ಸುರಪುರ: ನಗರದಲ್ಲಿ ತಾತ್ಕಾಲಿಕವಾಗಿ ತರಕಾರಿ ಮಾರಲು ವ್ಯವಸ್ಥೆ ಕಲ್ಪಿಸಿರುವ ಎಸ್.ಪಿ.ಕಾಲೇಜು ಮೈದಾನಕ್ಕೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಬೇಟಿನೀಡಿ ಅಧಿಕಾರಿಗಳ ತೆಗೆದುಕೊಂಡಿರುವ ಮುಂಜಾಗೃತೆ ಕ್ರಮವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂತಹ ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಕೆಲ ದುಷ್ಟ ಮನಸ್ಸಿನವರು ದಿನಬಳಕೆ ಪದಾರ್ಥಗಳ ಬೆಲೆಯನ್ನು ದಿನದಿಂದ ದಿನಕ್ಕೆ ಜಾಸ್ತಿಮಾಡುವ ದುರಾಸೆಯನ್ನು ಹೊಂದಿರುತ್ತಾರೆ ಅಂತವರು ಕಂಡುಬಂದಲ್ಲಿ ತಕ್ಷಣವೆ ಅವರ ಮೇಲೆ ಪ್ರಕರಣವನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಈಗಾಗಲೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದರು.
ತರಕಾರಿ ಮತ್ತು ಹಣ್ಣು ಮಾರಾಟ ಮಾಡುತ್ತಿದ್ದವರನ್ನು ಭೇಟಿ ಮಾಡಿ ಮಾತನಾಡಿ,ಎಲ್ಲರು ಆಗಾಗ ನಿಮ್ಮ ಕೈಗಳನ್ನು ತೊಳೆಯುತ್ತಿರಿ ಮತ್ತು ಮುಖಕ್ಕೆ ಮಾಸ್ಕ್ ಧರಿಸುವಂತೆ ತಿಳಿಸಿದರು.ನಂತರ ನಗರದಲ್ಲಿಯ ಭಿಕ್ಷುಕರು ಮತ್ತು ಮಾನಸಿಕ ಅಸ್ವಸ್ಥರಿಗಾಗಿ ಅನ್ನ ವಿತರಣೆಗಾಗಿ ವ್ಯವಸ್ಥೆ ಕಲ್ಪಿಸಲಾಗಿರುವ ಲಕ್ಷ್ಮೀಕಾಂತ ದೇವರಗೊನಾಲ ಅವರ ಅನ್ನಪೂರ್ಣ ಕುಟೀರಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಡಿಎಸ್‌ಪಿ ವೆಂಕಟೇಶ ಹುಗಿಬಂಡಿ, ಪಿಐ ಎಸ್.ಎಮ್.ಪಾಟೀಲ, ನೈರ್ಲಮ್ಯ ಎಇಇ ಸುನೀಲ ನಾಯಕ , ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಇದ್ದರು