ಶ್ರಮಪಟ್ಟು ಓದಿದರೆ ಭವಿಷ್ಯ ಉಜ್ವಲ: ಮಲ್ಲಿನಾಥ ಪಾಟೀಲ

0
33

ಶಹಾಬಾದ: ವಿದ್ಯಾರ್ಥಿ ಜೀವನದದಲ್ಲಿ ಪ್ರಾಥಮಿಕ ಶಿಕ್ಷಣ ಎನ್ನುವದು ಮೊದಲನೇ ಘಟ್ಟ.ಅದನ್ನು ಶ್ರದ್ಧಾಪೂರ್ವಕ ಶ್ರಮವಹಿಸಿ ಓದಿದರೆ ಭವಿಷ್ಯ ಉಜ್ವಲವಾಗುತ್ತದೆ ಎಂದು ಶಿಕ್ಷಕ ಮಲ್ಲಿನಾಥ ಪಾಟೀಲ ಹೇಳಿದರು.

ಅವರು ಭಂಕೂರ ಗ್ರಾಮದ ಬಸವ ಸಮಿತಿ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಬೀಳ್ಕೊಡುಗೆ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಬೇಕು. ಆ ಸಾಧನೆ ಮಾಡಬೇಕಾದರೇ ಕಷ್ಟಪಟ್ಟು ಅಭ್ಯಾಸ ಮಾಡುವುದು ಅಗತ್ಯ. ಶಿಕ್ಷಣ ಗುಡಿಸಲಿನಲ್ಲಿ ಹುಟ್ಟಿದರೂ ಅರಮನೆಯಲ್ಲಿ ಮೆರಸುವ ಶಕ್ತಿ ಹೊಂದಿದ್ದು, ಅದಕ್ಕಾಗಿ ಶ್ರಮ ಪಟ್ಟು, ಗುರಿ ಮುಟ್ಟಬೇಕು. ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆಯಿಂದ ದೇಶದ ಮುಂದಿನ ಒಳ್ಳೆಯ ನಾಗರಿಕರಾಗಬೇಕು ಎಂದರು.

Contact Your\'s Advertisement; 9902492681

ಬಸವ ಸಮಿತಿ ಶಾಲೆಯ ಕಾರ್ಯದರ್ಶಿ ನೀಲಕಂಠ ಮುದೋಳಕರ್ ಮಾತನಾಡಿ, ಯಾವುದೇ ಕೆಲಸದಲ್ಲಿ ನಿಸ್ವಾರ್ಥತೆ ಮತ್ತು ಪ್ರಾಮಾಣಿಕತೆಗಳು ಇರಬೇಕು. ಗಾಂಧೀಜಿಯ ಕನಸಿನಂತೆ ಪ್ರತಿಯೊಬ್ಬರು ಶಿಕ್ಷಣ ಪಡೆದು ದೇಶದ ಅಭಿವೃದ್ಧಿಗೆ ಪಾತ್ರರಾಗಬೇಕು. ಸಾಹಿತಿ ಹೆಚ್.ಬಿ.ತೀರ್ಥೆ ಮಾತನಾಡಿ, ಮಕ್ಕಳು ಮನುಷ್ಯರಾಗಿ ಬಾಳಬೇಕು. ನಮ್ಮಿಂದ ಇತರರಿಗೆ ನೋವಾಗದಂತೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುವ ಲಕ್ಷಣಗಳನ್ನು ಬೆಳೆಸಿಕೊಳ್ಳಬೇಕು.ಪಠ್ಯದ ಜತೆಗೆ ಪರಿಸರ ಸಂರಕ್ಷಣೆ, ಸಮುದಾಯ ಸೇವೆ, ಕೈಲಾದಮಟ್ಟಿಗೆ ದೇಶಕ್ಕೆ ಇತರರಿಗೆ ಸಹಾಯ ಮಾಡುವಂತ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಬಸವ ಸಮಿತಿ ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ವೀಣಾ ನಾರಾಯಣ, ಶಿಶುವಿಹಾರದ ಮುಖ್ಯಗುರುಮಾತೆ ರಾಜೇಶ್ವರಿ ಹಿರೇಮಠ,ಪ್ರೌಢಶಾಳೆಯ ಮುಖ್ಯಗುರು ರಮೇಶ ಅಳೋಳ್ಳಿ, ವರ್ಗ ಶಿಕ್ಷಕರಾದ ಸುಜಾತಾ ಶೇರಿಕಾರ ವೇದಿಕೆಯ ಮೇಲಿದ್ದರು. ಬಸವ ಸಮಿತಿ ಕಾರ್ಯದರ್ಶಿ ರೇವಣಸಿದ್ದಪ್ಪ ಮುಸ್ತಾರಿ ಅಧ್ಯಕ್ಷತೆ ವಹಿಸಿದ್ದರು.
ಬಸವ ಸಮಿತಿ ಆಡಳಿ ಮಡಳಿಯ ಸದಸ್ಯರಾದ ಶಿವರಾಜ ಹಡಪದ, ಶಾಂತಪ್ಪ ಬಸಪಟ್ಟಣ, ಹಣಮಂತರಾಯ ದೇಸಾಯಿ, ವೀರಭದ್ರಪ್ಪ ಕಲಶೆಟ್ಟಿ, ಗುರಲಿಂಗಪ್ಪ ಪಾಟೀಲ ಸೇರಿದಂತೆ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here