“ಸೋವಿಯತ್ ದೇಶ ಕಂಡ” ನಾಡೋಜ ಪಾಟೀಲ್ ಪುಟ್ಟಪ್ಪರಿಗೆ ಪಾಣೇಗಾಂವ್ ಸಂತಾಪ

0
71

ಅಮೇರಿಕಾದಲ್ಲಿ ಪತ್ರಿಕೋದ್ಯಮ ಅಧ್ಯಯನ ಮಾಡಿದ ಮೊದಲ ಕನ್ನಡಿಗರಾಗಿದ್ದರು.ಪಾಪು ರವರು ಸ್ವಾತಂತ್ರ್ಯ ಹೋರಾಟ, ಗೋಕಾಕ್ ಚಳುವಳಿ ಕರ್ನಾಟಕ ಏಕೀಕರಣ ಚಳುವಳಿ,ಮಹದಾಯಿ ನೀರಿನ ಪ್ರತಿಭಟನೆ ಹೀಗೆ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ ಪಾಪು ಇಡೀ ಬದುಕು ಹೋರಾಟಮಯವಾಗಿತ್ತು.

ಸಮಾಜವಾದಿ ರಾಷ್ಟ್ರ ಸೋವಿಯತ್ ರಷ್ಯಾಕ್ಕೆ ಭೇಟಿ ನೀಡಿ ಪ್ರವಾಸ ಮಾಡಿದ ನಂತರ 1944ರಲ್ಲಿ “ಸೋವಿಯತ್ ದೇಶ ಕಂಡೆ” ಎಂಬ ಪುಸ್ತಕವನ್ನು ಬರೆಯುತ್ತಾರೆ. ಆ ಒಂದು ಪುಸ್ತಕದಲ್ಲಿ ಒಂದು ವೇಳೆ ರಷ್ಯಾಕ್ಕೆ ಭೇಟಿ ನೀಡಿ ಪ್ರವಾಸ ಮಾಡದೇ ಹೋದರೆ ನನ್ನ ಜೀವನ ಅಪೂರ್ಣವಾಗುತ್ತಿತು. ನಾನು ಈ ಭೂಮಿ ಮೇಲಿನ ನಿಜವಾಗಿ ಸ್ವರ್ಗ ನನ್ನ ಪಾಲಿಗೆ ಕತ್ತಲಾಗುತ್ತಿತ್ತು ಎಂದು ಹೇಳಿದ್ದಾರೆ.

Contact Your\'s Advertisement; 9902492681


ಪಾಟೀಲ್ ಪುಟ್ಟಪ್ಪ ನವರೊಂದಿಗೆ 2017 ರಲ್ಲಿ AIDYO ಯುವಜನ ಸಂಘಟನೆ ಬೆಂಗಳೂರಿನಲ್ಲಿ ಮುಕ್ತ ಸಂವಾದ ಏರ್ಪಡಿಸಿತ್ತು. ನಾನು ಕೂಡಾ ಹಾಜರಾಗಿದ್ದೆ.ಅವರ ರಷ್ಯಾ ಪ್ರವಾಸದ ಅಧ್ಬುತ ಅನುಭವ ನಮ್ಮ ಜೊತೆ ಹಂಚಿಕೊಂಡಿದ್ದು ಈ ಸಂದರ್ಭದಲ್ಲಿ ಯಾವತ್ತೂ ಮರೆಲಾಗದ ಕ್ಷಣ ಸ್ಮರಿಸುವಂತಾಗಿದೆ.

ಆದರೆ ಇಂದು ನಮ್ಮ ಮದ್ಯೆ ಅವರು ಇಲ್ಲವಾಗಿದ್ದು, ಅವರ ನಿಧನದಿಂದ ಸಾಹಿತ್ಯಲೋಕ ಮತ್ತು ಪತ್ರಿಕೋದ್ಯಮ ಕ್ಷೇತ್ರ, ಪ್ರಗತಿಪರ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ. ಅವರನ್ನು ಕಳೆದುಕೊಂಡು ಇಡೀ ಅಖಂಡ ಕರ್ನಾಟಕ ಬಡವಾಗಿದೆ. ಪಾಪು ಅವರ ಅಗಲಿಕೆಯಿಂದ ನಾಡಿನ ಜನತೆಗೆ ದುಃಖತಪ್ತರಾಗಿದ್ದಾರೆ.

ರಾಜ್ಯವು ಪಾಪು ರ ಧೈರ್ಯ ನೇರಮಾತು, ಸಾಕ್ಷಿಪ್ರಜ್ಞೆ, ಹಿರಿಯ ಸಾಹಿತಿ, ಪತ್ರಕರ್ತ ದಿಗಜ್ಜ, ನಿಷ್ಠುರ , ದಿಟ್ಟ ನಡೆ, ನಮ್ಮೆಲ್ಲರಿಗೆ ಮಾದರಿಯಾಗಲಿ ಎಂದು ಆಶಿಸುತ್ತಾ ಅವರಿಗೆ ನನ್ನ ಅಂತಿಮ ನಮನಗಳು ಸಲ್ಲಿಸುತ್ತೇನೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here