ಹೆಚ್ಚಿನ ಹಣ ಪಡೆದು ಮಾರಾಟ ಮಾಡಿದರೆ ಅಂಗಡಿ ಪರವಾನಗಿ ರದ್ದು: ತಹಸೀಲ್ದಾರ ವರ್ಮಾ ಎಚ್ಚರಿಕೆ

0
219

ಶಹಾಬಾದ: ನಗರದ ಕಿರಾಣಿ ಅಂಗಡಿ, ಔಷಧಿ ಅಂಗಡಿ, ತರಕಾರಿ ಅಂಗಡಿ ಹಾಗೂ ಹಾಲಿ ಅಂಗಡಿಯವರು ಸಾರ್ವಜನಿಕರಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಹಣ ಪಡೆಯುವುದು ಕಂಡು ಬಂದರೆ ಆ ಅಂಗಡಿಯವರ ಲೈಸೆನ್ಸ್ ರದ್ದು ಪಡಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಸೀಲ್ದಾರ ಸುರೇಶ ವರ್ಮಾ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಭೀತಿಯಿಂದ ದೇಶವೇ ಲಾಕ್‌ಡೌನ್ ಆಗಿದೆ. ಜನರಿಗೆ ಬೇಕಾದ ದಿನಸಿ ಅಂಗಡಿಗಳು, ತರಕಾರಿ, ಹಾಲು, ಔಷಧಿಗಳನ್ನು ಒದಗಿಸಲು ಎಲ್ಲಾ ರೀತಿಯ ಸೌಕರ್ಯ ನೀಡಲಾಗಿದೆ. ಕೊರೊನಾ ವೈರಸ್ ಹರಡುತ್ತಿರುವ ಗಮನಿಸಿದರೇ ದೇಶಕ್ಕೆ ಸಂದಿಗ್ಧ ಪರಿಸ್ಥಿತಿ ಬಂದಿದೆ.ಇಂತಹ ಸಂದರ್ಭದಲ್ಲಿ ಎಲ್ಲರ ಸಹಕಾರ ಬೇಕಾಗಿದೆ.ಅಲ್ಲದೇ ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾದ ವಸ್ತುಗಳ ಬೆಲೆಯನ್ನು ಅಗತ್ಯಕ್ಕಿಂತ ಹೆಚ್ಚಿಗೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳು ಸಾಕಷ್ಟು ಬರುತ್ತಿವೆ.ಆದ್ದರಿಂದ ವ್ಯಾಪಾರಸ್ಥರು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಮುಂದಾದರೇ ಕಠಿಣ ಕ್ರಮಕ್ಕೆ ಒಳಗಾಗುವಿರಿ ಎಂದು ಎಚ್ಚರಿಕೆ ನೀಡಿದ್ದಾರೆ.

Contact Your\'s Advertisement; 9902492681

ಅಲ್ಲದೇ ಯಾರಿಗಾದರೂ ಆಹಾರ ಧಾನ್ಯಗಳ ಸಮಸ್ಯೆ, ಹಾಗೂ ಬಡ ಜನರಿಗೆ ಊಟದ ಸಮಸ್ಯೆ ಇದ್ದರೇ ನೇರವಾಗಿ ನನ್ನನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿ ಕೊಡಲಾಗುವುದು.ಅದಕ್ಕೆ ಯಾವುದೇ ರೀತಿಯ ಹಿಂಜರಿಕೆ ಹಾಗೂ ಸಂಕೋಚ ಪಡಬೇಡಿ.

ವಿದೇಶದಿಂದ ಬಂದ ವ್ಯಕ್ತಿಗಳು ಕ್ವಾರಂಟೈನ್‌ನಲ್ಲಿ ೧೪ ದಿನ ಇರಲೇಬೇಕು. ಒಂದು ವೇಳೆ ಮನೆಯಲ್ಲಿ ಕುಟುಂಬದವರ ಜತೆ ಇದ್ದರೇ ಕುಟುಂಬಕ್ಕೂ ಅಪಾಯ ತಂದೊಡ್ಡಬಹುದು.ಆದ್ದರಿಂದ ಯಾರಿಗಾರೂ ಮನೆಯಲ್ಲಿ ತೊಂದರೆಯಾಗುತ್ತಿದ್ದರೇ ಅಂತಹವರಿಗೆ ದೇವನ ತೆಗನೂರ ಗ್ರಾಮದ ಹೊರವಲಯದಲ್ಲಿರುವ ಸರಕಾರಿ ಹಾಸ್ಟೇಲ್‌ನಲ್ಲಿ ಇರಲು ಎಲ್ಲಾ ಅವಕಾಶ ಕಲ್ಪಿಸಲಾಗಿದೆ.ಅಲ್ಲಿ ಆರಾಮವಾಗಿ ಇರಬಹುದು.ಇದರಿಂದ ನಿಮ್ಮ ಕುಟುಂಬದವರೂ ತೊಂದರೆ ಇರುವುದಿಲ್ಲ.

ಒಂದು ವೇಳೆ ಕ್ವಾರಂಟೈನ್ ಆದೇಶ ಉಲ್ಲಂಘಿಸಿ ಹೊರಬಂದರೆ ಅವರ ವಿರುದ್ಧ ಕೇಸ್ ದಾಖಲಿಸಲಾಗುವುದು. ಸಾರ್ವಜನಿಕರು ಆದಷ್ಟು ಮಾಸ್ಕ್ ಬಳಸಿ.ಅನಾವಶ್ಯಕವಾಗಿ ಮನೆಯಿಂದ ಹೊರಬರಬೇಡಿ. ಅಅಲ್ಲದೇ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಇದೊಂದೆ ಕರೊನಾ ರೋಗ ಹೊಡೆದೊಡಿಸಲು ಇರುವ ಮಾರ್ಗ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here