ಶಹಾಬಾದ: ಕಾನೂನು ಉಲ್ಲಂಘಿಸಿ ರಸ್ತೆಯ ಮೇಲೆ ಬರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಶಾಸಕ ಬಸವರಾಜ ಮತ್ತಿಮುಡ ಪೊಲೀಸರಿಗೆ ಖಡಕ್ ಸಂದೇಶ ನೀಡಿದರು.
ಅವರು ನಗರಕ್ಕೆ ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳ ಮಾಹಿತಿ ಪಡೆಯಲು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದರು. ನಗರದಲ್ಲಿ ಕರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಮಾಡಿದರೂ, ಸಹ ರಸ್ತೆಯ ಮೇಲೆ ಜನ ಓಡಾಡುವದು, ದ್ವಿಚಕ್ರ ವಾಹನದಲ್ಲಿ ಓಡಾಡುವದು ಕಂಡು ಬಂದರೆ ಕ್ರಿಮಿನಲ್ ಕೇಸ್ ಹಾಕಿ ಎಂದು ಪೊಲೀಸ್ ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದರು.
ಇಂತಹ ಯಾವುದೆ ಕಾನೂನು ಉಲ್ಲಂಘಿಸುತ್ತಿರುವವರಿಗೆ ಮೊದಲು ತಿಳಿ ಹೇಳಿ, ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಿ. ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಿ ಎಂದು ಪೊಲೀಸರಿಗೆ ಹೇಳಿದರು. ಪೌರಾಯುಕ್ತ ವೆಂಕಟೇಶ, ಪಿಐ ಬಿ.ಅಮರೇಶ, ಪಿಎಸ್‌ಐ ಮಹಾಂತೇಶ ಪಾಟೀಲ, ನಾಗರಾಜ ಮೇಲಗಿರಿ ಇದ್ದರು.