ಕೊರೋನಾ ಎಫೆಕ್ಟ್ ಮದ್ಯೆ ಭಕ್ತರ ಶ್ರೀಶೈಲ ಪಾದಯಾತ್ರೆ

0
51

ಸುರಪುರ: ರಾಜ್ಯದಲ್ಲಿ ಕೊರೋನಾ ವೈರಸ್ ಭೀತಿ ಎಲ್ಲೆಡೆ ಹರಡಿದ್ದು,ಸರಕಾರ ಕೂಡ ಒಂದು ವಾರಗಳ ಕಾಲ ರಾಜ್ಯದಲ್ಲಿ ಕೊರೋನಾ ಎಮರ್ಜೆನ್ಸಿ ಘೋಷಣೆ ಮಾಡಿದ್ದರು ಕೂಡ ಇದ್ಯಾವುದನ್ನು ಲೆಕ್ಕಿಸದ ತಾಲೂಕಿ ಪೇಠ ಅಮ್ಮಾಪುರದ ಶ್ರೀ ಬಲಭೀಮೇಶ್ವರ ಭಜನಾ ಮಂಡಳಿಯ ಭಕ್ತರು ಗ್ರಾಮದಲ್ಲಿರುವ ಹನುಮಾನ ದೇವಸ್ಥಾನದಿಂದ ಮಲ್ಲಿಕಾರ್ಜುನ ದೇವರ ದರುಶನಕ್ಕಾಗಿ ಶ್ರೀಶೈಲಕ್ಕೆ ಪಾದಯತ್ರೆ ಆರಂಭಿಸಿದರು.

ಪ್ರತಿವರ್ಷವು ಕೂಡ ಈ ಗ್ರಾಮದ ಜನತೆ ಮೈಲಾಪುರಕ್ಕೆ,ನಾಲವಾರಕ್ಕೆ,ಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತಾರೆ.ಅದರಂತೆ ಈ ವರ್ಷದ ಶ್ರೀಶೈಲ ಪಾದಯಾತ್ರೆಯನ್ನು ಆರಂಭಿಸಿದರು.ಪಾದಾಯಾತ್ರೆಯ್ಲಲಿನ ಯಾತ್ರಾರ್ಥಿ ಮಲ್ಲಿಕಾರ್ಜುನ ರಡ್ಡಿ ಮಾತನಾಡಿ,ನಾವು ಪ್ರತಿವರ್ಷವು ವಿವಿಧ ದೇವಸ್ಥಾನಗಳಿಗೆ ಪಾದಯಾತ್ರೆ ಮಾಡುತ್ತೆವೆ.ಈ ವರ್ಷ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರುಶನಕ್ಕಾಗಿ ಹೋಗುತ್ತಿದ್ದು,ಕೊರೋನಾ ಬಗ್ಗೆ ಜಾಗೃತಿಗೊಂಡಿದ್ದೆವೆ.ಅಲ್ಲದೆ ನಮ್ಮ ರಾಜ್ಯಕ್ಕೂ ಕಾಲಿಟ್ಟಿರುವ ಕೊರೋನಾ ಮಾರಿ ಬೇಗ ದೂರವಾಗಿ ರಾಜ್ಯದ ಜನತೆ ಇದರ ಭಯದಿಂದ ಮುಕ್ತಗೊಳಿಸುವಂತೆ ಮಲ್ಲಿಕಾರ್ಜುನ ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

Contact Your\'s Advertisement; 9902492681

ಗ್ರಾಮದಿಂದ ಸುಮಾರು ಇಪ್ಪತ್ತಕ್ಕು ಹೆಚ್ಚು ಜನ ಪಾದಯಾತ್ರೆ ಹೋಗುತ್ತಿದ್ದು,ಸುಮಾರು ಹತ್ತು ದಿನಗಳ ಕಾಲ ಪಾದಯಾತ್ರೆ ನಡೆಯುತ್ತದೆ.ನಮಗೆ ಕೊರೋನಾದ ಯಾವುದೆ ಭೀತಿಯಿಲ್ಲ,ಆದರು ಮುಂಜಾಗ್ರತೆಯನ್ನು ವಹಿಸುವುದಾಗಿ ತಿಳಿಸಿದರು.ಯಾತ್ರೆಯಲ್ಲಿ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಮೂರ್ತಿ ತನಿಕೆದಾರ,ಗುರಪ್ಪಗೌಡ,ಚಂದಪ್ಪ ರಾವೂರ,ಯಂಕಪ್ಪ ಬೇವಿನಾಳ,ದೇವಿಂದ್ರಪ್ಪ ಕೊದಂಡೆ,ಸಂಗನಬಸವ ಕಾಮನಟಿಗಿ,ಅಂಬ್ಲಪ್ಪ ಮಡಿವಾಳ,ಅಯ್ಯಪ್ಪ ವಠಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here