ಸುರಪುರ: ನಗರದ ವಾರ್ಡ ಸಂಖ್ಯೆ ೨೦ ರ ಹಸನಾಪುರದಲ್ಲಿ ನಗರಸಭೆ ಸದಸ್ಯ ಮಲ್ಲು ಬಿಲ್ಲವ್ ಹಾಗು ಇತರರಿಂದ ಜನರಿಗೆ ಆಹಾರ ಧಾನ್ಯಗಳ ವಿತರಣಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಿಎಸ್‌ಐ ಚೇತನ್ ಜನತೆಗೆ ಆಹಾರ ಧಾನ್ಯಗಳ ವಿತರಿಸಿ ಮಾತನಾಡಿ,ಕೊರೊನಾ ಎಂಬ ವೈರಸ್ ಸಾಂಕ್ರಾಮಿಕವಾಗಿ ಜನರನ್ನು ಕಾಡುತ್ತಿದ್ದು ತಾವ್ಯಾರು ಮನೆಯಿಂದ ಹೊರ ಬರದೆ ಜನತಾ ಕರ್ಫ್ಯೂಗೆ ಸಹಕರಿಸಿ,ದಿನಸಿ ತರಕಾರಿ ಏನಾದರು ತರುವುದಿದ್ದರೆ ಒಬ್ಬರೆ ಹೋಗಿ ಬನ್ನಿ,ಹೆಚ್ಚು ಸಮಯ ಹೊರಗೆ ಇರದೆ ನಿಮ್ಮ ಮನೆಗಳಲ್ಲಿ ಇರುವ ಮೂಲಕ ಕೊರೊನಾ ಬರುವುದನ್ನು ತಡೆಯುವಂತೆ ತಿಳಿಸಿದರು.ನಿಮ್ಮ ಮನೆಯಲ್ಲಿನ ಯುವಕರು ಅನಾವಶ್ಯಕವಾಗಿ ಹೊರಗೆ ತಿರುಗಾಡಲು ಬಿಡಬೇಡಿ,ಒಂದುವೇಳೆ ಅವರು ತಿರುಗಾಡುವಾಗ ಅವರಾಗಲಿ ಅವರ ಬೈಕ್‌ಗಳಾಗಲಿ ಸಿಕ್ಕರೆ ಕೇಸು ದಾಖಲಿಸುವುದಾಗಿ ಎಚ್ಚರಿಸಿದರು.
ಕಾರ್ಯಕ್ರಮ ಆಯೊಜಿಸಿದ್ದ ನಗರಸಭೆ ವಾರ್ಡ್ ಸದಸ್ಯ ಮಲ್ಲು ಬಿಲ್ಲವ್ ಮಾತನಾಡಿ,ನೀವೆಲ್ಲರು ಚೆನ್ನಾಗಿರಬೇಕೆಂದು ಪೊಲೀಸರು ವೈದ್ಯರು ಮತ್ತು ಅಂಗನವಾಡಿ ಆಶಾ ಕಾರ್ಯಕರ್ತೆಯರು ಹಗಲಿರಳು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.ಇದನ್ನು ಅರಿತುಕೊಂಡು ಯಾರು ಮನೆಯಿಂದ ಹೊರಗೆ ಹೋಗದೆ ಮನೆಯಲ್ಲಿರಿ.ಅಂದಾಗ ಕೊರೊನಾ ಮಾಹಾಮಾರಿ ಬರುವುದನ್ನು ತಡೆಯಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡ ಮಲ್ಲಿಕಾರ್ಜುನ ಬಿಲ್ಲವ್,ದೇವಿಂದ್ರಪ್ಪ ಸೂಗುರ,ಅಂಗನವಾಡು ಕಾರ್ಯಕರ್ತೆ ಮಾಲಾಶ್ರಿ ಬಿಲ್ಲವ್,ಆಶಾ ಕಾರ್ಯಕರ್ತೆ ಶಾಂತಮ್ಮ,ಬಸವರಾಜ ಹೊಸ್ಮನಿ,ಭೀಮಣ್ಣ ಲಾರಾ,ಮಹೇಶ ಉಲ್ಪೇನರ್,ಶಿವಪ್ಪ ಉಲ್ಪೇನರ್,ಶಾಂತಪ್ಪ ಸೂಗುರ,ಆನಂದ ಝಂಡದಕೇರಾ,ರಮೀಜ್ ವಾಟರ್ ಸಪ್ಲೈರ್ ಸೇರಿದಂತೆ ಅನೇಕರಿದ್ದರು.