ಮಾನವಿಯತೆ ಮೆರೆದ ಅಣ್ಣಿಗೇರಿ ಪೊಲೀಸ್ ಠಾಣಾಧಿಕಾರಿ ಪಿಎಸ್ಐ ಲಾಲಸಾಬ ಕೆ ಜೂಲಕಟ್ಟಿ

0
70
  • ಮರಿಗೌಡ ಬಾದರದಿನ್ನಿ

ಹುಬ್ಬಳ್ಳಿ: ಕೊರೋನಾ ವೈರಸ್ ಭೀತಿ ಎಲ್ಲೆಡೆಯೂ ಪಸರಿಸುತ್ತಿದ್ದು,ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ನಿರಾಶ್ರಿತರಿಗೆ ಆಹಾರ ಹಾಗೂ ಪಾನೀಯ ವ್ಯವಸ್ಥೆ ಮಾಡುತ್ತಿದ್ದಾರೆ. ಇನ್ನೂ ಕೆಲವು ಪೊಲೀಸರು ಕರ್ಫ್ಯೂ ಪಾಲನೆ ಮಾಡದ ಜನರ ಮೇಲೆ ಲಾಠಿ ಪ್ರಹಾರ ಮಾಡಿ ಹೆಸರಾದವರೆ ಹೆಚ್ಚೆಂದು ಹೇಳಬಹುದು ಆದರೆ ಇಲ್ಲೊಬ್ಬ ಪಿಎಸ್ಐ ಲಾಲಸಾಬ ಕೆ ಜೂಲಕಟ್ಟಿ ಅಣ್ಣಿಗೇರಿ ಪೊಲೀಸ್ ಠಾಣಾಧಿಕಾರಿ ಸ್ವಯಂ ಪ್ರೇರಿತರಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ನಿರಾಶ್ರಿತರಿಗೆ ಆಹಾರ ವ್ಯವಸ್ಥೆ ಮಾಡುತ್ತಿದ್ದಾರೆ.

ಹೌದು ಅಣ್ಣಿಗೇರಿ ಪೊಲೀಸ ಠಾಣೆಯ ಪೊಲೀಸ್ ಅಧಿಕಾರಿ ಪಿಎಸ್ಐ ಲಾಲಸಾಬ.ಕೆ.ಜುಲಕಟ್ಟಿ ಎಂಬುವವರು ತಮ್ಮ ಮನೆಯಿಂದಲೇ ಅಡುಗೆಯನ್ನು ತಯಾರಿಸಿಕೊಂಡು ಬಂದು ಬಸ್ ವ್ಯವಸ್ಥೆ ಇಲ್ಲದೇ ತಮ್ಮ‌ ತಮ್ಮ ನಿವಾಸಗಳಿಗೆ ತೆರಳಲು ಕಾಲ್ನಡಿಗೆ ಅನುಸರಿಸಿರುವ ಹೋಗುತ್ತಿರುವ ಸಾರ್ವಜನಿಕರಿಗೆ ಆಹಾರವನ್ನು ಹಾಗೂ ಕುಡಿಯಲು ನೀರನ್ನು ವಿತರಣೆ ಮಾಡಿದರು.

Contact Your\'s Advertisement; 9902492681

https://www.youtube.com/watch?v=iRv1_rQUqO8&t=22s

ಲಾಕ್ ಡೌನ್ ಆದೇಶದ ಹಿನ್ನಲೆಯಲ್ಲಿ ಗದಗ ಹಾಗೂ ಹುಬ್ಬಳ್ಳಿಯ ರಸ್ತೆಯ ನಡುವೆ ಕಾಲ್ನಡಿಗೆ ಮೂಲಕ ತಮ್ಮ ಊರಿಗೆ ಸಂಚರಿಸುವ ಸಾರ್ವಜನಿಕರಿಗೆ ಆಹಾರ ವಿತರಣೆ ಮಾಡುವ ಮೂಲಕ ಕರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಆರೋಗ್ಯದ ಕಾಳಜಿ ಬಗ್ಗೆ ಮಾಹಿತಿ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here