಜನಿಕ ಆಸ್ಪತ್ರಗೆ ಬಂದು ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆಯಿರಿ ಎಂದು ತಿಳಿಸಿದರು.

Contact Your\'s Advertisement; 9902492681

ಈ ಸಮಯದಲ್ಲಿ ಜಿಪಂ ಮಾಜಿ ಅಧ್ಯಕ್ಷ ರಾಜಾ ಹಣಮಪ್ಪನಾಯಕ ತಾತಾ, ತಾಲೂಕು ವೈದ್ಯಾಧಿಕಾರಿ ಡಾ. ಆರ್.ವಿ.ನಾಯಕ, ಡಾ.ಹರ್ಷವರ್ಧನ ನಾಯಕ, ಕೃಷ್ಣಾ ರೆಡ್ಡಿ ಮೂದ್ನೂರು, ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪುರ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here