ಕಲಬುರಗಿ: ಕರೊನಾ ರೋಗ ನಿಯಂತ್ರಣಕ್ಕೆ ಮುಂಜಾಗೃತ ಕ್ರಮ ಒಂದೆ ಪರಿಹಾರವಾಗಿದ್ದು, ಸಾರ್ವಜನಿಕರು ಅಗತ್ಯ ಕ್ರಮ ಅನುಸರಸಬೇಕು ಎಂದು ಧನ್ವಂತ್ರಿ ಆಸ್ಪತ್ರೆಯ ವೈದ್ಯ ಡಾ. ಅನೀನ್ ಅವುಟೆ ಹೇಳಿದರು.
ನಗರದ ಧನ್ವಂತರಿ ಆಸ್ಪತ್ರೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಆಗಾಗ ಕೈ ತೊಳೆದುಕೊಳ್ಳಬೇಕು. ಮುಖಕ್ಕೆ ಮಾಸ್ಕ್ ಧರಿಸಿ ಸಂಚರಿಸಬೇಕು, ಇನ್ನೊಬ್ಬರನ್ನು ಮುಟ್ಟಿ ಮಾತಣಾಡಬಾರದು ಹಾಗೂ ಅಂತರ ಕಾಪಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರೊನಾ ರೋಗ ಕೆಲವರಲ್ಲಿ ತಾನಾಗಿಯೇ ಕಡಿಮೆ ಆಗುತ್ತದೆ. ರೋಗ ನಿರೋಧಕ ಶಕ್ತಿ ಇದ್ದವರಲ್ಲಿ ಈ ರೋಗ ನಿಯಂತ್ರಣವಾಗುತ್ತದೆ. ಚಿಕ್ಕ ಮಕ್ಕಳು ಹಾಗೂ ವಯೋ ವೃದ್ಧರಲ್ಲಿ ಈ ರೋಗ ಕಾಣಿಸಿಕೊಂಡರೆ ಬೇಗ ಗುಣಮುಖವಾಗುವುದಿಲ್ಲ. ಈಗಾಗಿ ಮಕ್ಕಳು ಮತ್ತು ವೃದ್ಧರು ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಶೀತ, ಕೆಮ್ಮು. ಜ್ವರ ಹಾಗೂ ಉಸಿರಾಟದ ತೊಂದರೆ ಆದರೆ ತಕ್ಷಣ ವೈದರನ್ನು ಸಂರ್ಕಿಸಬೇಕು. ನಿರ್ಲಕ್ಷ ಮಾಡಬಾರದು. ಕರೊನಾ ಇರಲಿ ಬಿಡಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಹಾಗೂ ಸಲಹೆ ಪಡೆದುಕೊಳ್ಳಬೇಕು.
ನಮ್ಮ ಆರೋಗ್ಯ ನಮ್ಮ ಕೈಯಲಿದೆ. ಅದನ್ನು ನಾವೆ ಕಾಪಾಡಿಕೊಳ್ಳಬೇಕು. ಸ್ವಚ್ಛತೆ ಕಾಪಡಿಕೊಳ್ಳುವುದು ಮುಖ್ಯವಾಗಿದೆ. ಯಾರನ್ನಾದರೂ ಮುಟ್ಟಿ ಅದೆ ಕೈಯಿಂದ ಮುಖ, ಮೂಗಿ,ಕಣ್ಣಿಗೆ ಹಚ್ಚಿಕೊಳ್ಳಬಾರದು. ಆಗಾಗ ಕೈ ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ರೋಗದ ಚಿಕಿತ್ಸೆಗಾಗಿ ಧನ್ವಂತರಿ ಆಸ್ಪತ್ರೆಯಲ್ಲಿ ವಿಶೆಷ ವಾರ್ಡ್ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರಮುಖರಾದ ಮನೋಜ ಗಂಗಾ, ಚೇತನ ಗೋನಾಯಕ, ಅಕ್ಷಯ ಪಾಟೀಲ್, ಮಾಣಿಕ ಮಂದಕನಳ್ಳಿ, ವಿನಯ್ ಗುತ್ತೇದಾರ ಇದ್ದರು.