ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2020-21ನೇ ಸಾಲಿನ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಕಡೆಗಣಿಸಿ ಅನ್ಯಾಯ ಮಾಡಿದ್ದಾರೆಂದು ಕಲಬುರಗಿ ನಗರಾಭಿವೃದ್ಧಿ ಪ್ರಧಿಕಾರದ ಮಾಜಿ ಅಧ್ಯಕ್ಷ ಡಾ. ಅಜಗರ್ ಚುಲಬುಲ್ ಅವರು ಪತ್ರಿಕಾ ಪ್ರಕಟಣೆ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2019-20ನೇ ಸಾಲಿನಲ್ಲಿ ಕುಮಾರಸ್ವಾಮಿ ಸರಕಾರ 1980 ಕೋಟಿ ಮತ್ತು ಸಿದ್ದರಾಮಯ್ಯ ಸರಕಾರದಲ್ಲಿ 2281 ಕೋಟಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮಿಸಲಿಟ್ಟಿದರು ಎಂದು ತಿಳಿಸಿದರು. ಕಳೆದ ವರ್ಷಕ್ಕೆ ಹೊಲಿಸಿದರೆ, ಈ ಬಾರಿ ನಲ್ಲಿ 35% ಕಡಿತ ಬಜೆಟ್ ಮಂಡಿನೆ ಮಾಡಿದ್ದಾರೆ. ಅಲ್ಪಸಂಖ್ಯಾತರಿಗೆ ಕೇವಲ 1278 ಕೋಟಿ ಮಿಸಲಿಟ್ಟಿದ್ದಾರೆ ಎಂದರು.
ಯಡಿಯೂರಪ್ಪ ಸರಕಾರ ಈ ಬಾರಿ ಅಲ್ಪಸಂಖ್ಯಾತರಿಗೆ ಯಾವುದೇ ಹೊಸ ಯೋಜನೆ ನೀಡಿಲ್ಲ. ಬದಲಿಗೆ 707 ಕೋಟಿ ಕಡಿತ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಶಾದಿ ಭಾಗ್ಯ ಯೋಜನೆಗೂ ದುಡ್ಡು ಇಟ್ಟಿಲ್ಲ. ಶಾದಿ ಭಾಗ್ಯ ಯೋಜನೆ ಅಲ್ಪಸಂಖ್ಯಾತ ಬಿ.ಪಿ.ಎಲ್ ಕುಟುಂಬಗಳಿಗೆ ಒಂದು ಆಸರೆ ಮತ್ತು ಜನಪ್ರೀಯ ಯೋಜನೆಯಾಗಿದ್ದು, ಹಿಂದಿನ ಸರಕಾದಲ್ಲಿ ಶಾದಿ ಭಾಗ್ಯಕ್ಕೆ 60 ಕೋಟಿ ಇತ್ತು, 30 ಸಾವಿರ ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. ಒಂದು ಅರ್ಜಿಗೂ ಸಹ ದುಡ್ಡು ಇಲ್ಲದಂತಾಗಿದೆ. ತನ್ನ ಸರಕಾರದಲ್ಲಿ ಘೋಷಣೆ ಮಾಡಿದ ಯೋಜನೆಗಳಿಗೆ ನಯಾ ಪೈಸಾ ದುಡ್ಡು ಮಿಸಲಿಡದೇ ಕಡೆಗಣಿಸಲಾಗಿದೆ ಎಂದು ಕಿಟಿಕಾರಿದ್ದಾರೆ.
ಮೈಕ್ರೊ ಸಾಲಕ್ಕೆ 83 ಕೋಟಿಯಿಂದ 55, ಗಂಗಾ ಕಲ್ಯಾಣ ಹಾಗೂ ಇತರೆ ಯೋಜನೆಗಳಿಗೆ 144 ಕೋಡಿಯಿಂದ 74, ಮಸೀದಿ ಇಮಾಮ್ ಹಾಗೂ ಮೌಜನಗಳಿಗೆ 65 ಕೋಟಿಯಿಂದ 55 ಕೋಟಿಯಾಗಿದೆ. ಖಬ್ರಸ್ತಾನ ಕಂಪೌಡಗೆ 28 ಕೋಟಿಯಿಂದ 10 ಕೋಟಿ ಇಡಲಾಗಿದೆ. ಹಿಂದೆ ವಿದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕಾಗಿ 35 ಕೋಟಿ ಇತ್ತು ಈಗ 10 ಕೋಟಿ ಕಾಯ್ದಿರಿಸಲಾಗಿದೆ. ಅಲ್ಪಸಂಖ್ಯಾತರ ಆಯೋಗಕ್ಕೆ 1.88 ಕೋಡಿದಿಂದ 1 ಕೋಟಿ ಮಾತ್ರ ಇಡಲಾಗಿದೆ. ಉರ್ದು ಅಕಡಮಿಗೆ 2.15 ಕೋಟಿಯಿಂದ 1ಕೋಟಿ ಮಾಡಲಾಗಿದೆ. ಹಜ್ ಸಮಿತಿಗೆ 2.5ಕೋಟಿಯಿಂದ 2 ಕೋಟಿ ಇಳಿಸಲಾಗಿದೆ. ಕಲಬುರಗಿ ಹಜ್ ಭವನ ನಿರ್ಮಾಣಕ್ಕೆ ಒಂದು ನಯಾ ಪೈಸ ಇಟ್ಟಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ
ಈ ಬಾರಿ ಬಜೆಟ್ ಅಂಶಗಳನ್ನು ಗಮಿಸಿದರೆ ಯಡಿಯೂರಪ್ಪ ಸರಕಾರದಿಂದ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.