ಸುರಪುರ: ಈ ಕೊರೋನಾ ವೈರಸ್ ನಮ್ಮ ಪಕ್ಕದ ಜಿಲ್ಲೆ ಕಲಬುರ್ಗಿಗೆ ಹರಡಿರುವದರಿಂದ ಜನರು ಕೊಂಚ ಆತಂಕದಲ್ಲಿದ್ದಾರೆ ಆದರೆ ಈ ಸೊಂಕು ನಮ್ಮ ತಾಲೂಕಿಗೆ ಹರಡೊಲ್ಲ ಇದು ಹರಡುವುದಕ್ಕೂ ಮುನ್ನಾ ನಮ್ಮ ತಾಲೂಕು ಆಡಳಿತವು ಮುಂಜಾಗೃತಾ ಕ್ರಮವಾಗಿ ಈ ಸೊಂಕಿನ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಕಗಳನ್ನು ಹಮ್ಮಿಕೊಂಡಿದೆ ಎಂದು ಗ್ರೇಡ್ ೨ ತಹಶಿಲ್ದಾರ ಸುಫಿಯಾ ಸುಲ್ತಾನ ತಿಳಿಸಿದರು.
ನಗರದ ತಹಶಿಲ್ದಾರ ಕಚೇರಿಯಲ್ಲಿ ಆಯೋಜಿಸಿದ ಟಾಸ್ಕ ಫೋರ್ಸ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಸೊಂಕಿನ ಕುರಿತು ಈಗಾಗಲೆ ಜನರಿಗೆ ಸಾಕಷ್ಟು ಮಾಹಿತಿಯನ್ನು ಸಂಘ ಸಂಸ್ಥೆಗಳಿಂದ ಮತ್ತು ನಮ್ಮ ವೈದ್ಯಾಧಿಕಾರಿಗಳಿಂದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಮತ್ತು ಸಂತೆಗಳು ಸಾಮೂಹಿಕ ವಿವಾಹಗಳು ಆಯೋಜಿಸದೆ ಈಗಾಗಲೆ ಎಲ್ಲಾಕಡೆ ಎಚ್ಚರಿಕೆ ವಹಿಸಲಾಗಿದೆ ಮತ್ತು ಇಷ್ಟಾಗಿಯೋ ನಗರದಲ್ಲಿ ಬುಧವಾರ ಎಲ್ಲಾ ವಾರ್ಡಗಳ ಸದಸ್ಯರ ಮತ್ತು ಮುಖಂಡರ ಸಭೆಯನ್ನು ಕರೆದು ತಮ್ಮ ತಮ್ಮ ವಾರ್ಡಗಳಲ್ಲಿ ಈ ವೈರಸ್ ಕುರಿತು ಜಾಗೃತಿ ಮೂಡಿಸಲು ಪೌರಾಯುಕ್ತರಿಗೆ ಸಭೆಯನ್ನು ಆಯೋಜಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ನಮ್ಮ ತಾಲೂಕಿನ ಬಹಳಷ್ಟು ಜನರು ತಮ್ಮ ಉಪ ಜೀವನಕ್ಕೆ ಹೊರದೇಶಕ್ಕೆ ಹೊದವರಲ್ಲಿ ಕೆಲವರು ಮರಳಿ ಬಂದಿದ್ದಾರೆ ಈಗಾಗಲೆ ಬಂದಿರುವವರನ್ನು ಏರಪೋರ್ಟಗಳಲ್ಲಿ ತಪಾಸಣೆ ಮಾಡಿಸಿಕೊಂಡು ಗ್ರಾಮಕ್ಕೆ ಬಂದಿದ್ದಾರೆ ಅವರಲ್ಲಿ ಕೊರೋನಾ ವೈರಸ್ ಪತ್ತೆಯಾಗಿಲ್ಲಾ ಆದರೂ ಮುಂಜಾಗೃತಾ ಕ್ರಮವಾಗಿ ಅವರನ್ನು ಗುರುತಿಸಿ ಅವರಿಗೆ ಈ ವೈರಸ್ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಸ್ಪಷ್ಟಪಡಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ತಾಲೂಕು ಪಂಚಾಯತ ಇಒ ಅಮರೇಶ, ಪೌರಾಯುಕ್ತ ಜೀವನ ಕುಮಾರ ಇನ್ನಿತರರಿದ್ದರು.