ಭೂಮಿಗೆ ಗಂಗೆಯ ತಂದ ಮಹರ್ಷಿ ಭಗಿರಥರು: ಸೂಫಿಯಾ

0
138

ಸುರಪುರ: ತಾಲ್ಲುಕು ಆಡಳಿತದಿಂದ ನಗರದ ತಹಸೀಲ್ ಕಚೇರಿಯ ಸಭಾಂಗಣದಲ್ಲಿ ಮಹರ್ಷಿ ಭಗಿರಥರ ಜಯಂತಿಯನ್ನು ಆಚರಿಸಲಾಯಿತು.ಸುರಪುರ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಬೆಳಿಗ್ಗೆ ಹತ್ತು ಗಂಟೆಗೆ ಮಹರ್ಷಿ ಭಗಿರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರೇಡ-2 ತಹಸೀಲ್ದಾರ ಸೂಫಿಯಾ ಸುಲ್ತಾನ ಮಾತನಾಡಿ,ಮಹರ್ಷಿ ಭಗಿರಥರು ಮಹನ್ ತಪಷ್ವಿಯಾಗಿದ್ದರು.ತಮ್ಮ ತಪೋಶಕ್ತಿಯಿಂದ ದೇವಲೋಕದಲ್ಲಿಯ ಗಂಗೆಯನ್ನು ಭೂಮಿಗೆ ಕರೆತಂದ ಮಹಾತ್ಮರಾಅಗಿದ್ದಾರೆ.ಅಂತವರ ಜಯಂತಿಯನ್ನು ಎಲ್ಲರೂ ಭಕ್ತಿ ಭಾವದಿಂದ ಆಚರಿಸಬೇಕು ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ರವಿಕುಮಾರ ರುಕ್ಮಾಪುರ ಮಾತನಾಡಿ,ಇಂದು ನಾವೆಲ್ಲರು ಭೂಮಾತೆಯಂತೆ ಗಂಗಾ ಮಾತೆಯನ್ನು ಕೂಡ ಮಾತೃ ಸ್ವರೂಪದಿಂದ ಪೂಜಿಸುತ್ತೆವೆ.ಭೂ ಲೋಕದಲ್ಲಿನ ಸಕಲ ಜೀವರಾಶಿಗಳಿಗೆ ಬಮದೆರಗಿದ ಜಲಕ್ಷಾಮವನ್ನು ಕಂಡು ಭಗಿರಥ ಮಹರ್ಷಿಯು ತಪಸ್ಸನ್ನು ನಡೆಸಿ,ಹಲವಾರು ವರ್ಷಗಳ ನಿರಂತರ ತಪಸ್ಸಿನ ಫಲದಿಂದ ಪ್ರತ್ಯಕ್ಷರಾದ ದೇವರಿಗೆ ಗಂಗೆಯನ್ನು ಭೂ ಲೋಕದಲ್ಲಿ ಹರಿಸುವಂತೆ ವರ ಬೇಡಿ,ದೇವ ಲೋಕದ ಗಂಗೆಯನ್ನು ಭೂ ಲೋಕಕ್ಕೆ ಕರೆ ತಂದು ಭೂಲೋಕದ ಎಲ್ಲ ಜೀವರಾಶಿಗಳ ದಾಹ ತಣಿಸಿದ ಮಹಾತ್ಮ ಇಂದು ಮಹರ್ಷಿ ಭಗಿರಥರಾಗಿದ್ದಾರೆ ಎಂದರು.

ಭಗಿರಥ ಮಹರ್ಷಿಯನ್ನು ಆರಾಧಿಸುವ ಉಪ್ಪಾರ ಸಮುದಾಯ ಇಂದು ಹಲವರು ಸಮಸ್ಯೆಗಳನ್ನು ಹೆದರಿಸುತ್ತಿದೆ.ಇದನ್ನು ಆಳುವ ಸರಕಾರಗಳು ನಮ್ಮ ಬೇಡಿಕೆಗಳನ್ನು ಗಮನಿಸಿ ಪರಿಹರಿಸಬೇಕಿದೆ ಎಂದರು.
ಕಾರ್ಯಕ್ರಮದ ವೇದಿಕೆ ಮೇಲೆ ಉಪ್ಪಾರ ಸಮುದಾಯದ ಅಧ್ಯಕ್ಷ ಭೀಮಣ್ಣ ಚಿಕ್ಕನಹಳ್ಳಿ,ಉಪ್ಪಾರ ಸಂಘದ ರಾಜ್ಯಾಧ್ಯಕ್ಷ ಅಮರೇಶ ಯಡಹಳ್ಳಿ, ಡಾ:ಮುಕುಂದ ಯಾನಗುಂಟಿ, ದೇವಿಂದ್ರಪ್ಪ ಸಾಹು ವಾಗಣಗೇರಾ ಇದ್ದರು.
ರಾಮಚಂದ್ರ ದೇವಿಕೇರಾ, ವೆಂಕಟೇಶ ಗದ್ವಾಲ, ಶಂಕರ ಸಾಹು ಹಸನಾಪುರ, ಗೋವಿಂದರಾಜ ಶಹಾಪುರಕರ್, ಗಂಗಾಧರ ಲಕ್ಷ್ಮೀಪುರ, ಮಂಜುನಾಥ ಧರಣಿ, ಬಸವರಾಜ ರುಕ್ಮಾಪುರ, ತಿರುಪತಿ ಅಮ್ಮಾಪುರ,ಮಾನಪ್ಪ ದೇವರಗೋನಾಲ ಸೇರಿದಂತೆ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಹಾಗು ಭಗಿರಥರ ಅನುಯಾಯಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here