ಇ-ಮೀಡಿಯಾ ಲೈನ್ ತನ್ನ ಅವಿಶ್ರಾಂತ ಒಂದು ವರ್ಷ ಪೂರೈಸಿದ್ದಕ್ಕಾಗಿ ಅಭಿನಂದನೆಗಳು, ನೈಜ, ದಿಟ್ಟ ಹಾಗೂ ಅತ್ಯಂತ ವೇಗದಲ್ಲಿ ಸುದ್ದಿಯನ್ನು ಜನರಿಗೆ ತಲುಪಿಸುತ್ತಿರುವ ಹಾಗೂ ಆ ನಿಟ್ಟಿನಲ್ಲಿ ಅವಿಶ್ರಾಂತ ಸೇವೆಯನ್ನು ಸಲ್ಲಿಸುತ್ತಿರುವ ಇ-ಮೀಡಿಯಾ ಲೈನ್ ಕಾರ್ಯವೈಖರಿ ನಿಜಕ್ಕೂ ಶ್ಲಾಘನಿಯ.
ಕೊರೋನಾ ಮಹಾಮಾರಿ ಕುರಿತು ಇಲ್ಲ ಸಲ್ಲದ ಸುದ್ದಿಗಳು ಸಾಮಾಜಿಕ ಮಾಧ್ಯಮವಾದ ವಾಟ್ಸಾಪ್ ಮುಖಾಂತರ ಪ್ರಸಾರವಾಗುತ್ತಿದ್ದು ಸಾಕಷ್ಟು ಜನರಲ್ಲಿ ಆತಂಕ ಮನೆಮಾಡಿತ್ತು. ಈ ಸಂದರ್ಭದಲ್ಲಿ ಕೇವಲ ಇ-ಮೀಡಿಯಾ ಲೈನ್ ಮಾತ್ರ ನೈಜತೆ ಮತ್ತು ಪ್ರಸ್ತುತತೆ ಕುರಿತ ಸುದ್ದಿಯನ್ನು ಭಿತ್ತರಿಸಿ ಜನರಲ್ಲಿ ಮನೆಮಾಡಿದ ಆತಂಕವನ್ನು ಹೋಗಲಾಡಿಸುವ ಹಾಗೂ ಕರೋನಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿರುವುದು ಸಂತಸದ ವಿಷಯ.
ಇಂದು ಬಹಳಷ್ಟು ಜನರ ಕೈಬೆರಳುಗಳು ತಮ್ಮ ಮೊಬಾಯಿಲ್ ನಲ್ಲಿ ಇ-ಮೀಡಿಯಾದ ಹೊಸ ಹೊಸ ಸುದ್ದಿಗಾಗಿ ತಡಕಾಡುತ್ತಿರುವುದು ಇ-ಮೀಡಿಯಾ ಲೈನ್‌ದ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಶಿವರಂಜನ ಸಂತ್ಯಂಪೇಟೆ ಅವರ ಸಾರಥ್ಯದಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ದಾಪುಗಾಲು ಹಾಕುತ್ತಾ ಕೀರ್ತಿಯ ಶಿಖರಕ್ಕೇರುತ್ತಿರುವ ಇ-ಮೀಡಿಯಾ ಲೈನ್ ಜನರ ಮನ ಹಾಗೂ ಮನೆಗಳನ್ನು ಗೆದಿದ್ದು ಮುಂದೆ ಭವಿಷ್ಯದಲ್ಲಿಯೂ ಕೂಡ ಹೆಚ್ಚಿನ ಅಭಿಮಾನಿಗಳನ್ನು ಪಡೆಯಲಿ ಎಂದು ಹಾರೈಸುವೆ.
ಅಶೋಕ ರಾಜೇಂದ್ರ ಪಾಟೀಲ
ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯ, ಕಲಬುರಗಿ