ಕಲಬುರಗಿ: ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ೧೯೮ನೇ ಯಾತ್ರಾ ಮಹೋತ್ಸವದ ನಿಮಿತ್ತ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾರವರ ಸಾನಿಧ್ಯದಲ್ಲಿ ಮಾರ್ಚ ೧೨ ರಂದು ಗುರುವಾರ ಸಂಜೆ ೬ಕ್ಕೆ ಉಚ್ಛಾಯಿ, ಮಾ ೧೩ ಶುಕ್ರವಾರದಂದು ಸಂಜೆ ೬ ಗಂಟೆಗೆ ರಥೋತ್ಸವ ಜರುಗಲಿದೆ ಎಂದು ಸಂಸ್ಥಾನದ ೮ನೇ ಪೀಠಾಧಿಪತಿಗಳಾದ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರು ತಿಳಿಸಿದರು.
ದಾಸೋಹ ಮಹಾಮನೆಯಲ್ಲಿ ಬುಧವಾರ ಮಾತನಾಡಿದ ಅವರು, ಶ್ರೀ ಶರಣಬಸವೇಶ್ವರರ ಪುಣ್ಯತಿಥಿ ಹಾಗೂ ಪೀಠಾರೋಹಣ ಸ್ಮರಣಾರ್ಥ ಈ ಜಾತ್ರೆ ಆಚರಣೆಗೆ ಬಂದಿದೆ. ಶ್ರೀ ಶರಣಬಸವೇಶ್ವರರ ಲಿಂಗೈಕ್ಯರಾದಾಗ ಅವರ ದೇಹವನ್ನು ಭಕ್ತಾದಿಗಳ ದರ್ಶನಕ್ಕೆಂದು ಅಂದು ಐದು ದಿನ ಇಡಲಾಗಿತ್ತು. ಆ ಐದು ದಿನದ ಸಂಕೇತವಾಗಿ ಯಾತ್ರಾ ಸಮಯದಲ್ಲಿ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ನಾಲ್ಕನೇ ದಿನ ಉಚ್ಛಾಯಿ, ಐದನೆಯ ದಿನ ರಥೋತ್ಸವ ಜರುಗುತ್ತದೆ. ದೇಶದಾದಂತ್ಯ ಲಕ್ಷಾಂತರ ಜನರು ಜಾತ್ರೆಗೆ ಆಗಮಿಸಿ ಪ್ರಸಾದ ಸೇವೆನೆ ಮಾಡುತ್ತಾರೆ ಎಂದು ತಿಳಿಸಿದರು.
ಇದಾದ ನಂತರ ದೇವಸ್ಥಾನದ ಆವರಣದಲ್ಲಿ ಪುರವಂತಿಕೆ ಆಡಲಾಯಿತು. ನಂತರ ಬೆಳ್ಳಿ ಪಲ್ಲಕಿ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಮಾತೋಶ್ರೀ ದಾಕ್ಷಾಯಿಣಿ ಅವ್ವನವರು, ಚಿ. ದೊಡ್ಡಪ್ಪ ಅಪ್ಪಾನವರು, ಪಂಚಮ್ಮ ತಾಯಿಯವರು, ಪ್ರೊ. ಪಂಚಶೀಲ ಅಪ್ಪಾ, ಸಹೋದರಿ ಮಹೇಶ್ವರಿ ಎಸ್. ಅಪ್ಪಾ, ಶಿವಾನಿ ಎಸ್. ಅಪ್ಪಾ, ಕೋಮಲಾ ಎಸ್.ಅಪ್ಪಾ ಡಾ. ಸುರೇಶ ನಂದಗಾಂವ ಇತರರು ಇದ್ದರು.