ಶಹಾಬಾದ: ಕೊರೊನಾ ವೈರಸ್ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಅಧಿಸೂಚಿತ ಕ್ಷೇತ್ರ ಸಮಿತಿ ವತಿಯಿಂದ ನಗರದ ಜೆಪಿ ಕಾಲೋನಿ ಹಾಗೂ ಜಿಇ ಕಾಲೋನಿ ವ್ಯಾಪ್ತಿಯಲ್ಲಿ ಕ್ರಿಮಿನಾಶಕ ಔಷಧಿ ಸಿಂಪರಣೆ ಹಾಗೂ ಬ್ಲಿಚಿಂಗ್ ಪೌಡರ್ ಸಿಂಪರಣೆ ಕಾರ್ಯ ನಡೆದಿದೆ.
ಯಾವುದೇ ಕಾರಣಕ್ಕೂ ಕೊರೊನಾ ಸೊಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಕಾಲೋನಿಯಲ್ಲಿ ಕಂಡು ಬರುವ ಕಸವನ್ನು ವಿಲೇವಾರಿ ಮಾಡಿ, ಬ್ಲಿಚಿಂಗ್ ಪೌಡರ್ ಸಿಂಪಡಿಸಲಾಗುತ್ತಿದೆ.
ನಗರಸಭೆಯಿಂದ ಸ್ವಚ್ಛತೆ ಹಾಗೂ ಕ್ರಿಮಿನಾಶಕ ಸಿಂಪರಣೆ ಕಾರ್ಯ ಭರದಿಂದ ನಡೆಯುತ್ತಿದೆ. ಕೊರೊನಾ ವೈರಸ್ ತಡೆಗಟ್ಟಲು ಇದೊಂದೇ ಪರಿಹಾರವಲ್ಲ. ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಅನಾವಶ್ಯವಾಗಿ ಹೊರಗೆ ಬರದೇ ಮನೆಯಲ್ಲಿರುವುದೇ ಈ ರೋಗಕ್ಕೆ ಮದ್ದು ಎಂಬುದನ್ನು ತಿಳಿದುಕೊಳ್ಳಬೇಕು- ಪೀರಶೆಟ್ಟಿ ಅಧಿಕಾರಿಗಳು ಅಧಿಸೂಚಿತ ಕ್ಷೇತ್ರ ಸಮಿತಿ ಶಹಾಬಾದ.
ಸಾರ್ವಜನಿಕರ ಸಲಹೆ ಮೇರೆಗೆ ಚರಂಡಿ ಸ್ವಚ್ಛತೆ ಹಾಗೂ ಔಷಧಿ ಸಿಂಪರಣೆ ಕಾರ್ಯ ಭರದಿಂದ ಸಾಗುತ್ತಿದೆ.ಹ್ಯಾಂಡ್ ಸ್ಪ್ರೇ ಮೂಲಕತಿ ಮನೆಗಳ ಮುಂದೆ, ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಂಪರಣೆ ಮಾಡಲಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಲ್ಲದೇ ಔಷಧ ಸಿಂಪರಣೆ ಹಾಗೂ ಸ್ವಚ್ಛತೆ ಕಾರ್ಯ ಎಡಬಿಡದೇ ನಡೆಯಲಿದ್ದು, ಇದಕ್ಕಾಗಿ ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ.