ಷರತ್ತುಗಳ ಸರದಾರ ಜಿಲ್ಲಾಡಳಿತದ ನೇತಾರ ಶರತ್. ಬಿ: ಇ-ಮೀಡಿಯಾ ಕವಿತೆ ಲೈನ್

0
150
ಷರತ್ತುಗಳ ಸರದಾರ
ಜಿಲ್ಲಾಡಳಿತದ ನೇತಾರ
——————————-
ಶ(ಷ)ರತ್ತು
ಬಿ ಶರತ್ ಬಿ …
ಶ(ಷ)ರತ್ತಿನದೇ ಎಲ್ಲೆಡೆ ಹವಾ
ಕಲಬುರಗಿಯ ತುಂಬಾ!
ಜನಮನ ನಡೆನುಡಿ
ಚಲಾವಣೆಯೆಲ್ಲವೂ ಬಿ.
ಶರತ್ ರ ಸೂಚನೆ ಆದೇಶದ
ಶ(ಷ)ರತ್ತಿಗೇ ಬದ್ಧ..!

– ೧ –

ಹೌದು,
ದಂಡಾಧಿಕಾರಿ
ಬಿ. ಶರತ್ ಎಂದರೆ
ಕಲಬರಗಿಯ ಶಿರೋಕಿರೀಟ..!
ಕನ್ನಡದ ನುಡಿ ತೇರನು
ಎಲ್ಲರೊಗ್ಗೂಡಿಸಿ ಎಳೆದ ಸರದಾರ.
ಸಿಟಿ ಬಸ್ಸು ಮಾರ್ಕೆಟ್ಟು
ಮನೆ ಮನೆಗಳಲೀ
ಡಿಸಿಯದೇ ಗುಣಗಾನ.
ಬಿ ಶರತ್ ಯೆಂದರೆ
ಕಲಬುರಗಿಯವರಿಗೆ
ಸ್ಫೂರ್ತಿಯ ವರದಾನ.
– ೨ –
ಇದೀಗ ಧುತ್ತೆಂದು
ಎರಗಿತು ಕೊರೋನಾ
ಮಹಾಮಾರಿ ವೈರಸ್
ಕಲಬುರಗಿ ನಗರಕ್ಕೆ…!
ತಕ್ಷಣವೇ ಎದ್ದು ನಿಂತರು
ಧೀರ ಬಿ. ಶರತ್
ಯೋಧರಂತೆ.
ಅಲೆದರು ಸಭೆಗೂಡಿದರು
ಸಲಹೆ ನೀಡಿ ಆದೇಶ
ಹೊರಡಿಸಿದರೆಲ್ಲಡೆ
ನಿತ್ಯ ನಿರಂತರ ಸುತ್ತಿದರು
ಚಿಕಿತ್ಸಾರಕ್ಷಕ ತಂಡದೊಡಗೂಡಿ
ಶ(ಷ)ರತ್ತು ಹಾಕಿದರು
ಮನೆಬಿಟ್ಟು ಬಾರದಿರಿಯೆಂದು..!
– ೩-
ಕಂಗೆಟ್ಟ ಸಕಲರಿಗೂ
ಸಾಂತ್ವನವ ಹೇಳಿದರು.
ಭಯದ ಕಾರ್ಮೋಡ ಕಳೆದು
ಧೈರ್ಯವನು ತುಂಬಿದರು.
ಉದರಂಭರಣ ಪಡಿಯೆಲ್ಲ
ಗಲ್ಲಿ ಗಲ್ಲಿಯಲ್ಲಿ ದೊರಕಿಸುವ
ಅನುಕೂಲ ಮಾಡಿದರು
ಬೆದರಿದ ಜನರಿಗೆ ಭರವಸೆ
ನೀಡಿದರು ಕೊರೋನಾ ಸರಪಳಿಯ
ಕಡಿದ್ಹಾಕುತಿಹರು ಜನರ ಸರದಾರ
ಜಿಲ್ಲಾಡಳಿದ ಪರಮ ನೇತಾರ..!
– ಪವಿತ್ರಾದೇವಿ ಈ. ಹಿರೇಮಠ
ಸರಸ್ವತಿಪುರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here