ಕಲಬುರಗಿ: ಸಂಪ್ರದಾಯದಂತೆ ಕಲಬುರಗಿ ಮಹಾದಾಸೋಹಿ ಶರಣಬಸವೇಶ್ವರ ಯಾತ್ರಾ ಮಹೋತ್ಸವ ಅತ್ಯಂತ ಸರಳ ಹಾಗೂ ಸಂಭ್ರಮದಿಂದ ಜರುಗಿತು.
ಕರೋನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾತ್ರೆಯನ್ನು ರದ್ದು ಮಾಡಿತ್ತು. ಆದರೂ ಭಕ್ತಾದಿಗಳು ಸಂಪ್ರದಾಯದ ಪ್ರಕಾರ ಇಂದು ಮಧ್ಯಾಹ್ನ 4 ಗಂಟೆಗೆ ರಥೋತ್ಸವ ನಡೆಸಿ ತಮ್ಮ ಬಕ್ತಿ ಪರಾಕಾಷ್ಠೆಯನ್ನು ಮೆರೆದರು.
ತಿಂಗಳ ಪರ್ಯಂತ ನಡೆಯುವ ಈ ಜಾತ್ರೆಗೆಂದು ದೇವಸ್ಥಾನದ ಮುಂಭಾಗದಲ್ಲಿ ವಿವಿಧ ಬಗೆಯ ಆಟಿಗೆಯ ವಸ್ತುಗಳು, ತಿಂಡಿ, ತನಿಸು ತಯಾರಿಸುವ ಅಂಗಡಿಗಳು ಈ ಮುಂಚೆಯೇ ತಲೆಯೆತ್ತಿ ನಿಂತಿದ್ದು, ಅವರಿಗೂ ಸಹ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ ಎಂದು ತಿಳಿದು ಬಂದಿದೆ.
ಸಂಜೆ 6 ಗಂಟೆಗೆ ನಡೆಯಬೇಕಾಗಿದ್ದ ರಥೋತ್ಸವ ಕಾರ್ಯಕ್ರಮ ಇಂದು ಎರಡು ಗಂಟೆ ಮುಂಚಿತವಾಗಿಯೇ ರಥೋತ್ಸವ ಕಾರ್ಯಕ್ರಮವನ್ನು ಔಪಚಾರಿಕವೆಂಬಂತೆ ಮುಗಿಸಲಾಯಿತು.
ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಜಾತ್ರೆಗಾಗಿ ಬರುವ ಭಕ್ತಾದಿಗಳನ್ನು ತಡೆದು ತಿಳಿವಳಿಕೆ ನೀಡುವ ಕಾರ್ಯ ನಡೆಸಿದ್ದರು. ದೇವಸ್ಥಾನದ ಆವರಣದಲ್ಲಿ ಗುಂಪು ಗುಂಪಾಗಿ ಸೇರದಂತೆ ಬಕ್ತಾದಿಗಳ ಮನವೊಲಿಸಿದ್ದರು.
ಆದರೂ ವಿವಿಧ ಪ್ರದೇಶಗಳಿಂದ ಹಾಗೂ ನಗರದ ಜನತೆ ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಧಾವಿಸುತ್ತಿದ್ದರು. ಅಂತೂ ಕೊನೆಗೆ ಶರಣಬಸವೇಶ್ವರ ರಥೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕರನಾ ವೈರಸ್ ನಿಂದಾಗಿ ಯಾತ್ರಾ ಮಹೋತ್ಸವಕ್ಕೂ ಮಂಕು ಕವಿದದ್ದು ಸುಳ್ಳಲ್ಲ.