ಗುಲಬರ್ಗಾ ವಿವಿಯಲ್ಲಿ ರಾಷ್ಟ್ರೀಯ ಬೌದ್ಧ ಸಾಹಿತ್ಯ ಸಮ್ಮೇಳನ ಗೋಷ್ಠಿ

0
168

ಕಲಬುರಗಿ: ಇಂದು ಗುಲಬರ್ಗಾ ವಿಶ್ವವಿದ್ಯಾಲಯದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಬೌದ್ಧ ಸಾಹಿತ್ಯ ಸಮ್ಮೇಳನ ಹರಿಹರ ಸಭಾಂಗಣ ಹಾಗೂ ಅನುಭವ ಮಂಟಪದಲ್ಲಿ ನಾಗರ್ಜುನ ವೇದಿಕೆ ಮತ್ತು ಆಮ್ರಪಾಲಿ ವೇದಿಕೆ ಬೌದ್ಧ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳು ನಡೆಯಿತು.

ಗೋಷ್ಠಿ-೪ : ಅಮೃತಾ ಕಟಕೆ ಅವರು ಕನ್ನಡದಲ್ಲಿ ಸುಮಾರು ೨೦ ನಾಟಕಗಳನ್ನು ಅವಲೋಕಿಸಿದಾಗ ಬುದ್ಧನ ಸಂದೇಶಗಳು ನಾಟಕದ ಮೂಲಕ ಜನಮನ ತಲುಪಿದೆ. ಕುವೆಂಪು ಅವರ ’ಮಹಾರಾತ್ರಿ’ ರಾಜ್ಯ ಪರಿತ್ಯಾಗ, ಅರ್ಧಶಾತ್ರಿಯಲ್ಲಿ ಹೋಗುವಾಗ ಚನ್ನನೊಂದಿಗಿನ ತಳಮಳ ಇಲ್ಲಿ ನೋಡಬಹುದು. ಮಾಸ್ತಿಯವರ ಯುಶೋಧಾ : ಇಲ್ಲಿ ಯಶೋಧರಾ ಅನುಭವಿಸಿದ ನೋವು ದಾಖಲಿಸಿದ್ದಾರೆ. ಲೋಕ ಬೆಳಗಿದ ಬುದ್ಧ, ಬುದ್ಧ ಹೆಂಡತಿಗೆ ಬೆಳಕಾಗಲಿ. ಶಾಂತವಾದ ಪ್ರತಿಭವನೆ. ಸಂಸಾರ ತ್ಯಜಿಸಿಯೇ ತ್ಯಾಗ ಮಾಡಬೇಕೆ. ಪ್ರಭ ಶಂಕರರ : ಅಂಗುಲಿಮಾಲ – ಹಿಂಸೆಯ ಪ್ರತಿರೂಪ ಅಂಗುಲಿಮಾಲವನ್ನು ಮನುಷ್ಯವನ್ನಾಗಿ ಮಾಡಿದ್ದ. ಆಮ್ರಪಾಲಿ : ಬಾಲ್ಯದಲ್ಲಿಯೆ ತಬ್ಬಲಿಯಾದ ಆಮ್ರಪಾಲಿ ರಾಜನರ್ತಕಿಯಾಗಿ ಬುದ್ಧನ ದರ್ಶನಕ್ಕಾಗಿ ಹಾತೊರೆಯುವಿಕೆ. ಮೋದಾರಿದೆ ನಾಟಕ : ಮಾಲತಿ ಬುದ್ಧ ಹೇಳಿದ ಕಥೆ. ಸಬರದ : ಸಿದ್ಧಾರ್ಥ ಬುದ್ಧನಾದ ಕಥೆ ಬುದ್ಧನು ಬೆಳದು ಬಂದ ಬಗೆ. ಸಿ.ಎಚ್. ರಾಜು ಬುದ್ಧನ ಪ್ರಥಮ ಬೋಧನೆ : ದಾನ, ತ್ಯಾಗ, ಉಪದೇಶ. ಎಸ್.ಎಂ. ಜನವಾಡಕರ್ : ಬುದ್ಧ ಗೆದ್ದ ಮಾರನ ಯುದ್ಧ : ಕಾಮವನ್ನು ಗೆದ್ದ ಬುದ್ಧನಾದ ಜವರಯ್ಯನವರ ಬಲ ನಾಟಕ : ಒಬ್ಬ ವ್ಯಕ್ತಿ ರೋಗಿ ಮುಪ್ಪು ಸಾವು ನೋಡದಿರಲು ಸಾಧ್ಯವೆ : ರೋಹಿನಿ-ಚಂದ್ರದ ಚಿತ್ರಣ, ಕಾವ್ಯ ಸಂಘದ ಸದಸ್ಯತ್ವ ಜೀವದ ರಕ್ಷಣೆ ಬುದ್ಧ ಭಿಕ್ಷೆ ದೀಕ್ಷೆ ತಾಯಯಿಂದ ಪಡೆದು ಅಲ್ಲದೆ ಯುದ್ಧ ಬೇಡ ಬುದ್ಧ ಬೇಕು.

Contact Your\'s Advertisement; 9902492681

ಗೋಷ್ಠಿ-೪ : ಅರ್ಜುನ ಗೊಳಸಂಗಿ ಕನ್ನಡ ಕಾದಂಬರಿಗಳಲ್ಲಿ ಬುದ್ಧ ಪ್ರಗತಿಸಿದ ಆಲೋಚನೆ ೭೦ರ ದಶಕದಲ್ಲಿ ದಲಿತ ಬಂಡಾಯ ಪ್ರಖರವಾಯಿತು. ಸೃಜನಶೀಲ ಪ್ರಕಾರದಲ್ಲಿ ಬೆಳೆದು ಬಂದವರು ಕಾದಂಬರಿಯನ್ನು ಬರೆದರು. ಅಸ್ಪೃಶ್ಯತೆಯನ್ನು ಬಿಚ್ಚಿಡುವ ಇಂದಿರಾಬಾಯಿ ಕಾದಂಬರಿ ನೋಡಿದಾಗ ಬುದ್ಧನನ್ನು ಎರಡು ಕಾದಂಬರಿಗಳಾಗಿಸಿದ್ದಾರೆ.

ಪ್ರಭುಶಂಕರ ಪ್ರೇಮಭಿಕ್ಷೆ – ಗೌತಮ ಬುದ್ಧ ಪ್ರೇಮಭಿಕ್ಷೆ – ಅಂಗುಲಿಮಾಲ, ಪುಣ್ಯಘವಾದ ಕಥೆ (೫ ಭಾಗಗಳ ಕಥೆ) ರುದ್ರಮೂರ್ತಿ ಶಾಸ್ತ್ರಿ) ಗೌತಮ ಬುದ್ಧ ಕಾದಂಬರಿ – ಹೀನಾಯಾನ, ಮಹಾಯಾನ, ವಜಯಾನದ ಬಗ್ಗೆ ಹೇಳುತ್ತ ಎಲ್ಲಾ ಸಮಸ್ಯೆಗಳಿಗೆ ಬುದ್ಧನ ಸಂದೇಶಗಳಲ್ಲಿ ಪರಿಹಾರವಿದೆ. ಬುದ್ಧನ ಕಾಲದ ಹಿಂಸೆಗೂ ಈಗಿನ ಕಾಲದ ಹಿಂಸೆಗೂ ವ್ಯತ್ಸಾವಿಲ್ಲ.

ಗೋಷ್ಠಿ-೪ : ಬುದ್ಧಘೋಷ ಹೆಗ್ಗೆಡೆ ಬುದ್ಧನನ್ನು ಅವರವರು ಕಂಡಂತೆ ಬರೆದಿದ್ದಾರೆ. ದುರ್ಭಾವ, ನಿರ್ಭವದ ಕಾವ್ಯಗಳಿವೆ. ಬುದ್ಧ ಕಾಲವಾದ ನಂತರ ಅವನ ಶಿಷ್ಯ ಆನಂದ ಪಾಲಿಯಲ್ಲಿ ಬರೆದ ಅದು ಬೌದ್ಧ ಧರ್ಮದ ಸುವರ್ಣಕಾಲ. ಮುಂದೆ ಕನ್ನಡದ ಕವಿಗಳು ಅಲ್ಲಲ್ಲಿ ತಂದರು. ಕವಿರಾಜಮಾರ್ಗ ವಡ್ಡಾರಧನೆ, ಸೂರಸೇನ ಚಿಂತನೆಯಲ್ಲಿ ಉಲ್ಲೇಖಗಳಿವೆ. ಧರ್ಮಾವಲತದಲ್ಲಿ ಜೈನ ಮತ್ತು ಬೌದ್ಧರ ಸಂಘರ್ಷ ೯೮ ಜನರ ಬೌದ್ಧ ಕಾವ್ಯ ಸಂಗ್ರಹವಾಗಿವೆ. ಕನ್ನಡದ ಕವಿಗಳಿಗೆ ಬುದ್ಧ ಯಾವ ರೀತಿ ದಕ್ಕಿದ್ದಾನೆ. ಎಂಬುದನ್ನು ಹೇಳಿದ್ದಾರೆ. ಕುವೆಂಪು : ಮಾನವರ ಮೂರ್ಖತನವನ್ನು ದಹಿಸುವ ಜ್ವಾತಿಪುತಿನ ಬುದ್ಧನಿಗೆ ಸೋಲಿಲ್ಲ ಸಾವಿಲ್ಲ ಏನಿಲ್ಲ ಕಾಂತಿಯಿದೆ. ಕೆಎಸ್‌ಎನ್ : ಬುದ್ಧ ವಕ್ಕು ೨೫೦೦ ವರ್ಷಗಳಾಗಿವೆ. ಬಂಡೆಗಳ ಉತ್ತರವೇನು. ಚಂಡಾ : ಕಥದ ಕಿಂಡಿಯಿಂದ ಏನ ಕಂಡನವ್ವ. ಕೆವಿ ತಿರುಮಲೇಳ : ಅನ್ಯಾಯ ಮತ್ತು ಬುದ್ಧ : ವಾಸ್ತವಿಕ ಸಮಸ್ಯಗಳಿಗೆ ಬುದ್ಧನಲ್ಲಿ ಪ್ರಶ್ನಿಸಿದ್ದಾರೆ. ಚನ್ನಣ್ಣ ವಾಲೀಕಾರ : ಮ್ಯೋಮಾ ವೋಮ ಬೌದ್ಧ ಬಿನ್ನ : ಇಂದು ಬುದ್ಧ ಕಾಲದಲ್ಲಿದ್ದಾನೆ.

ಗೋಷ್ಠಿ-೪ : ಕಲ್ಯಾಣರಾವ ಜಿ. ಪಾಟೀಲ ಸಂಘರ್ಷ ಕಾಲದಿಂದ ಸೌಹಾರ್ದದ ಕಡೆಗೆ ಹೋಗಬೇಕಾಗಿದೆ. ಚೆನ್ನಣ್ಣ ವಾಲೀಕಾರ ಅವರು ಮ್ಯಾಮೊ ವ್ಯೋಮದವರೆಗೆ ಸಂಶೋಧನೆ ನಡೆದಿದೆ. ಬೌದ್ಧ ಸಾಹಿತ್ಯ ಅಧ್ಯಯನ, ಸಂಶೋಧನೆ ಇಂದಿನ ಅಗತ್ಯವಾಗಿದೆ.

ಗೋಷ್ಠಿ-೪ : ಪ್ರೊ. ಮಹೇಶ ಹರವೆ ಬುದ್ಧ ಮತ್ತು ಮಹಾತ್ಮಗಾಂಧಿ ಅವರ ಸಾಮ್ಯತೆ ಕುರಿತು ಮಾತನಾಡುತ್ತ ಮಹಾತ್ಮಗಾಂಧಿಯವರು ಪುರಾತನ ಧರ್ಮದಲ್ಲಿ ಹುಟ್ಟಿದರೂ ಅವರ ಮೇಲೆ ಬುದ್ಧನ ಅನೇಕ ತತ್ತ್ವಗಳು ಪ್ರಭಾವ ಬೀರಿವೆ. ದೀನ ದಲಿತರ ಶೋಷಿತರ ಅಪಾರ ಕಾಳಜಿಯನ್ನು ಹೊತ್ತುಕೊಂಡಿದ್ದರು. ಗಾಂಧಿಜಿಯವರ ಅನೇಕ ವಿಚಾರಗಳು ಬೌದ್ಧ ಚಿಂತನೆಗಳಾಗಿವೆ ಎಂದರು.

ಗೋಷ್ಠಿ-೪ : ಡಾ. ದಸ್ತಗಿರಸಾಬ ದಿನ್ನಿ ಬುದ್ಧ ಮತ್ತು ರಾಮಮನೋಹರ ಲೋಹೀಯಾ ಅವರ ಸಾಮ್ಯತೆ ಕುರಿತು ಮಾತನಾಡುತ್ತ ಪ್ರಸ್ತುತ ದಿನಮಾನಗಳಲ್ಲಿ ಬುದ್ಧ ಮತ್ತು ಲೋಹಿಯಾ ವಿಚಾರಗಳು ಅವಶ್ಯಕವಾಗಿವೆ. ಏಕೆಂದರೆ ಇವರಿಗೂ ಸಮಾಜವಾದಿ ಚಿಂತಕರು, ದೀನ ದಲಿತರ ಕುರಿತ ಹೋರಾಟಗಾರರು, ಎಲ್ಲರ ನೋವನ್ನು ಬಲ್ಲವರು. ಅದಕ್ಕಾಗಿ ಅವರ ವಿಚಾರಗಳು ಇಂದಿನ ದಿನಕ್ಕೆ ದಿಕ್ಸೂಚಿಗಳಾಗಿವೆ. ಬುದ್ಧನು ಹೇಳಿದ ಪಂಚಶೀಲ ತತ್ವಗಳು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ದೇಶದ ಪ್ರಗತಿ ಸಾಧ್ಯ.

ಗೋಷ್ಠಿ-೪ : ಡಾ. ಸೂರ್ಯಕಾಂತ ಸುಜ್ಯಾತ್ ಬುದ್ಧ ಶಕ್ತಿ ಭಾರತದಲ್ಲಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಭಾವ ಬೀರಿದೆ. ಬುದ್ಧನು ಹೇಳಿದ ಸ್ವಯಂ ಪ್ರಕಾಶ ತತ್ವವು ಇಡೀ ಜಗತ್ತಿನಾದ್ಯಂತ ಯಾವ ವ್ಯಕ್ತಿಯು ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಆ ವ್ಯಕ್ತಿ ಮಹಾನ್ ವ್ಯಕ್ತಿಯಗುತ್ತಾನೆ ಎಂದು ಹೇಳಿದರು.

ಗೋಷ್ಠಿ-೫ : ಪ್ರೊ. ಸುರೇಶ ಸೋನೆನೆ ಬುದ್ಧ ಮತ್ತು ಮರಾಠಿ ಕಾವ್ಯ ಕುರಿತು ಮಾತನಾಡಿದರು. ಮರಾಠಿಯಲ್ಲಿ ಬುದ್ಧನ ಚರಿತೆ, ಕತೆಗಳು ಹಾಗೂ ಬುದ್ಧನ ತತ್ವವಿಚಾರಗಳ ಸಾಕಷ್ಟು ಕೃತಿಗಳು ರಚನೆಯಾಗಿವೆ. ಮರಾಠಿ ಕಾವ್ಯ ಸಂಪತ್ತಿನಲ್ಲಿ ಬುದ್ಧನ ಕಾವ್ಯಗಳು ಶ್ರೇಷ್ಟವಾಗಿವೆ ಎಂದು ಹೇಳಿದರು.

ಗೋಷ್ಠಿ-೫ : ಡಾ. ಬಸವರಾಜ ಡೋಣೂರ ಬುದ್ಧ ಮತ್ತು ಇಂಗ್ಲಿಷ ಕಾವ್ಯ ಕುರಿತು ಮಾತನಾಡಿದರು. ಭಾರತೀಯರು, ಕನ್ನಡಿಗರು ಬುದ್ಧನ ಕುರಿತು ಬರೆದಿದ್ದಾರೆ. ಅದು ಸಹಜ ಆದರೆ ಪಾಶ್ಚಾತ್ಯರು ಬುದ್ಧನನ್ನು ಕುರಿತು ಬರೆದಿರುವುದು ಬುದ್ಧನ ಶಕ್ತಿ ಎತ್ತಿ ತೋರಿಸುತ್ತದೆ. ರವೀದ್ರನಾಥ ಟ್ಯಾಗೋರ ಅವರು ಬರೆದ ಬುದ್ಧನ ಕುರಿತ ಕವನದ ಮೂಲಕ ಬುದ್ಧನು ಬೆಲೆ ಕಟ್ಟಲಾಗದ ಶಕ್ತಿ ಎಂಬುದನ್ನು ತೋರಿಸಿಕೊಟ್ಟರು. ಲಿಯೋ ಟಾಲ್ಸಟಾಯಿ ಜರ್ಮನ ಕಾದಂಬರಿಕಾರ ಹರ್ಮನ್ ಜೆ. ಅವರು ಬರೆದ ಸಿದ್ಧಾರ್ಥ ಕಾದಂಬರಿಯ ವಿಚಾರಗಳನ್ನು ಹೇಳುತ್ತ ಭಾರತೀಯ ಪ್ರತಿಯೊಬ್ಬ ಪ್ರಜೆ ಪ್ರಸ್ತ್ತುತ ದಿನಮಾನದಲ್ಲಿ ನಾನು ಬುದ್ಧನನ್ನು ನೋಡಬೇಕು ಎಂಬದು ನನ್ನ ಕನಸು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಭಾರತೀಯ ಜೋನ್, ವಿಜಯ ಜುಂಬಾರೆ ಸೋಲಾಪುರ, ಆನಂದ ಮನೋಹರ, ಕವಿತಾ ರೋಮರೆ, ಸ್ನೇಹಾ ಸನಾನೆ ಮೊದಲಾದವರು ಬೌದ್ಧ ಸಾಹಿತ್ಯ ಕುರಿತು ಪ್ರಬಂಧ ಮಂಡಿಸಿದ್ದರು. ಡಾ. ಧಮ್ಮದೀಪ ವಾಂಖೆಡೆ ನಿರೂಪಿಸಿದರು, ಡಾ. ಸಿದ್ಧಲಿಂಗ ದಬ್ಬಾ ವಂದಿಸಿದರು.

ಗೋಷ್ಠಿ-೬ : ಶ್ರೀ ಸೂರ್ಯಪ್ರಕಾಶ ಪಂಡಿತ ಪ್ರೊ. ಸಾ.ಕೃ. ರಾಮಚಂದ್ರರಾವ್ ಅವರ ಬೌದ್ಧ ಸಾಹಿತ್ಯಕ್ಕೆ ಕೊಡುಗೆ ಅಪಾರವಾದುದು. ರಾಮಚಂದ್ರರಾವ್ ಅವರು ಪಾಲಿ, ಸಂಸ್ಕೃತ, ಟಿಬೆಟಿಯನ್ ಮೊದಲಾದ ಭಾಷೆಗಳನ್ನು ಬಲ್ಲವರಾಗಿರುವುದರಿಂದ ಬಾಲ್ಯದಿಂದಲೇ ಬೌದ್ಧ ಸಾಹಿತ್ಯದ ಮೇಲೆ ವಿಶೇಷ ಒಲವನ್ನು ತೋರಿಸಿ ದೊಡ್ಡವರಾದ ಮೇಲೆ ಬುದ್ಧ ತತ್ವವನ್ನು ಜೀವನದಲ್ಲಿ ಅನುಸರಿಸಿ ನಡೆದು ತೋರಿಸಿದ ಮಹಾನ್ ವ್ಯಕ್ತಿಗಳು ಸತ್ಯ ನಿಲುವನ್ನು ಬೌದ್ಧ ತತ್ವದ ಹಿನ್ನೆಲೆಯಲ್ಲಿಯೇ ಬಲ್ಲವರಾಗಿದ್ದರು. ಎಂದು ಹೇಳಿದರು. ರಾಮ ಚಂದ್ರರಾಯರು ಸುಮಾರು ಅನೇಕ ಕೃತಿಗಳು ಬೌದ್ಧ ದರ್ಶನಕ್ಕೆ ಸಂಬಂಧಿಸಿದ ಕೃತಿಗಳನ್ನು ಬರೆದಿದ್ದಾರೆ.

ಎಂಢ ಸಂದರ್ಭ ಬಂದರು ನನ್ನ ಸಾಧನೆಯಿಂದ ವಿಮುಖನಾಗಬಾರದು ಎಂಬತತ್ವ ಸಾರಿದರು. ನಾವು ದಾರ್ಶನಿಕ ಬುದ್ಧನನ್ನು ಮರೆಯುತ್ತಿದ್ದೇವೆ. ಅದಕ್ಕಾಗಿ ನಾನು ಆಂತರಿಕ ಸಮಾನತೆ ತರಬೇಕು ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here