ಕಲಬುರಗಿಗೆ ವಿದೇಶದಿಂದ 61 ಜನ ಆಗಮನ, ಎಲ್ಲರನ್ನು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ: ಡಿಸಿ

0
47

ಕಲಬುರಗಿ: ಕಲಬುರಗಿಯ ಮೃತ ವ್ಯಕ್ತಿಯ ಸಂಪರ್ಕ ಹೊಂದಿದ್ದ ಇಬ್ಬರು ವ್ಯಕ್ತಿಗಳು ಹಾಗೂ ವಿದೇಶದಿಂದ ಬಂದ ಇಬ್ಬರು ವ್ಯಕ್ತಿಗಳು ಸೇರಿ ಹೊಸದಾಗಿ ೪ ಜನರು ಚಿಕಿತ್ಸೆಗೆ ದಾಖಲಾಗಿದ್ದು, ಅವರ ಗಂಟಲು ದ್ರವ್ಯದ ಸ್ಯಾಂಪಲ್ಸ್‌ಗಳನ್ನು ಕೊರೋನಾ ವೈರಸ್ ಸೊಂಕು ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಹೇಳಿದರು.

ಸೋಮವಾರ ಇಲ್ಲಿನ ವಾರ್ತಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, ಕಲಬುರಗಿ ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನಲ್ಲಿ ಈ ಹಿಂದಿನ ಮೂರು ನೆಗೆಟಿವ್, ಒಂದು ಪಾಸಿಟಿವ್ ರೋಗಿ ಹಾಗೂ ಹೊಸದಾಗಿ ಕೊರೋನಾ ವೈರಸ್ ಲಕ್ಷಣದ ಹಿನ್ನೆಲೆಯಲ್ಲಿ ದಾಖಲಾದ ೪ ರೋಗಿಗಳು ಸೇರಿದಂತೆ ಒಟ್ಟು ೮ ಜನರಿಗೆ ಪ್ರತ್ಯೇಕವಾಗಿ ಐಸೋಲೇ?ನ್ಸ್ ವಾರ್ಡ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿ.ಸಿ. ತಿಳಿಸಿದರು.

Contact Your\'s Advertisement; 9902492681

ಮೃತ ವ್ಯಕ್ತಿಯ ಸಂಬಂಧಿಕರೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಈ ಹಿಂದೆ ಗುರುತಿಸಿದ ೭೧ ವ್ಯಕ್ತಿಗಳ ಜೊತೆಗೆ ಎರಡನೇ ಸಂಪರ್ಕ ಹೊಂದಿದ ೨೩೮ ವ್ಯಕ್ತಿಗಳನ್ನು ಹಾಗೂ ವಿದೇಶದಿಂದ ಮರಳಿದ ೬೧ ವ್ಯಕ್ತಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ ೩೭೦ ಜನರ ಮೇಲೆ ನಿಗಾ ವಹಿಸಿದೆ. ೩೭೦ ಜನರಲ್ಲಿ ಎಂಟು ಜನರು ಐಸೋಲೇ?ನ್ ವಾರ್ಡನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದವರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ ಎಂದರು.

ಕಲಬುರಗಿಗೆ ವಿದೇಶದಿಂದ 61 ಆಗಮನ, ಎಲ್ಲರನ್ನು ಹೋಂ ಐಸೋಲೇಷನ್‌ನಲ್ಲಿಟ್ಟು ಚಿಕಿತ್ಸೆ: ಕೊರೋನಾ ವೈರಸ್ ಭೀತಿಯ ನಡುವೆ ಕಲಬುರಗಿ ಜಿಲ್ಲೆಗೆ ವಿವಿಧ ದೇಶಗಳಿಂದ ಇದೂವರೆಗೆ ೬೧ ಜನರು ಮರಳಿ ಬಂದಿರುವ ಮಾಹಿತಿ ಲಭ್ಯವಾಗಿದ್ದು, ಅವರೆಲ್ಲರ ಮೇಲೆ ನಿಗಾ ಇರಿಸಲಾಗಿದೆ ವಿದೇಶದಿಂದ ಬಂದವರು ನಮಗೆ ಮಾಹಿತಿ ನೀಡಿಲ್ಲ. ನಮ್ಮ ಅಧಿಕಾರಿಗಳ ತಂಡವೆ ಈ ಮಾಹಿತಿ ಕಲೆಹಾಕಿದ್ದು, ತದನಂತರ ಅವರನ್ನು ಸಂಪರ್ಕಿಸಿ ಹೋಂ ಐಸೋಲೇಷನ್‌ನಲಿಟ್ಟು ನಿಗಾ ಇಡಲಾಗಿದೆ ಎಂದರು.

ಕಲಬುರಗಿಯ ಜಿಮ್ಸ್ ಆಸ್ಪತೆಯಲ್ಲಿ ೧೨ ಮತ್ತು ಇ.ಎಸ್.ಐ.ಸಿ.ನಲ್ಲಿ ೫೦ ಐಸೋಲೇ?ನ್ ವಾರ್ಡ್‌ಗಳಿವೆ. ಇದರ ಜೊತೆಯಲ್ಲಿ ೨೦೦ ಕ್ವಾರಂಟೈನ್ ವಾರ್ಡ್ ಸಹ ಇದ್ದು, ಇಲ್ಲಿ ರೋಗಿಗಳಿಗೆ ಹೋಂ ಕ್ವಾರಂಟೈನ್‌ನಲ್ಲಿಟ್ಟು ತೀವ್ರ ನಿಗಾ ವಹಿಸುವ ಎಲ್ಲಾ ಸೌಲಭ್ಯವಿದೆ. ಇದಲ್ಲದೆ ಜಿಲ್ಲೆಯ ಪ್ರತಿ ತಾಲೂಕಾ ಕೇಂದ್ರದಲ್ಲಿ ೫ ಐಸೋಲೇಶನ್ ವಾರ್ಡ್ ಸ್ಥಾಪಿಸಿದೆ ಎಂದು ಶರತ್ ಬಿ. ಅವರು ಮಾಹಿತಿ ನೀಡಿದರು.

ಇದಲ್ಲದೆ ಕಲಬುರಗಿ ರೈಲು ನಿಲ್ದಾಣ, ವಿಮಾನ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿಯೂ ಸಹ ತಪಾಸಣೆ ಜಾರಿಯಲ್ಲಿದೆ ಎಂದರು.

ಒಂದು ತಿಂಗಳು ಬಂದ್ ಸಾಧ್ಯತೆ: ಕೊರೋನಾ ವೈರಸ್ ಸೊಂಕಿನಿಂದ ಕಲಬುರಗಿ ವ್ಯಕ್ತಿ ನಿಧನ ಹೊಂದಿದ್ದರಿಂದ ಮತ್ತು ಈಗಾಗಲೆ ರಾಜ್ಯದಾದ್ಯಂತ ಮೆಡಿಕಲ್ ಎಮರ್ಜೆನ್ಸಿ ಘೋ?ಣೆ ಆಗಿರುವುದರಿಂದ ಪ್ರಸ್ತುತ ಒಂದು ವಾರಗಳ ಕಾಲ ಜಿಲ್ಲೆಯಾದ್ಯಂತ ಅಘೋಷಿತ ಬಂದ್ ಜಾರಿಯಲ್ಲಿದೆ. ಇದು ಮುಂದಿನ ಒಂದು ತಿಂಗಳವರೆಗೆ ಮುಂದುವರೆಯುವ ಸಾಧ್ಯತೆ ಇದ್ದು, ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ವಾರ್ಡ್ ನಂ-೩೦ರಲ್ಲಿ ಸ್ಕ್ರೀನಿಂಗ್: ಕೊರೋನಾ ವೈರಸ್ ಸೊಂಕಿನಿಂದ ನಿಧನ ಹೊಂದಿದ ಕಲಬುರಗಿ ವ್ಯಕ್ತಿ ವಾಸದ ವಾರ್ಡ್ ನಂಬರ್ ೩೦ನ್ನು ಕಂಟೇನ್ಮೆಂಟ್ ಝೋನ್ ಎಂದು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಆರೋಗ್ಯ ಇಲಾಖೆಯ ಸರ್ವೆಲೆನ್ಸ್ ತಂಡಗಳು ೩ ಸಾವಿರ ಮನೆಗಳನ್ನು ಗುರುತಿಸಲಾಗಿದ್ದು, ಇಲ್ಲಿ ಅರಿವು ಮೂಡಿಸುವ ಹಾಗೂ ಸ್ಕ್ರೀನಿಂಗ್ ಕಾರ್ಯಕ್ರಮ ಮುಂದುವರೆದಿದೆ ಎಂದರು.

ಸಹಾಯವಾಣಿ ಸ್ಥಾಪನೆ: ಕೊರೋನಾ ವೈರಸ್ ಕುರಿತಂತೆ ೨೪ ಗಂಟೆ ಸಹಾಯ ವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ 08472-278604/ 278677 ಇರುತ್ತದೆ. ವಿದೇಶದಿಂದ ಮರಳಿದರೆ ಮಾಹಿತಿ ಕೊಡಿ: ಸ್ಥಳೀಯ ವ್ಯಕ್ತಿ ಅಥವಾ ಹೊಸದಾಗಿ ಯಾರೇ ಹೊರದೇಶದಿಂದ ಮರಳಿ ಕಲಬುರಗಿ ಜಿಲ್ಲೆಗೆ ಬಂದಲ್ಲಿ ಸ್ವಯಂಪ್ರೇರಿತರಾಗಿ ಆವರು ಮಾಹಿತಿ ನೀಡುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಒಂದು ವೇಳೆ ಮಾಹಿತಿ ನೀಡದಿದ್ದಲ್ಲಿ ಸಾರ್ವಜನಿಕರು ೨೪ ಗಂಟೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ತಕ್ಷಣವೇ ಆರೋಗ್ಯ ಇಲಾಖೆಯ ತಂಡ ಸ್ಥಳಕ್ಕೆ ಆಗಮಿಸಲಿದೆ ಎಂದು ತಿಳಿಸಿದರು.

ಮೂರು ಮೆಡಿಕಲ್ ಸ್ಟೋರ‍್ಸ್ ಸೀಜ್: ಮಾಸ್ ಮತ್ತು ಸ್ಯಾನಿಟೈಜರ್‌ಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ರವಿವಾರ ೧೧ ಮೆಡಿಕಲ್ ಅಂಗಡಿಗಳ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ತಪಾಸಣೆ ವೇಳೆ ಹೆಚ್ಚಿನ ದರ ಮಾಡುತ್ತಿದ್ದ ೩ ಮೆಡಿಕಲ್‌ಗಳನ್ನು ಸೀಜ್ ಮಾಡಲಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಯಾರಾದರು ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ಕಂಡುಬಂದಲ್ಲಿ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಸಿ. ಶರತ್ ಬಿ. ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ, ಡಿ.ಸಿ.ಪಿ ಕಿಶೋರ ಬಾಬು, ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here