ಚಿಂಚೋಳಿ: ಭಾರತ ಸಂವಿಧಾನದ ಪಿತಾಮಹ ಡಾ. ಬಿ. ಆರ್. ಅಂಬೇಡ್ಕರವರ ಮಾರ್ಗದಲ್ಲಿ ಮುಂದೆ ಸಾಗುತಿರುವ ಬಿ.ಎಸ್.ಪಿ ಸ್ಥಾಪಕ ದಿ. ಕಾನ್ಸಿರಾಂಜೀರವರ 86ನೇ ಜನ್ಮ ದಿನಾಚಾರಣೆ ಅಂಬೇಡ್ಕ ಭವನದಲ್ಲಿ ಆಚರಿಸಿದರು.
ಈ ವೇಳೆಯಲ್ಲಿ ಪಕ್ಷದ ಜಿಲ್ಲಾ ಸಂಯೋಜಕರಾದ ಗೌತಮ್ಮ ಬೋಮ್ಮನಳ್ಳಿ ಮಾತನಾಡಿ, ಸಾಮಾಜಿಕ ಆರ್ಥಿಕ ರಾಜಕೀಯ ತುಳಿತಕ್ಕೆ ಒಳಗಾದ ಶೋಷಿತರ ಏಳಿಗೆಗೇ ಶ್ರಮಿಸಿದ ಕಾನ್ಸಿರಾಂಜೀ ಅವರು 1984ರಂದು ಅಂಬೇಡ್ಕರ ಜನ್ಮ ದಿನದಂದು ದಿಲ್ಲಿಯ ಬೋಟ್ ಮೈದಾನದಲ್ಲಿ ಬೃಹತ ಸಮ್ಮೇಳನದ ತಮ್ಮ ಅಧ್ಯಕ್ಷ ಸ್ಥಾನದಲ್ಲಿ ಬಹುಜನ ಸಮಾಜ ಪಕ್ಷ (BSP) ರಾಜಕೀಯ ಪಕ್ಷ ಕಟ್ಟೀದರು ಎಂದು ತಿಳಿಸಿದ್ದರು.
ಪಕ್ಷದ ಚಿಹ್ನೆ ಆನೆ ಗುರುತು ನೀಲಿ ಬಾವುಟ ತೇಗೆದುಕೋಂಡರು ಬಹುಜನ ಸಮುದಾಯಗಳು ಒಂದು ರಾಜಕೀಯ ಪಕ್ಷ ಸ್ಥಾಪನೆ ಮಾಡಿ ಈ ದೇಶ ಆಳ್ವಿಕೆ ನಡೇಸಲು ಅರ್ಹರು ಎಂದು ತೋರಿಸಿಕೋಟ್ಟಿದ್ದು, ಅಂಬೇಡ್ಕರವರ ಅನುಯಾಯಿ ಆಗಿ ಶೋಷಿತ ಸಮುದಾಯ ದಾರಿ ತೋರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಸೇರಿದಂತೆ ಕಾರ್ಯಕರ್ತರು ಇದ್ದರು.