ಕಲಬುರಗಿ: ಚಿಕ್ಕವರಿದ್ದಾಗ ಶಾಲೆಯಲ್ಲಿ ತಪ್ಪು ಮಾಡಿದಾಗ ಟೀಚರ್ಗಳು ಓಡಾಟ-ಬಸ್ಕಿ ಶಿಕ್ಷೆ ನಿಡ್ತಿದು ನೆನಪಾಗಬಹುದು. ಆದರೆ ಈಗ ಕೊರೊನಾ ವೈರಸ್ ತಡೆಗಟ್ಟಲು ದೇಶಾದ್ಯಂತ ಲಾಕ್ಡೌನ್ ಇದ್ದರೂ ಅನಗತ್ಯವಾಗಿ ಹೊರಗೆ ಓಡಾಡಿದವ್ರಿಗೆ ಪೊಲೀಸರು, ಈ ರೀತಿ ಶಿಕ್ಷೆ ನೀಡಿರುವ ಘಟನೆ ನಗರದ ಶಾಹಬಜಾರ್ ಚೆಕ್ಪೋಸ್ಟ್ ಬಳಿ ನಡೆದಿದೆ.
ಅನಗತ್ಯವಾಗಿ ರಸ್ತೆಗಿಳಿದಿದ್ದ ಬೈಕ್ ಸವಾರರನ್ನ ಹಿಡಿದು ಪೊಲೀಸರು ಈ ಪನಿಷ್ಮೆಂಟ್ ಕೊಟ್ಟಿದ್ದಾರೆ. ಲಾಕ್ಡೌನ್ ಆದೇಶ ಪಾಲಿಸದವರಿಗೆ ಬಸ್ಕಿ ಹೊಡೆಸಿ ಬುದ್ಧಿ ಕಲಿಸಿದ್ದಾರೆಂದು ತಿಳಿದುಬಂದಿದೆ.