ಕಲಬುರಗಿ: ನಗರದ ಗೇಸುದರಾಜ್ ಕಾಲೋನಿಯ ಜವಾರೆಹಿಂದ್ ಶಾಲೆಯ ಪ್ರದೇಶದಲ್ಲಿ ಸಂಜೆ 6 ಗಂಟೆಗಳಲ್ಲಿ ಒಂದೇ ಬಡಾವಣೆಯಲ್ಲಿ ಪ್ರತ್ಯೇಕ ಎರಡು ಕೊಲೆ ನಡೆದಿರುವ ಘಟನೆ ಜರುಗಿದೆ.
ಗೇಸುದರಾಜ್ ಕಾಲೋನಿಯ ನಿವಾಸಿಯಾದ ಕಾರ್ಪೆಂಟರ್ ಕಾರ್ಮಿಕ ಅಕ್ರಮ್ (28) ಮತ್ತು ಮಿಜಗುರಿ ಬಡಾವಣೆಯ ಇನ್ನೋರ್ವ ಯುವಕ ಬಬ್ಲು(25) ಎಂದು ಗುರುತಿಸಲಾಗಿದೆ.
ಸಂಜೆ 5 ಅಕ್ರಮ್ ಮನೆಗೆ ಬೈಕ್ ಮೇಲೆ ಬಂದು ಕೊಲೆ ಮಾಡಿದರೆ, ರಾತ್ರಿ 11 ಸುಮಾರಿಗೆ ಮಿಜಗುರಿ ಪ್ರದೇಶದಲ್ಲಿ ಬಬ್ಲು ಎಂಬ ಯುವಕನ ಮೇಲೆ ಗ್ಯಾಂಗ್ ವಾರ ನಡೆಸಿ ಕೊಲೆ ಮಾಡಕಾಗಿದೆ ಎಂದು ತಿಳಿದುಬಂದಿದೆ.
ಎರಡು ಹತ್ಯೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಆಗಮಿಸಿ ಪರಿಶೀಲನೆ ನಡರಸಿದ್ದು, ಈ ಕುರಿತು ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬಸಿದ್ದಾರೆ.