ಪೂನಾ ಗೋವಾಗಳಿಂದ ಬಂದ ಜನರಿಗೆ ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ಸೊಂಕು ಪರೀಕ್ಷೆ

0
53

ಸುರಪುರ: ಹೊಟ್ಟೆಪಾಡಿಗಾಗಿ ಬೇರೆ ಬೇರೆ ನಗರಗಳಿಗೆ ಗುಳೆಹೋದ ಜನರು ದುಡಿಮೆ ಇಲ್ಲದೆ ಹಳ್ಳಿಗಳಗೆ ಮರಳಿ ಬರುತ್ತಿದ್ದಾರೆ.ಅಂತಹ ಜನರಲ್ಲಿ ಕೊರೊನಾ ಸೊಂಕು ಹರಡಿರುವ ಭೀತಿಯಿಂದ ಗ್ರಾಮಗಳಲ್ಲಿನ ಜನರು ಭಯಭೀತರಾಗಿದ್ದಾರೆ.ಪೂನಾ ಗೋವಾ ಬೆಂಗಳೂರು ಮತ್ತಿತರೆಡೆಗಳಿಂದ ಆಯಾ ಗ್ರಾಮಗಳಿಗೆ ಬಂದಿರುವ ಜನರನ್ನು ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಸೊಂಕು ಪತ್ತೆಗಾಗಿ ಥರ್ಮಾ ಮೀಟರ್ ಮೂಲಕ ಪರೀಕ್ಷೆ ನಡೆಸಲಾಯಿತು.

ತಾಲೂಕಿನ ವಿವಿಧ ಗ್ರಾಮಗಳಿಗೆ ಸುಮಾರು ಐದು ಸಾವಿರಕ್ಕು ಹೆಚ್ಚು ಜನ ಗುಳೆ ಹೋದವರು ಮರಳಿ ಊರುಗಳಿಗೆ ಆಗಮಿಸಿದ್ದು ಅವರೆಲ್ಲನ್ನು ಪರೀಕ್ಷೆಗೊಳಪಡಿಸುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ.ಈ ವಿಷಯದ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ: ಆರ್.ವಿ ನಾಯಕ ಮಾತನಾಡಿ,ಗ್ರಾಮೀಣ ಭಾಗದಲ್ಲಿ ಎಷ್ಟು ಜನ ಬಂದಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.ಅದಕ್ಕಾಗಿ ಎಲ್ಲಾ ಗ್ರಾಮಗಳಲ್ಲಿ ನಮ್ಮ ಇಲಾಖೆಯ ಸಿಬ್ಬಂದಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ತಮಡ ರಚನೆ ಮಾಡಿ ಸರ್ವೆ ಮಾಡಿಸಲಾಗುತ್ತಿದೆ.ಅವರೆಲ್ಲರನ್ನು ಅವರ ಮನೆಗಳಲ್ಲಿಯೆ ಪರೀಕ್ಷೆ ನಡೆಸಲು ಒಂದಿಷ್ಟು ಸಲಕರಣೆಗಳ ಕೊರತೆಯಿರುವುದರಿಂದ ಈಗ ಇಲ್ಲೆ ತಾಲೂಕು ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗುತ್ತಿದೆ.ಇಂದು ಸುಮಾರು ೩೬೪ ಜನರನ್ನು ಪರೀಕ್ಷಿಸಲಾಗಿದ್ದು ಯಾರಲ್ಲೂ ಸೊಂಕು ಕಂಡು ಬಂದಿಲ್ಲ,ಆದರು ಅವರ ಮನೆಗಳಲ್ಲಿ ಗದಿನಾಲ್ಕು ದಿನಗಳ ಕಾಲ ಪ್ರತ್ಯೇಕವಾಗಿ ಇರುವಂತೆ ತಿಳಿಸಲಾಗುತ್ತಿದೆ ಎಂದರು.

Contact Your\'s Advertisement; 9902492681

ವಿವಿಧ ಗ್ರಾಮಗಳ ಜನರು ಕೋವಿಡ್-೧೯ ಸೊಂಕಿನ ಭೀತಿಯಿಂದ ತಾವಾಗಿಯೇ ಬಂದು ಸರತಿ ಸಾಲಿನಲ್ಲಿ ನಿಂತು ಪರೀಕ್ಷೆಗೊಳಪಡುತ್ತಿರುವುದು ಕಂಡುಬಂತು.ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಹಾಗು ಸಿಬ್ಬಂದಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here