ಸುರಪುರ: ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜಿನರಾದ ಅಮ್ಮಾಪೂರದ ತತ್ವಪದಕಾರ ಶಿವಮೂರ್ತಿ ತನಿಕೆದಾರ ಅವರನ್ನು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಯಾದಗಿರಿ ಹಾಗೂ ಸಗರನಾಡು ಸೇವಾ ಪ್ರತಿಷ್ಠಾನವತಿಯಿಂದ ಅಮ್ಮಾಪೂರ ಗ್ರಾಮದ ಆಂಜನೇಯ ದೇವಸ್ಥಾನ ಆವರಣದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ, ಅಮ್ಮಾಪೂರ ಪರಿಸರದಲ್ಲಿ ಜನಪದ ಕಣಜವಿದೆ ಕವಿಶ್ರೀ ಹಣಮಂತಪ್ಪ ಹಾಗೂ ಅವರ ಗುರುಗಳಾದ ವೀರಣ್ಣ ಸರ್ವತ್ತೊಮ್ ಅವರ ಮೂಲಕ ನೂರಾರುಜನ ಜನಪದ ಕಲಾವಿಧರು, ಬಯಲಾಟ ಕಲಾವಿಧರು, ಮೊಹರಂ ಪದಕಾರರು, ತತ್ವಪದ ಹಾಡುಗಾರರು ಈ ಗ್ರಾಮದಲ್ಲಿ ಸಿಗುತ್ತಾರೆ, ಆ ಸಾಲಿನಲ್ಲಿ ಹಣಮಂತಪ್ಪ ತನಿಕೆದಾರ ವಂಶದವರಾದ ಶಿವಮೂರ್ತಿಅವರಿಗೆ ಈ ಭಾರಿ ಕರ್ನಾಟಕ ಸರಕಾರದ, ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಸಂದಿರುವುದು ಮೂರು ದಶಕಗಳ ಜನಪದ ಸೇವೆಗೆ ಸಂದ ಗೌರವವಾಗಿದೆ.
ಈ ಕಲಾವಿಧರನ್ನು ಗುರುತಿಸಿದ ಅಕಾಡೆಮಿಯ ಅಧ್ಯಕ್ಷರು ಹಾಗೂ ಜಿಲ್ಲೆಯ ಸದಸ್ಯರಿಗೂ ಅಭಿನಂದಿಸುತ್ತೆವೆ, ಜೊತೆಗೆ ಜನಪದ ಕ್ಷೇತ್ರಕ್ಕೆ ಸದಾ ಸಹಕಾರ ನಿಡುತ್ತಿರುವ ಮಾನ್ಯ ಶಾಸಕರಿಗು ಕೂಡ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದ ಅವರು ಬರುವ ದಿನಗಳಲ್ಲಿ ಈ ಭಾಗದ ಅನೇಕ ಜನ ಕಲಾವಿಧರಿಗೆ ರಾಜ್ಯ ರಾಷ್ಟ್ರಮಟ್ಟದ ಪುರಸ್ಕಾರಗಳು ಲಭಿಸಲಿ ಆ ಮೂಲಕ ಜನಪದ ಕಲಾವಿಧರಿಗೆ ಪ್ರೋತ್ಸಾಹ ದೊರೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಮಲ್ಲಿಕಾರ್ಜುನ ರೆಡ್ಡಿ ಕೊಳಿಹಾಳ, ವಿ.ಎಸ್.ಎಸ್.ಎನ್ ಸದಸ್ಯರಾದ ನಿಂಗಪ್ಪಗೌಡ, ಪಾಚುಪಯ್ಯ ಬಡಿಗೇರ, ಬಸವರಾಜ ತನಿಕೇದಾರ, ಪ್ರಕಾಶ ಸಮೆದ್, ಭಿಮಣ್ಣಗೌಡ ಅಮ್ಮಾಪೂರ, ವೆಂಕಟೇಶ ಬಡಿಗೇರ ಸೇರಿದಂತೆ ಇತರರಿದ್ದರು.